ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಪಾರು ಸೀರಿಯಲ್ ಶಾಂಭವಿ ಅವಳಿ ಮಕ್ಕಳ ತುಂಟಾಟ ನೋಡಿ..ಚಿಂದಿ ವಿಡಿಯೋ

4,835

Shambhavi Venkatesh twin babies eating besan laddu: ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಪಾರುವಿನಲ್ಲಿ ಖಳನಾಯಕಿ ದಿಶಾ ಆಗಿ ನಟಿಸಿ ಧಾರಾವಾಹಿ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಶಾಂಭವಿ ಕಳೆದ ವರುಷ ಸಿಹಿ ಸುದ್ದಿ ನೀಡಿದ್ದರು. ಹೌದು ಮನೋಜ್ಞ ನಟನೆಯ ಮೂಲಕ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟನಾ ಕಂಪನ್ನು ಪಸರಿಸಿರುವ ಚೆಂದುಳ್ಳಿ ಚೆಲುವೆ ಶಾಂಭವಿ ತಾಯಿಯಾಗಿದ್ದು ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿರುವ ಶಾಂಭವಿ ಈ ಸಂತಸದ ವಿಚಾರವನ್ನು ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದರು.

ಗಂಡು ಮತ್ತು ಹೆಣ್ಣು ಮಗು. ಡೆಲಿವರಿ ಆಯ್ತಾ??? ಆಯ್ತಾ??? ಅಬ್ಬಾ ಎಷ್ಟೊಂದು ಮೆಸೇಜ್! ಹೌದು ಆಯ್ತು.ತಡವಾಗಿ ತಿಳಿಸ್ತಾ ಇದೀನಿ ಕ್ಷಮೆ ಇರಲಿ. ನಿಮ್ಮೆಲ್ಲರ ಹಾರೈಕೆಯಂತೆ ನಮ್ಮ ಕನಸು ಸಾಕಾರವಾಯ್ತು. ಜೂನ್ 4 ಕ್ಕೆ ಅವಳಿ-ಜವಳಿ ಗಂಡು ಮತ್ತು ಹೆಣ್ಣು ಮಗುವಿಗೆ ಜನ್ಮ ನೀಡುವುದರೊಂದಿಗೆ ಅಪ್ಪ-ಅಮ್ಮನಾಗಿ ಬಡ್ತಿ ಪಡೆದಿದ್ದೇವೆ. ನಿಮ್ಮೆಲ್ಲರ ಪ್ರೀತಿ-ಆಶೀರ್ವಾದ ಸದಾ ಇರಲಿ ಎಂದು ಶಾಂಭವಿ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಜನವರಿ 30 ರಂದು ತಾಯಿಯಾಗುತ್ತಿದ್ದೇನೆ ಎಂಬ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದ ಶಾಂಭವಿ ರವರು ಎರಡು ಜೊತೆ ಪುಟ್ಟ ಸಾಕ್ಸ್ ನ ಫೋಟೋ ಹಂಚಿಕೊಂಡಿದ್ದು 1+1=4 ಯಾಕೆ? 3 ಅಲ್ವಾ ಅಂಥ ತುಂಬಾ ಜನ ಮೇಸೆಜ್ ಮಾಡಿದ್ದರು. ಅದು ನಿಜ. ಆದರೆ ದೇವರ ಲೆಕ್ಕಾಚಾರ ಬೇರೇನೇ ಆಗಿದ್ದು ಯಾಕೆಂದರೆ ಇದು ಡಬಲ್ ಧಮಾಕಾ ಎಂದು ಬರೆದುಕೊಂಡಿರುವ ಶಾಂಭವಿ ತಮಗೆ ಅವಳಿ ಮಕ್ಕಳು ಹುಟ್ಟಲಿರುವ ವಿಚಾರವನ್ನು ಹೇಳಿಕೊಂಡಿದ್ದರು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾರರ್ ಧಾರಾವಾಹಿ ನಿಗೂಢ ರಾತ್ರಿ ಧಾರಾವಾಹಿಯಲ್ಲಿ ಮಂದಾಕಿನಿ ಆಗಿ ಅಭಿನಯಿಸಿದ್ದ ಶಾಂಭವಿಗೆ ಮಂದಾಕಿನಿ ಪಾತ್ರ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದ್ದು ಪಾರುವಿನ ದಿಶಾ ಆಗಿ ನಟಿಸಿ ಕಿರುತೆರೆ ಲೋಕದಲ್ಲಿ ಮನೆ ಮಾತಾದ ಶಾಂಭವಿ ತಮಿಳಿನ ಲಕ್ಷ್ಮಿ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಅಬ್ವರಿಸಿದ್ದರು.ಸದ್ಯ ಮುದ್ದು ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ತಾಯ್ತನದ ಸುಖವನ್ನು ಅನುಭವಿಸುತ್ತಿರುವ ಶಾಂಭವಿ ರವರು ಮತ್ತೆ ಬಣ್ಣದ ಲೋಕಕ್ಕೆ ಬರುತ್ತಾರಾ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಾಗಿದೆ.

ಸದ್ಯ ಗಂಡು ಮತ್ತು ಹೆಣ್ಣು ಮಗು ಹುಟ್ಟಿರುವ ಖುಷಿಯಲ್ಲಿದ್ದಾರೆ ಶಾಂಭವಿ. ಕೆಜಿಎಫ್ ಸಿನಿಮಾದಲ್ಲಿ ಬನ್ನು ಎತ್ತುಕೊಂಡು ಹೋಗುತ್ತಿರುವ ಒಂದು ಸೀನ್ ನಲ್ಲಿ ವಿಶೇಷ ಪಾತ್ರದಲ್ಲಿ ಶಾಂಭವಿ ಕಾಣಿಸಿಕೊಂಡಿದ್ದರು ಹಾಗೂ ಪೈಲ್ವಾನ್ ಸಿನಿಮಾದಲ್ಲಿ ನಟಿಯ ಸ್ನೇಹಿತೆಯಾಗಿ ಕಾಣಿಸಿಕೊಂಡಿದ್ದರು ಇನ್ನು ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಪಾರು ಧಾರವಾಹಿಯಲ್ಲಿಯೂ ಕಾಣಿಸಿಕೊಂಡಿದ್ದರು. ತಮ್ಮದೇ ಆಗಿರುವ ವಿಶೇಷ ನಟನೆಯ ಮೂಲಕ ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ.

ಇನ್ನು ನಟಿ ಶಾಂಭವಿ ವೆಂಕಟೇಶ್ ಅವರು ಈಗ ತಮ್ಮ ಅವಳಿ ಮಕ್ಕಳಿಗೆ ನಾಮಕರಣ ಮಾಡಿದ್ದು ಮಕ್ಕಳ ನಾಮಕಾರಣದ ದಿನ ಶಾಂಭವಿ ಮತ್ತು ಅವರ ಗಂಡ ಇಬ್ಬರ ಕುಟುಂಬವು ಜೊತೆಯಾಗಿ ಸೇರಿದ್ದು ಬಹಳ ಸಂತೋಷವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಶಾಂಭವಿ ಮತ್ತು ಅವರ ಗಂಡನದ್ದು ಪ್ರೇಮ ವಿವಾಹವಾಗಿದ್ದು ಹಾಗಾಗಿ ಇದೆ ಮೊದಲ ಬಾರಿಗೆ ಅವರ ಎರಡು ಕುಟುಂಬಗಳು ಜೊತೆಯಾಗಿದ್ದು ಇದರಿಂದ ಬಹಳ ಸಂತೋಷವಾಗಿ ಶಾಂಭವಿ ವೆಂಕಟೇಶ್ ಅವರು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಇದೀಗ ಶಾಂಭವಿ ಕ್ಯೂಟ್ ವಿಡಿಯೋ ವೊಂದನ್ನು ಹಂಚಿಕೊಂಡಿದ್ದು ಅವಳಿ ಮಕ್ಕಳು ಎಷ್ಟು ಗೂಳುಹಾಕಿಕೊಂಡಿದ್ದಾರೆ ಶಾಂಭವಿ ಅವರನ್ನ ನೀವೆ ನೋಡಿ.