ವಾರ್ತಾ ಮಂಜರಿ
Trending Stories, Viral News, Gossips & Everything in Kannada

ದುಬೈನಲ್ಲಿ ಕುಟುಂಬದ ಜೊತೆ ಯಶ್ ಊಟ…ಚಿಂದಿ ವಿಡಿಯೋ

812

ರಾಕಿಂಗ್ ಸ್ಟಾರ್ ಯಶ್ ರವರು ಜನವರಿ 8ರಂದು 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ಸ್ಟಾರ್ ಪಟ್ಟ ಸಿಕ್ಕಲ್ಲಿಂದ ಯಶ್ ತಮ್ಮ ಹುಟ್ಟುಹಬ್ಬವನ್ನು ತಮ್ಮ ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ. ಹೌದು ಆದರ ಕೊರೊನಾ ಹಾವಳಿಯಿಂದಾಗಿ ಅಭಿಮಾನಿಗಳ ಆರೋಗ್ಯ ದೃಷ್ಟಿಯಿಂದ ಮಾಸ್ ಬರ್ತ್‌ಡೇಗೆ ಬ್ರೇಕ್ ಹಾಕಿದ್ದು ಸದ್ಯ ಈ ವೇಳೆ ತಮ್ಮ ಕುಟುಂಬದೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ನಿರ್ಧರಿಸಿದ್ದರು.

ಇನ್ನು ಕೊರೊನಾ ಕಡಿಮೆಯಾದ ಬೆನ್ನಲ್ಲೇ ಈ ಬಾರಿಯಾದರೂ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಹೌದು ಆದರೆ ಈ ಬಾರಿ ಕೂಡ ಬರ್ತ್‌ಡೇಯನ್ನು ವಿದೇಶದಲ್ಲಿಯೇ ಆಚರಿಸಿಕೊಳ್ಳುವುದಕ್ಕೆ ನಿರ್ಧರಿಸಿದ್ದಾರೆ ಯಶ್.

ಹೌದು ಈ ಸಂಬಂಧ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಮಕ್ಕಳೊಂದಿಗೆ ದುಬೈಗೆ ಪಯಣ ಬೆಳೆಸಿದ್ದಾರೆ ಎನ್ನಲಾಗಿದ್ದು ಏರ್‌ಪೋರ್ಟ್‌ನಲ್ಲಿ ಯಶ್ ದಂಪತಿ ಕ್ಯಾಮರಾಗೆ ಸೆರೆ ಸಿಕ್ಕಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ. ರಾಕಿ ಭಾಯ್ ಅಭಿಮಾನಿಗಳು ಯಶ್ ಹುಟ್ಟುಹಬ್ಬದ ಶುಭಾಶಯಗಳನ್ನು ಕೊರುತ್ತಿದ್ದಾರೆ.
ಇನ್ನು ಇದು ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರಿಗೂ ಹೊಸ ವರ್ಷದ ಮೊದಲ ಪ್ರವಾಸವಾಗಿದ್ದು 2023ರಲ್ಲಿ ಯಶ್ ಹುಟ್ಟುಹಬ್ಬದ ನೆಪದಲ್ಲಿ ದುಬೈಗೆ ಹೋಗಿದ್ದಾರೆ. ಹೌದು ಒಂದಿಷ್ಟು ದಿನ ಮಗಳು ಐರಾ ಹಾಗೂ ಮಗ ಯಥರ್ವ್ ಜೊತೆ ಯಶ್ ಹಾಗೂ ರಾಧಿಕಾ ಪಂಡಿತ್ ಕಾಲ ಕಳೆಯಲಿದ್ದಾರೆ.

ಇನ್ನು ಕುಟುಂಬದ ಜೊತೆ ಜೊತೆಗೆ ಕೆಲವು ಕಾರ್ಯಕ್ರಮಗಳಲ್ಲೂ ಯಶ್ ಭಾಗಿಯಾಗುತ್ತಿದ್ದಾರೆ ಎನ್ನಲಾಗಿದ್ದು ಇತ್ತೀಚೆಗೆ ಸೌದಿ ಅರೇಬಿಯಾ ವಿಶ್ವದಾದ್ಯಂತ ಸೆಲೆಬ್ರೆಟಿಗಳನ್ನು ಸೆಳೆಯುತ್ತಿದೆ.ಪ್ರವಾಸೋದ್ಯಮವನ್ನು ಬೆಳೆಸುವ ಸಲುವಾಗಿ ಸೆಲೆಬ್ರೆಟಿಗಳಿಗೆ ರೆಡ್ ಕಾರ್ಪೆಟ್ ಹಾಸಿ ಸ್ವಾಗತ ಕೋರುತ್ತಿದ್ದು ಈ ಬೆನ್ನಲ್ಲೇ ಯಶ್ ಅಂತಹ ಕಾರ್ಯಕ್ರಮಗಳಲ್ಲಿ ಏನಾದರೂ ಭಾಗಿಯಾಗಬಹುದಾ? ಎಂದು ನಿರೀಕ್ಷೆ ಮಾಡಲಾಗುತ್ತಿದೆ.

ಇನ್ನು ಹಿಂದಿನ ವರ್ಷದ ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರೂ ಮಾಲ್ಡೀವ್ಸ್ ಪ್ರವಾಸ ಮಾಡಿದ್ದರು. ಕೆಜಿಎಫ್ 2 ಸಿನಿಮಾ ಬಿಡುಗಡೆಗೂ ಮುನ್ನ ಬ್ಯುಸಿಯಾಗಿದ್ದರೂ ಹುಟ್ಟುಹಬ್ಬದ ಸಂದರ್ಭದಲ್ಲಿ ಪತ್ನಿಯೊಂದಿಗೆ ಪ್ರವಾಸ ಮಾಡುವುದನ್ನು ಮರೆತಿರಲಿಲ್ಲ. ಈ ಬಾರಿ ದುಬೈ ಪ್ರವಾಸದಲ್ಲಿದ್ದು ಹೊಸ ಸಿನಿಮಾ ಅನೌನ್ಸ್ ಮಾಡುತ್ತಾರೆಂಬ ಆಸೆ ನಿರಾಸೆಯಾಗಿದೆ. ಆದರೆ ದುಬೈನಿಂದ ಮರಳುತ್ತಿದ್ದಂತೆ ಹೊಸ ಸಿನಿಮಾ ಬಗ್ಗೆ ಸುಳಿವು ನೀಡಬಹುದು ಎಂದೂ ನಿರೀಕ್ಷೆ ಮಾಡಲಾಗುತ್ತಿದೆ. ಯಶ್ ದಂಪತಿಯ ದುಬೈ ಪ್ರವಾಸ ಹೇಗಿದೆ ಗೊತ್ತಾ? ಕೆಳಗಿನ ವಿಡಿಯೋ ನೋಡಿ.