ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರೊನಾಲ್ಡೊ ಹೊಡೆದ ಈ ಗೋಲ್ ನೋಡಿ ವಿಶ್ವವೇ ಬೆರಗು…ಚಿಂದಿ ವಿಡಿಯೋ

5,537

Unforgettable, spectacular and best goals in football: ಸಾಮಾನ್ಯವಾಗಿ ಒಂದೊಂದು ದೇಶವು ಒಂದೊಂದು ರೀತಿಯ ಆಟಗಳನ್ನ ಆಡುತ್ತವೆ. ಕೆಲವು ದೇಶಗಳಲ್ಲಿ ಕೆಲವು ಆಟಗಳು ಪ್ರಸಿದ್ದಿಯನ್ನ ಪಡೆದುಕೊಂಡಿದ್ದು ಇನ್ನೂ ಕೆಲವು ಆಟಗಳು ದೇಶದ ರಾಷ್ಟ್ರೀಯ ಕ್ರೀಡೆಯಾಗಿ ಮನ್ನಣೆಯನ್ನ ಗಳಿಸಿವೆ.

ಹೌದು ಅವುಗಳಲ್ಲಿ ಜನರಿಗೆ ಇಷ್ಟ ಆಗೋದು ಮಾತ್ರ ಕೆಲವೇ ಕೆಲವು. ಅದರಲ್ಲಿ ಕ್ರಿಕೇಟ್ ಎರಡನೆ ಸ್ಥಾನದಲ್ಲಿದೆ. ಹೌದು ಒಂದು ತಂಡದಲ್ಲಿ ಹನ್ನೊಂದು ಜನ ಆಟಗಾರರಿದ್ದು ನಿಯಮಗಳ ಪ್ರಕಾರ ಮೊದಲು ಆಟವಾಡಿದ ತಂಡದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಕಲೆ ಹಾಕಿ ಎದುರಾಳಿ ತಂಡವನ್ನು ಮಣಿಸುವ ಕ್ರೀಡೆ ಕ್ರಿಕೆಟ್ ಈ ಆಟದಲ್ಲಿ ಬ್ಯಾಟ್ ಮತ್ತು ಬಾಲ್ ಉಪಯೋಗಿಸಿ ಆಡುವಂತಹ ಆಟ. ಪ್ರಪಂಚದ ಬಹುತೇಕ ರಾಷ್ಟ್ರಗಳು ಈ ಆಟವನ್ನು ಆಡುತ್ತಾರೆ.

ಇನ್ನು ಪ್ರತಿಷ್ಟೆಯ ಕಣವಾಗಿರುತ್ತೆ ಈ ಆಟದ ಮೈದಾನ. ಈ ಕ್ರೀಡೆಯ ಮತ್ತೊಂದು ಹೆಸರಾದ ಜೆಂಟಲ್ ಮನ್ ಗೇಮ್ ಎಂದೂ ಕೂಡ ಕರೆಯುತ್ತಾರೆ. ಭಾರತದಲ್ಲಿ ಕ್ರಿಕೆಟ್ ಒಂದು ಆಟವಾಗಿಲ್ಲ ಮನರಂಜನೆಯ ಅಂಕಣವಾಗಿದೆ. 16ನೇ ಶತಮಾನದಲ್ಲಿ ಇಂಗ್ಲೇಡ್‌ನಲ್ಲಿ ಆರಂಭವಾದ ಈ ಆಟ ಹಲವು ನಿಯಮಗಳ ಬದಲಾವಣೆಯೊಂದಿಗೆ ಹೊಸ ಹುರುಪಿನಲ್ಲಿ ಬದಲಾಗಿ ಬಂದಿದೆ.

ಕ್ರಿಕೆಟ್‌ನಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ವಿಶ್ವಕಪ್ ಕೂಡ ನಡೆಸಲಾಗುತ್ತದೆ. ಭಾರತ ಎರಡು ಭಾರಿ ಇದನ್ನು ಮುಡಿಗೇರಿಸಿಕೊಂಡಿದೆ ಟೆಸ್ಟ್, 50 ಓವವರ್‌ಗಳ ಮ್ಯಾಚ್ 20-20 ಓವರ್‌ಗಳ ಮ್ಯಾಚ್ ಪ್ರಸ್ಥುತ ದಿನಗಳಲ್ಲಿ ಚಾಲನೆಯಲ್ಲಿವೆ. ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಆಟಗಳಲ್ಲಿ ಕ್ರಿಕೆಟ್‌ಗೆ ಎರಡನೆ ಸ್ಥಾನ.

ಇನ್ನು ಮೊದಲನೇ ಸ್ಥಾನದಲ್ಲಿ ಶತಮಾನದಿಂದ ಇರುವ ಕ್ರೀಡೆ ಎಂದರೆ ಅದು ಫುಟ್‌ಬಾಲ್‌. ಹೌದು ಫುಟ್ಬಾಲ್ ಜಗತ್ತಿನ ಅತೀ ಹೆಚ್ಚು ಕ್ರೀಡಾ ಅಭಿಮಾನಿಗಳನ್ನ ಹೊಂದಿರುವಂತಹ ಕ್ರೀಡೆ. ಕ್ರಿಸ್ತ ಪೂರ್ವದ ಇತಿಹಾಸವನ್ನು ಹೊಂದಿರುವಂತಹ ಈ ಆಟ ನಿಯಮಗಳಲ್ಲಿ ಹಲವಾರು ಬದಲಾವಣೆಯನ್ನ ಹೊಂದುತ್ತಾ ಬೆಳೆದು ನಿಂತಿದ್ದು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಫುಟ್ಬಾಲ್ ವಿಶ್ವ ಕಪ್ ಜಗತ್ತಿನ ರಾಷ್ಟ್ರಗಳನ್ನು ಒಂದು ಕಡೆ ಸೇರಿಸುತ್ತೆ.

ಹನ್ನೊಂದು ಜನರಿರುವ ಎರಡು ತಂಡಗಳು ಈ ಆಟದಲ್ಲಿ ಪಾಲ್ಗೊಳ್ಳುತ್ತವೆ.
ಭಾರತವು ಸೇರಿದಂತೆ ಅನೇಕ ತಂಡಗಳು ಇನ್ನೂ ವಿಶ್ವಕಪ್‌ಗೆ ಅರ್ಹತೆಯನ್ನು ಪಡೆಯಲು ಸಾದ್ಯವಾಗಿಲ್ಲ. ಆದರೂ ಫುಟ್ಬಾಲ್ ಮೇಲಿನ ಕ್ರೇಸ್ ಭಾರತೀಯರಲ್ಲಿ ಕಡಿಮೆಯಾಗಿಲ್ಲ. ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಭಾರತದಲ್ಲಿ ಫುಟ್ಬಾಲ್ ಕ್ರೀಡೆಯನ್ನ ಬೆಳೆಸುತ್ತಿವೆ.

ಇನ್ನು ಕ್ರೀಡೆಗಳಲ್ಲಿ ಪ್ರಾಚೀನ ಎನಿಸುವಂತಹ ಈ ಕ್ರೀಡೆ ಅನೇಕ ಏಳು ಬೀಳುಗಳನ್ನ ಕಂಡು ಎಲ್ಲರ ಮನಸನ್ನ ಗೆದ್ದಿದೆ. ಇಂದು ಪ್ರಪಂಚ ಮೊದಲ ಪ್ರಸಿದ್ದಿ ಪಡೆದ ಕ್ರೀಡೆಯಾಗಿದೆ. ಫುಟ್‌ಬಾಲ್‌ ಕೇವಲ ಆಟವಲ್ಲ ಅದೆಷ್ಟೋ ಜನರ ಭಾವನೆ. ಪಂದ್ಯ ನಡೆಯುವ ವೇಳೆ ಲಕ್ಷಾಂತರ ಜನರು ಮೈದಾನದಲ್ಲಿ ಕುಳಿತು ಯುದ್ಧದಂತೆ ನೋಡುತ್ತಾರೆ. ತಮ್ಮ ನೆಚ್ಚಿನ ತಂಡ ಸೋತಾಗಂತು ಕಣ್ಣಲ್ಲಿ ನೀರಿನ ಕೋಡಿಯೇ ಹರಿಯುತ್ತದೆ.

ಇನ್ನು ಇಂತಹ ಪುಟ್ಬಾಲ್ ಪಂಧ್ಯದಲ್ಲಿಯೂ ಕೂಡ ಕೆಲವೊಂದು ಬಾರಿ ನಗೆ ಚಟಾಕಿ ಜೋರಾಗಿಯೇ ಹರಿದುಬರುತ್ತದೆ. ಸಾಮಾನ್ಯವಾಗಿ ಆಟಗಾರರ ನಡುವಳಿಕೆಯಿಂದ ನಗು ಹೊರಬಂದರೆ ಇನ್ನು ಕೆಲವೊಮ್ಮೆ ಪ್ರಾಣಿಗಳು ಮೈದಾನಗಳಿಗೆ ನುಗ್ಗಿ ಆಟಗಾರರಿಗೂ ಕೂಡ ನಗು ತರಿಸುತ್ತವೆ. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋ ದಲ್ಲಿ ಜಗತ್ತಿನ ಎಂದೂ ಕೂಡ ಮರೆಯಲಾರದು ಗೋಲ್ ಗಳನ್ನು ನೋಡಬಹುದು. ಇದನ್ನು ನೋಡಿದರೆ ಖಂಡಿತವಾಗಿಯೂ ಶಾಕ್ ಆಗುತ್ತೀರ. ಒಮ್ಮೆ ಕೆಳಗಿನ ವಿಡಿಯೋ ನೋಡಿ.