ತಮಿಳು ನಾಡಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಗೂಳಿ ಪಳಗಿಸುವ ಜಲ್ಲಿಕಟ್ಟು ಕೇವಲ ಅಪ್ಪಟ ದೇಸಿ ಕ್ರೀಡೆಯಷ್ಟೇ ಮಾತ್ರವಲ್ಲ, ಗ್ರಾಮೀಣ ಭಾಗದ ದೊಡ್ಡ ಆರ್ಥಿಕತೆಯ ಮೂಲವೂ ಕೂಡ ಹೌದು. ಸಂಕ್ರಾತಿ ಅಂದರೆ ರೈತರ, ಗೂಳಿಗಳ ಮಾಲೀಕರಲ್ಲಿ ಒಂದು ರೀತಿಯಾ ಪುಳಕ.
ಒಂದು ವರ್ಷದಿಂದ ಸನ್ನದ್ಧವಾಗುವ ಹೋರಿಗಳ ರೋಮಾಂಚನಕಾರಿ ಕಾಳಗವೊಂದು ಏರ್ಪಡುವುದರ ಜತೆಗೆ ಸಂಪ್ರದಾಯವೊಂದು ಅನಾವರಣಗೊಳ್ಳುತ್ತದೆ. ತಮಿಳುನಾಡಿನಲ್ಲಿ ಸಂಕ್ರಾಂತಿ ಅಥವಾ ಪೊಂಗಲ್ ಮೂರು ದಿನಗಳ ಆಚರಣೆಯಾಗಿದ್ದು, ಎರಡನೇ ದಿನ ಜಲ್ಲಿಕಟ್ಟು ನಡೆಯುತ್ತದೆ.
ಹೌದು ಯಾವುದೇ ರೀತಿಯಾ ಆಯುಧಗಳನ್ನು ಬಳಸದೆ, ಹುಚ್ಚೆದ್ದು ಓಡುವ ಹೋರಿಯನ್ನು ಮುಂದಕ್ಕೆ ಹೋಗದಂತೆ ತಡೆಯುವುದೇ ಈ ಸ್ಪರ್ಧೆಯಾಗಿದೆ. ಹಿಂದೆ ಹೋರಿಗಳ ಕುತ್ತಿಗೆಗೆ ಬೆಲೆಬಾಳುವ ವಸ್ತು ಅಥವಾ ಸರ ಕಟ್ಟಿ ಬಯಲಲ್ಲಿ ಬಿಡುತ್ತಿದ್ದರಂತೆ.
ಓಡುವ ಗೂಳಿಯನ್ನು ಹಿಡಿದು ಅದರ ಕುತ್ತಿಗೆಯಲ್ಲಿರುವ ಬೆಲೆ ಬಾಳುವ ವಸ್ತುವನ್ನು ಕಸಿದು ತರುವವರನ್ನು ಸ್ಪರ್ಧೆ ವಿಜೇತರಾಗಿ ಘೋಷಿಸಲಾಗುತ್ತಿತ್ತು ಎಂದು ಹೇಳಿತ್ತದೆ ಇತಿಹಾಸ. ಯಾವುದು ಮುಂದೆ ಸಾಗಲು ವಿಫಲವಾಗುತ್ತದೋ ಅದರ ವಂಶವಾಹಿ ಮುಂದುವರಿಯಲು ಅರ್ಹವಲ್ಲ, ಅದು ದುರ್ಬಲ ಎಂದು ನಿರ್ಧರಿಸಲಾಗುತ್ತದೆ.ಇದೀಗ ಅದೇ ರೀತಿಯ ವಿಡಿಯೋ ನೋಡಿ.