ಮನುಷ್ಯರಂತೆ ಪ್ರಾಣಿಗಳಿಗೆ ಭಾವನೆಗಳು ಇದ್ದೆ ಇದೆ. ಹೌದು ತನ್ನ ಪ್ರೀತಿ, ಕೋಪ, ನೋವನ್ನು ಪ್ರಾಣಿಗಳು ಕೂಡ ತೋರಿಸುತ್ತಿರುತ್ತದೆ. ಅಂದ ಹಾಗೆ, ಪ್ರಾಣಿಗಳು ಸಹಜವಾಗಿ ತನ್ನ ಕೋಪವನ್ನು ದಾಳಿ ಮಾಡಿ ಹೊರಹಾಕುತ್ತದೆ.ಸಾಮಾನ್ಯವಾಗಿ ಆನೆ ದಾಳಿಯ ಕುರಿತು ಆಗಾಗ ಸುದ್ದಿಯನ್ನು ಕೇಳುತ್ತಿರುತ್ತೇವೆ.
ಹೌದು ಕಾಡನೆಗಳು ಆಗಾಗ ದಾಳಿ ಮಾಡುವ ಮೂಲಕ ಜನರ ನಿದ್ದೆಯನ್ನು ಕೆಡಿಸುತ್ತಿರುತ್ತದೆ.ಅಂದಹಾಗೆ, ದೇವರ ನಾಡು ಕೇರಳದಲ್ಲಿ ಆಣೆಗಳಿಲ್ಲದೆ ಉತ್ಸವಗಳು ನಡೆಯುವುದೇ ಇಲ್ಲ. ಸಾಕಿದ ಆನೆಗಳು ಇದ್ದರೆ ಮಾತ್ರ ದೇವಸ್ಥಾನದಲ್ಲಿ ನಡೆಯುವ ಉತ್ಸವಕ್ಕೊಂದು ಕಳೆ.
ದೇವಸ್ಥಾನದ ಉತ್ಸವದಲ್ಲಿ ಆನೆಗಳದ್ದೆ ರಂಗು ಕೇರಳದಲ್ಲಿ ಇರುತ್ತದೆ. ಆದರೆ ಸಿಂಗಾರ ಕೊಂಡಿದ್ದ ಎರಡು ಆನೆಗಳ ನಡುವೆ ಜಟಾಪಟಿ ನಡೆದಿದ್ದು, ಆನೆಯೊಂದು ಅಲ್ಲಿ ನೆರೆದಿದ್ದ ಜನರ ಮೇಲೆ ಸುಖಾಸುಮ್ಮನೆ ದಾಳಿ ಮಾಡಿದ ವಿಡಿಯೋಯೊಂದು ವೈರಲ್ ಆಗಿತ್ತು.
ಮದಮೀರಿದ ಆನೆಯೊಂದು ಯಾರ ಹಿಡಿತಕ್ಕೂ ಸಿಗುವುದಿಲ್ಲ. ಮಾವುತನ ಅಂಕುಶಕ್ಕೂ ಲೆಕ್ಕಿಸದೇ ಓಟಕ್ಕಿಡುವ ಆನೆಯನ್ನು ನಿಯಂತ್ರಿಸುವುದು ಅಷ್ಟು ಸುಲಭದ ಮಾತಲ್ಲ. ಆನೆ ಮದ ಮೀರಿತೆಂದರೆ ಸಾಕು ಅದು ಮಾಡುವ ತೊಂದರೆಗಳನ್ನು ಊಹಿಸಲು ಅಸಾಧ್ಯ. ಇದೀಗ ಕದಲ್ಲಿ ನಡೆದ ಅಪರೂಪದ ಘಟನೆ ನೋಡಿ ವಿಡಿಯೋ.