ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮೊಸಳೆ ತಂಟೆಗೆ ಹೋದ ಚಿರತೆಗೆ ಏನಾಯ್ತು ನೋಡಿ…ಚಿಂದಿ ವಿಡಿಯೋ

43,077

ವನ್ಯಜೀವಿಗಳದ್ದು ಸದಾ ಎಲ್ಲರಲ್ಲೂ ಕುತೂಹಲ ಮೂಡಿಸುವಂತಹ ಲೋಕ. ಹೌದು ಈ ಪ್ರಾಣಿಗಳ ಜೀವನ ಕ್ರಮ ಕ್ಷಣ ಕ್ಷಣಕ್ಕೂ ಎಲ್ಲರಲ್ಲೂ ಬೆರಗು ಮೂಡಿಸುತ್ತದೆ. ಇದೇ ಕಾರಣಕ್ಕೆ ವನ್ಯಜೀವಿಗಳನ್ನು ನೋಡಲು ಜನರು ತುಂಬಾ ಆಸಕ್ತಿ ವಹಿಸುತ್ತಾರೆ. ಹೀಗೆ ಆಸಕ್ತಿಯಿಂದ ವನ್ಯಲೋಕವನ್ನು ನೋಡುವಾಗ ಒಂದಷ್ಟು ಅಪರೂಪದ ಘಟನೆಗಳೂ ಕಾಣಸಿಗುತ್ತವೆ. ಇಂತಹ ಅಪರೂಪದ ದೃಶ್ಯಗಳು ಆಗಾಗ ಸಾಮಾಜಿಕ ಜಾಲತಾಣದಲ್ಲೂ ಎಲ್ಲರ ಗಮನ ಸೆಳೆಯುತ್ತವೆ.

ಬೇಟೆ ಎಂಬುದು ಪ್ರಾಣಿಗಳ ಆಹಾರ ಕ್ರಮವಾಗಿದ್ದು ಒಂದು ಪ್ರಾಣಿಯನ್ನು ತಿಂದು ಮತ್ತೊಂದು ಪ್ರಾಣಿ ಬದುಕುವುದು ಕಾಡಿನ ಆಹಾರ ಚಕ್ರ ಮತ್ತು ಸಹಜ ಜೀವನ ಪದ್ಧತಿ. ಹೊಂಚು ಹಾಕಿ ಬೇಟೆಯಾಡುವುದರಲ್ಲಿ ಅದೆಷ್ಟೋ ಪ್ರಾಣಿಗಳು ಪಳಗಿರುತ್ತವೆ. ಕೆಲ ಜೀವಿಗಳ ಬೇಟೆಯ ಚಾಕಚಕ್ಯತೆಯನ್ನು ನೋಡಿದಾಗಲೇ ದಿಗಿಲಾಗುತ್ತದೆ. ಅದರಲ್ಲೂ ಮೊಸಳೆಯ ಬೇಟೆಯಂತು ನಿಜಕ್ಕೂ ಮೈಯಲ್ಲಿ ಬೆವರಿಳಿಸುತ್ತದೆ.

ಹೌದು ಈಗಿರುವ ಬೇರೆಲ್ಲ ಪ್ರಾಣಿಗಳಿಗಿಂತ ಮೊಸಳೆ ತುಂಬ ಗಟ್ಟಿಯಾಗಿ ಕಚ್ಚುತ್ತದೆ ಎಂದೇ ಹೇಳಲಾಗುತ್ತಿದ್ದು ಅದಕ್ಕೆ ಸಿಕ್ಕ ಬೇಟೆ ಮನುಷ್ಯನೇ ಆಗರಲಿ ಕಂಡಿತ ಬಿಡುವುದಿಲ್ಲ. ಉದಾಹರಣೆಗೆ ಆಸ್ಟ್ರೇಲಿಯಾದ ಉಪ್ಪು ನೀರಿನಲ್ಲಿ ಕಂಡುಬರುವ ಮೊಸಳೆಯುಹುಲಿ ಅಥವಾ ಸಿಂಹಕ್ಕಿಂತ ಮೂರು ಪಟ್ಟು ಹೆಚ್ಚು ಗಟ್ಟಿಯಾಗಿ ಕಚ್ಚುತ್ತದೆ ಎಂದೇ ಹೇಳಲಾಗುತ್ತದೆ. ಇಷ್ಟು ಬಲಶಾಲಿಯಾಗಿದ್ದರೂ ಮೊಸಳೆಯ ದವಡೆ ಸ್ಪರ್ಶವನ್ನು ಗ್ರಹಿಸುವ ಸಾಮರ್ಥ್ಯವನ್ನೂ ಕೂಡ ಹೊಂದಿದೆ ಎಂಬುದು ಆಸಕ್ತಿದಾಯಕ. ಈ ಸಾಮರ್ಥ್ಯ ಮಾನವನ ಬೆರಳ ತುದಿಗಿಂತಲೂ ಮೊಸಳೆಯಲ್ಲಿ ಹೆಚ್ಚಿದೆ. ಲೋಹಕ್ಕಿಂತ ಗಟ್ಟಿಮುಟ್ಟಾದ ಚರ್ಮವನ್ನು ಹೊಂದಿರುವ ಮೊಸಳೆಗೆ ಇಷ್ಟು ಸೂಕ್ಷ್ಮತೆಯೂ ಇರಲು ಹೇಗೆ ಸಾಧ್ಯ ಗೊತ್ತೆ?

ಮೊಸಳೆಯ ದವಡೆಯಲ್ಲಿ ಸಾವಿರಾರು ನರಗಳಿರುತ್ತವೆ ಈ ನರಗಳ ಬಗ್ಗೆ ಸಂಶೋಧನೆ ಮಾಡಿದ ಸಂಶೋಧಕ ಡಂಕನ್‌ ಲೀಚ್‌ ರವರು ಪ್ರತಿಯೊಂದು ನರಗಳು ಮೊಸಳೆಯ ತಲೆಬುರುಡೆಯ ರಂಧ್ರಗಳ ಮೂಲಕ ಮೆದುಳಿನ ಸಂಪರ್ಕದಲ್ಲಿರುತ್ತವೆ. ಈ ರೀತಿಯ ರಚನೆಯಿಂದಾಗಿ ದವಡೆಗಳಲ್ಲಿರುವ ನರಗಳಿಗೆ ಸ್ಪರ್ಶವನ್ನು ಗ್ರಹಿಸುವ ಸಾಮರ್ಥ್ಯವಿರುತ್ತದೆ. ದವಡೆಯ ಕೆಲವು ಭಾಗಗಳಲ್ಲಿ ಎಷ್ಟು ಸೂಕ್ಷ್ಮತೆ ಇರುತ್ತದೆಂದರೆ ಯಾವುದೇ ಸಾಧನಗಳಿಂದಲೂ ಅದನ್ನು ಅಳೆಯಲು ಸಾಧ್ಯವಿಲ್ಲ.

ಇದರಿಂದಾಗಿ ಮೊಸಳೆಗೆ ತನ್ನ ಬಾಯಲ್ಲಿರುವುದು ಆಹಾರನಾ ಅಥವಾ ಕಸನಾ ಎಂದು ಕಂಡುಹಿಡಿಯಲು ಸಾಧ್ಯವಾಗುತ್ತದೆ. ತಾಯಿ ಮೊಸಳೆ ತನ್ನ ಮರಿಗಳನ್ನು ಬಾಯಲ್ಲಿ ಇಟ್ಟುಕೊಂಡಿರುವಾಗ ಅಪ್ಪಿತಪ್ಪಿಯೂ ಕಚ್ಚುವುದಿಲ್ಲ. ಮೊಸಳೆ ಶಕ್ತಿಗೂ ಸೈ ಸೂಕ್ಷ್ಮತೆಗೂ ಸೈ ಎನ್ನಬಹುದು. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು ಮೊಸಳೆ ಗೊಂಪೊಂದು ಚಿರತೆ ಮೇಲೆ ದಾಳಿ ಮಾಡಿವೆ.. ಇಲ್ಲಿ ಹಸಿವು ನೋಗಿಸಿಕೊಂಡಿದ್ದು ಯಾರು ಗೊತ್ತಾ? ಕೆಳಗಿನ ವಿಡಿಯೋ ನೋಡಿ.