Sapthami Gowda New Instagram reels video: ಸಿಂಗಾರ ಸಿರಿಯೇ ಅಂಗಾಲಿನಲ್ಲಿ ಬಂಗಾರ ಅಗೆವ ಮಾಯೆ. ಈ ಹಾಡು ಕೇಳಿದರೆ ಸಾಕು ಎಂತಹವರಿಗೂ ಕೂಡ ಥಟ್ ಅಂತ ಕಣ್ಣು ಮುಂದೆ ಕಾಂತಾರ ಸಿನಿಮಾ ಫಾರೆಸ್ಟ್ ಗಾರ್ಡ್ ಲೀಲಾ ಮುಖ ಬರುತ್ತದೆ. ಹೌದು ಆ ಮೂಗು ಬಟ್ಟು ಎಣ್ಣೆ ಹಾಕಿ ಬೈ ತಲೆ ಬಾಚಿರುವ ಕೂದಲು ಕೆಂಪು ಸೀರೆ ಮತ್ತು ಕೈಯಲ್ಲಿ ಮೀನು.
ಒಟ್ನಲ್ಲಿ ಲೀಲಾ ಲುಕ್ ಮಾತ್ರ ಹುಡುಗರೆ ನಿದ್ದೆ ಕೆಡಿಸಿದ್ದು ಅದ್ರಲ್ಲೂ ಲೀಲಾ ಪಾತ್ರದಲ್ಲಿ ಸಪ್ತಮಿ ಗೌಡ ನಟಿಸಲ್ಲ ಜೀವಿಸಿದ್ದಾರೆ ಎನ್ನಬಹುದು. ಈ ಹಿಂದೆ ಸಪ್ತಮಿ ಗೌಡ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ನಟಿಸಿದ್ದು ಆದರೆ ಆ ಸಿನಿಮಾ ಸಪ್ತಮಿ ಅವರಿಗೆ ಅಷ್ಟಾಗಿ ಹೆಸರು ತಂದು ಕೊಡಲಿಲ್ಲ. ಇನ್ನು ಇದಾದ ಬಳಿಕ ಅವರು ಕಾಣಿಸಿಕೊಂಡಿದ್ದು ಕಾಂತಾರ ಸಿನಿಮಾದಲ್ಲಿ.
ಇನ್ನು ಈ ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳಿಗಿಂತ ಹೆಚ್ಚು ಕಳೆದಿದ್ದು ಆದರೂ ಅದರ ಹವಾ ಮಾತ್ರ ಕಡಿಮೆಯಾಗಿಲ್ಲ. ಎಲ್ಲಿ ನೋಡಿದರೂ ಕಾಂತಾರಾ ಕಾಂತಾರಾ ಕಾಂತಾರ ಅನ್ನುವ ಜಪ ಕೇಳಿಸುತ್ತಿದ್ದು ಇನ್ನೂ ಯಾರಾದರೂ ಸಿಕ್ಕಾಗ ಹೇಗಿದ್ದೀರಾ? ಅಂತ ಕೇಳುವುದನ್ನು ನಾವು ನೋಡಿದ್ದೇವೆ. ಆದರೆ ಈಗ ಯಾರೇ ಸಿಕ್ಕರೂ ಕಾಂತಾರ ಸಿನಿಮಾ ಹೇಗಿದೆ ಅಂತ ಕೇಳುತ್ತಿದ್ದಾರೆ. ಹೌದು ಅಷ್ಟರ ಮಟ್ಟಿಗೆ ಕಾಂತಾರ ಅಬ್ಬರ ಜೋರಾಗಿದ್ದು ಜೊತೆಗೆ ಬಾಕ್ಸಾಫೀಸ್ ಕೂಡ ಲೂಟಿ ಮಾಡುತ್ತಿದೆ.ರಿಷಬ್ ಶೆಟ್ಟಿ ಅವರ ಖದರ್ ಏನು ಅಂತ ಇಡೀ ದೇಶಕ್ಕೆ ಗೊತ್ತಾಗಿದ್ದು ಇನ್ನು ಈ ಸಿನಿಮಾದಲ್ಲಿ ನಟಿಸಿದ ಪ್ರತಿಯೊಬ್ಬರನ್ನು ಜನ ಗುರುತಿಸಿದ್ದಾರೆ.
ಇನ್ನು ಕಾಂತಾರ ಸಿನಿಮಾದಲ್ಲಿ ಸಪ್ತಮಿ ಗೌಡ ಅದ್ಭುತವಾಗಿ ನಟಿಸಿದ್ದು ಹುಡುಗರ ನಿದ್ದೆ ಕೆಡಿಸಿದ್ದಾರೆ. ಸಿನಿಮಾದಲ್ಲಿ ತುಂಬಾ ಪಾಪದ ಹುಡಗಿ ಪಾತ್ರದಲ್ಲಿ ನಟಿಸಿದ್ದು ಸಪ್ತಮಿ ಗೌಡ ಕೇವಲ ನಟಿ ಯಷ್ಟೇ ಅಲ್ಲ. ಅವರು ಇಂಟ್ನ್ಯಾಷನಲ್ ಈಜು ಪಟು ಕೂಡ ಹೌದು.
ಅವರ ತಂದೆ ಕೂಡ ಕರ್ನಾಟಕ ಪೊಲೀಸ್ ಆಗಿ ಕಾರ್ಯ ನಿರ್ವಹಿಸಿದ್ದು ಸದ್ಯ ಇದೀಗ ಸಪ್ತಮಿ ಗೌಡ ಅವರ ಮತ್ತೊಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಿಂದೆ ಹಾಡಿಗೆ ಸಿಕ್ಕಾಪಟ್ಟೆ ರಗಡ್ ಆಗಿ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಹೌದು ಈ ವಿಡಿಯೋ ಕಂಡು ಹುಡುಗರು ಶಾಕ್ ಆಗಿದ್ದಾರೆ. ಕಾಂತಾರ ಸಿನಿಮಾದಲ್ಲಿ ಸಾದಾ ಸೀದಾ ಆಗಿ ನಟಿಸಿದ್ದ ಸಪ್ತಮಿ ಗೌಡ ಈ ಪಾಟಿ ಸ್ಟೆಪ್ಸ್ ಹಾಕಿರೋದು ಕಂಡು ವ್ಹಾವ್ ಅನ್ನುತ್ತಿದ್ದಾರೆ. ಹೌದು ಸಪ್ತಮಿ ಹಿಂದಿ ಹಾಡಿಗೆ ಹಾಟ್ ಆಗಿ ಹೇಗೆ ಕುಣಿದಿದ್ದಾರೆ ಎಂದು ಲೇಖನಿಯ ಕೆಳಗೆ ನೋಡಬಹುದು.
ಇನ್ನು ಕಾಂತಾರ ಸಿನಿಮಾ ಶಿವ ಪಾತ್ರ ಸೂಪರ್ ಹಿಟ್ ಆಗಿದ್ದು ಜನ ಸಿನಿಮಾ ನೋಡಿ ಬಂದು ಶಿವ ಪಾತ್ರದ ಬಗ್ಗೇನೆ ಮಾತನಾಡುತ್ತಿದ್ದಾರೆ. ಇದೇ ಪಾತ್ರದ ಜೊತೆಗೆ ಇರೋ ಲೀಲಾ ಪಾತ್ರವೂ ಇಲ್ಲಿ ಜನರ ಮನಸನ್ನ ಕದ್ದಿದ್ದು ತೆರೆ ಮೇಲೆ ಬರುವ ಈ ಲೀಲಾ ಕನ್ನಡದ ಮಟ್ಟಿಗೆ ಭರವಸೆಯ ಬೆಡಗಿಯಾಗಿ ಕಂಗೊಳಿಸುತ್ತಿದ್ದಾರೆ. ಇನ್ನು ಸಪ್ತಮಿ ಗೌಡ ತಮ್ಮ ಚಿತ್ರ ಜೀವನದ ಈ ಮೊದಲ ಸಿನಿಮಾದ ಸೂಪರ್ ಹಿಟ್ ಸಂಭ್ರಮದಲ್ಲಿಯೇ ಇದ್ದು ಸಿನಿಮಾ ಜೀವನ ಆರಂಭದಲ್ಲಿಯೇ ಕಾಂತಾರ ಮೂಲಕ ಹಿಟ್ ಆಗಿರೋದು ಎಲ್ಲರಿಗೂ ಸಿಗೋ ಲಕ್ ಅಲ್ಲ ಎನ್ನಬಹುದು.
View this post on Instagram