ವಾರ್ತಾ ಮಂಜರಿ
Trending Stories, Viral News, Gossips & Everything in Kannada

ನಡೆದೇ ಹೋಯ್ತು ಆನೆಯಿಂದ ಊಹಿಸದ ಘಟನೆ…ನೋಡಿ ವಿಡಿಯೋ

7,806
Join WhatsApp
Google News
Join Telegram
Join Instagram

ಆಧುನಿಕ ಯುಗದಲ್ಲಿ ಮನುಷ್ಯ ಜೀವಿಗೆ ಜೀವ ಜಂತುಗಳಲ್ಲಿ ವನ್ಯ ಪ್ರಾಣಿಗಳು ಎಂದರೆ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದಾರೆ. ಇದಕ್ಕೆ ಕಾರಣವೂ ಇದೆ. ದಿನ ಕಳೆದಂತೆ ಅರಣ್ಯದ ಪ್ರಮಾಣ ಕಡಿಮೆಯಾಗುತ್ತಿದ್ದು, ವನ್ಯ ಜೀವಿಗಳು ಕಣ್ಮರೆಯಾಗುತ್ತಿವೆ‌.‌

ಇಂದಿನ ಮಕ್ಕಳು ಪ್ರಾಣಿಗಳನ್ನು ನೋಡಬೇಕೆನಿಸಿದರೆ ಸಂಗ್ರಹಾಲಯಗಳಲ್ಲಿ, ಅಭಯಾರಣ್ಯಗಳಲ್ಲಿ ಅಥವಾ ರಾಷ್ಟ್ರೀಯ ಉದ್ಯಾನಗಳಲ್ಲಿ ಮಾತ್ರ ನೋಡಲು ಸಾಧ್ಯವಾಗಿದೆ. ಆದುದರಿಂದಲೇ ಈ ರೀತಿಯಾದ ವನ್ಯ ಜೀವಿಗಳ ಕುರಿತಾದ ಹಲವಾರು ಸಂಗತಿಗಳ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವಾಗ ಸಹಜವಾಗಿಯೇ ಆ ವಿಡಿಯೋಗಳು ಪ್ರತಿಯೊಬ್ಬರ ಗಮನ ಸೆಳೆಯುತ್ತವೆ‌. ಆ ಜೀವಿಗಳ ಸಾಹಸಮಯ ಜೀವನವನ್ನು ನೋಡಿದಾಗ ಅದ್ಭುತ ಎನಿಸುವ ಜೊತೆಗೆ ಅವುಗಳ ನಮಗೆ ತಿಳಿಯದ ಅದೆಷ್ಟೋ ವಿಷಯಗಳು ಕೂಡಾ ತಿಳಿದು ಬರುತ್ತವೆ.

ವನ್ಯ ಜೀವಿಗಳಲ್ಲಿ ಆನೆ ಕಂಡರೆ ಸಾಕಷ್ಟು ಜನರಿಗೆ ಪ್ರೀತಿ ಅಂತಾನೆ ಹೇಳಬಹುದು. ಅದರಲ್ಲೂ ನಮ್ಮ ದೇಶದಲ್ಲಿ ಆನೆಗೆಪೂಜನೀಯ ಸ್ಥಾನವನ್ನು ನೀಡಲಾಗಿದ್ದು, ದೊಡ್ಡ ದೊಡ್ಡ ದೇವಾಲಯಗಳಲ್ಲಿ ಆನೆಗಳನ್ನು ಸಾಕಿರುವುದನ್ನು ನಾವು ನೋಡಿದ್ದೇವೆ. ದೇವರ ದರುಶನ ಪಡೆಯಲು ದೇವಾಲಯಕ್ಕೆ ತೆರಳುವ ಭಕ್ತರು ಅಲ್ಲಿರುವ ಆನೆಗೆ ಹಣ್ಣನ್ನು ನೀಡಿ ಅದರ ಆಶೀರ್ವಾದ ಕೂಡಾ ಪಡೆಯುತ್ತಾರೆ‌. ಇದೀಗಆನೆ ಮಾಡಿದ ಯಡವಟ್ಟು ನೋಡಿ.