ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಸ್ತೆಯಲ್ಲಿ ಡಾನ್ಸ್ ಮಾಡಿದ ದಿಯಾ ಹೆಗ್ಡೆ…ಚಿಂದಿ ವಿಡಿಯೋ

76,880

ಸದ್ಯ ಈಗ ಕನ್ನಡ ಕಿರುತೆರೆಯು ಮನರಂಜನೆ ವಿಷಯದಲ್ಲಿ ಬಹಳ ಮುಂದುವರೆದಿದೆ ಎನ್ನಬಹುದು. ಎಲ್ಲಾ ವಾಹಿನಿಗಳ ನಡುವೆ ಪ್ರೇಕ್ಷಕರಿಗೆ ಮನೋರಂಜನೆ ಕೊಡುವ ವಿಷಯದಲ್ಲಿ ಬೃಹತ್ ಕಾಂಪಿಟೇಶನ್ ಕೂಡ ಏರ್ಪಟ್ಟಿದ್ದು ಪ್ರತಿಯೊಂದು ವಾಹಿನಿ ಕೂಡ ವಿಶೇಷ ಕಾರ್ಯಕ್ರಮಗಳು ರಿಯಾಲಿಟಿ ಶೋಗಳು ಸಿಂಗಿಗ್ ಶೋಗಳು ಡ್ಯಾನ್ಸಿಂಗ್ ಶೋಗಳು ಧಾರಾವಾಹಿಗಳು ಈ ರೀತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ತಮ್ಮತ್ತ ಸೆಳೆದು ಟಿಆರ್‌ಪಿ ಹೆಚ್ಚು ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ.

ಹೌದು ಪ್ರೇಕ್ಷಕರು ಸಹ ವಾರಾಂತ್ಯದಲ್ಲಿ ಬರುವ ರಿಯಾಲಿಟಿ ಶೋಗಳಿಗೆ ಮಾರುಹೋಗಿದ್ದು ಈ ಕಾರ್ಯಕ್ರಮಗಳನ್ನು ನೋಡುವ ಸಲುವಾಗಿಯೇ ವಾರಪೂರ್ತಿ ಕಾಯುತ್ತಿರುತ್ತಾರೆ. ಹೌದು ಇಂತಹ ಕಾರ್ಯಕ್ರಮಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸಿಂಗಿಂಗ್ ಶೋ ಕೂಡ ಒಂದಾಗಿದ್ದು ಕನ್ನಡದ ಜನಪ್ರಿಯ ಕಾರ್ಯಕ್ರಮಗಳಲ್ಲಿ ಇದೂ ಕೂಡ ಒಂದು.

ಇದುವರೆಗೆ ಅನೇಕರಿಗೆ ಬದುಕು ಕಟ್ಟಿಕೊಟ್ಟಿರುವ ಈ ಸಿಂಗಿಂಗ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದ ಹಲವಾರು ಕಂಟೆಸ್ಟೆಂಟ್ಗಳು ಸಿನಿಮಾಗಳಲ್ಲಿ ಹಾಡುವ ಅವಕಾಶಗಳನ್ನು ಪಡೆದುಕೊಂಡಿದ್ದಾರೆ ಹಾಗೂ ತಮ್ಮದೇ ಆಲ್ಬಮ್ ಸಾಂಗ್ ಗಳನ್ನು ಮಾಡಿ ಫೇಮಸ್ ಆಗಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳ ಪ್ರತಿಭೆಯನ್ನು ಕೂಡ ಗುರುತಿಸುವ ಕೆಲಸ ನಡೆದಿದ್ದು ಒಂದು ಸೀಸನ್ ನಲ್ಲಿ ಲಿಟಲ್ ಚಾಂಪ್ಸ್ಗಳಿಗಾಗಿ ಕಾರ್ಯಕ್ರಮ ಮಾಡಿ ಮತ್ತೊಂದು ಸೀಸನ್ ನಲ್ಲಿ ಚಾಂಪಿಯನ್ಸ್ ಗಾಗಿ ಕಾರ್ಯಕ್ರಮ ನಡೆಸಲಾಗುತ್ತದೆ. ಹೌದು ಈ ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮದಲ್ಲಿ ಮುದ್ದಾದ ಮಕ್ಕಳ ಹಾಡುಗಾರಿಕೆ ಕೇಳುವುದೇ ಒಂದು ಚೆಂದ ಎನ್ನಬಹುದು. ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿ ವಿಶೇಷವಾಗಿ ತಮ್ಮ ಕಂಠಸಿರಿಯಿಂದ ನೆರೆದಿರುವವರ ಜೊತೆ ಪ್ರೇಕ್ಷಕರ ಮನವನ್ನು ಕೂಡ ಮುದಗೊಳಿಸುತ್ತಾರೆ.

ಸದ್ಯ ಈಗಿನ 19ನೇ ಸೀಸನ್ ಅಲ್ಲಿ ಉತ್ತರ ಕರ್ನಾಟಕ ಶೈಲಿಯ ಗಿಚ್ಚಗಿಲಿಗಿಲಿ ಹಾಡು ಒಂದಕ್ಕೆ ತನ್ನದೇ ಆದ ಲಿರಿಕ್ಸ್ ಸೇರಿಸಿ ಹಾಡು ಹೇಳಿದ ದಿಯಾ ಹೆಗಡೆ ಎನ್ನುವ ಪುಟ್ಟ ಬಾಲಕಿಯ ಆ ಹಾಡಿನ ವಿಡಿಯೋ ಬಹಳ ವೈರಲ್ ಆಗಿದ್ದು ಈಗ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ನೆಟ್ಟಿಗರೂ ಕೂಡ ದಿಯಾ ಹೆಗಡೆ ಟ್ಯಾಲೆಂಟ್ ಮತ್ತು ಆಕೆಯ ಕಂಠದ ಬಗ್ಗೆ ಹಾಡಿಹೋಗುತ್ತಿದ್ದಾರೆ.

ಹಾಡು ಶುರುವಾಗುತ್ತಿದ್ದಂತೆ ತನ್ನ ಎಕ್ಸ್ಪ್ರೆಶನ್ ಗಳನ್ನು ಸೇರಿಸಿ ಹಾಡಿಗೆ ಮತ್ತಷ್ಟು ಸೊಬಗು ಬರಿಸಿ ಹಾಡಿರುವ ಈ ಜನಪದ ಹಾಡಿನ ಶೈಲಿ ಹಾಗೂ ಲಿರಿಕ್ಸ್ ಗೆ ಜಡ್ಜಸ್ ಗಳು ಮತ್ತು ಮೆಂಟರ್ ನಂದಿತಾ ಹಾಗೂ ನಿರೂಪಕಿ ಅನುಶ್ರೀ ಕೂಡ ಆಶ್ಚರ್ಯ ಚಕಿತರಾಗಿದ್ದಾರೆ. ನಾ ಮುದುಕಿ ಆದರೆ ಏನಂತ ಇನ್ನೂ ಇರಾಕಿ ನನ್ನ ಮಗನ ಮಗನ ಮಗನ ಮದುವೆ ಮಾಡಾಕಿ ಎಂದು ಹಾಡು ಶುರು ಮಾಡಿದ ಪುಟಾಣಿ ಹಾಡಿನ ಮಧ್ಯೆ ತನ್ನ ಸೊಸೆ ಹೇಗಿರಬೇಕು ಗೊತ್ತಾ ಎನ್ನುವುದನ್ನು ಸೊಸೆ ತರುವ ಬಗ್ಗೆ ಒಬ್ಬ ಅತ್ತೆಗೆ ಇರುವ ನಿರೀಕ್ಷೆ ಎಲ್ಲವನ್ನು ಸೇರಿಸಿ ಹಾಡಿದ್ದರು.

ತನ್ನ ಸೊಸೆ ಅನುಶ್ರೀಯೆಂದು ಹೇಳಿರುವ ದಿಯಾ ಹೆಗಡೆ ಅನುಶ್ರೀಯನ್ನು ಸೊಸೆ ಮಾಡಿಕೊಳ್ಳಲು ಕಾರಣವನ್ನು ಕೂಡ ಹಾಡಿಗೆ ಸೇರಿಸಿದ್ದರು. ಹೌದು ಅನುಶ್ರೀ ಚಂದದ ನಗೆ ಬೀರುವಾಕಿ ಮಕ್ಕಳನ್ನು ಮುದ್ದು ಮಾಡುವಾಕಿ ಎಂದು ಹಾಡು ಕಟ್ಟಿ ಹಾಡಿರುವ ಅವರ ಹಾಡಿಗೆ ಅನುಶ್ರೀ ನಾಚಿ ನೀರಾಗಿದ್ದಾರೆ ಮತ್ತು ಬಹಳ ಸಂತೋಷಪಟ್ಟಿದ್ದರು.

ನಾನು ಸೊಸೆ ಆಗುತ್ತೇನೆ ಮಗ ಯಾರು ಎಂದು ಕೇಳಿದಾಗ ನನ್ನ ಮಗ ಬಹಳ ಚೆನ್ನಾಗಿದ್ದಾನೆ ಒಳ್ಳೆ ಮ್ಯೂಸಿಕ್ ಮಾಡುತ್ತೇನೆ ಎಂದು ಅರ್ಜುನ್ ಜನ್ಯಾ ಕಡೆ ನೋಡಿ ಗೇಲಿ ಕೂಡ ಮಾಡಿದ್ದಾಳೆ ಈ ಪುಟ್ಟ ಬಾಲೆ. ಹಾಡು ಎಲ್ಲೆಡೆ ವೈರಲ್ ಆಗಿದ್ದು ಇವರ ಟ್ಯಾಲೆಂಟ್ ನೋಡಿ ಎಲ್ಲಾ ಬೆರಗಾಗಿದ್ದಾರೆ. ನಂತರ ಶಿವಣ್ಣ ಕುವೆಂಪು ಹಾಗೂ ಅಪ್ಪು ಬಗ್ಗೆ ಕೂಡ ಸಾಂಗ್ ಮಾಡಿ ಎಲ್ಲರ ಮನ ಗೆದ್ದಿದ್ದ ದಿಯಾಳ ಮತ್ತೊಂದು ವಿಡಿಯೋ ಯೂಟ್ಯೂಬ್ ನಲ್ಲಿ ವೈರಲ್ ಆಗುತ್ತಿದ್ದು ಇಲ್ಲಿ ದಿಯಾ ಊರಿನ ಚೆಲುವೆ ಬಗ್ಗೆ ಹೇಗೆ ಹಾಡು ಕಟ್ಟಿದ್ದಾಳೆ ನೀವೆ ನೋಡಿ.