ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮೊದಲ ಚಿತ್ರದಲ್ಲೇ ಪ್ರೇಮ್ ಮಗಳ ನಟನೆ ನೋಡಿ…ಚಿಂದಿ ವಿಡಿಯೋ

7,221

ಸದ್ಯ ಚೆಂದನವನದಲ್ಲಿ ಹೆತ್ತವರ ಹಾದಿ ಹಿಡಿದು ಕಲಾವಿದರಾಗಿ ಮಕ್ಕಳು ಕೂಡ ಚಿತ್ರರಂಗಕ್ಕೆ ಕಾಲಿಡುವುದು ಹೊಸ ವಿಚಾರವೇನೂ ಅಲ್ಲ. ಹೌದು ಕನ್ನಡ ಸಿನಿಮಾ ರಂಗದ ಮೊದಲ ಜನರೇಷನ್ ನಿಂದಲೂ ಸ್ಟಾರ್ ಗಳು ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಲೇ ಬಂದಿದ್ದಾರೆ. ಹೌದು ಪ್ರತಿಭೆ ಇದ್ದರೆ ಕಲಾ ಸರಸ್ವತಿ ಕೈ ಹಿಡಿದರೆ ಅವರುಗಳು ಚಿತ್ರರಂಗದಲ್ಲಿ ಮುಂದುವರೆಯುತ್ತಾರೆ ಎನ್ನಬಹುದು.

ಪ್ರೇಕ್ಷಕರು ಒಪ್ಪಿಕೊಳ್ಳದೇ ಹೋದರೆ ಮತ್ತೆ ಬೇರೆ ಚಿತ್ರರಂಗದಲ್ಲಿ ಜೀವನ ಕಟ್ಟಿಕೊಂಡವರೂ ಇದ್ದಾರೆ. ಇನ್ನು ಇದೀಗ ಕನ್ನಡದ ಸ್ಟಾರ್ ನಟನ ಮಗಳು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು ಅದು ಕೂಡ ಕನ್ನಡದ ಮತ್ತೊಬ್ಬ ಸ್ಟಾರ್ ನಟನ ಸಿನಿಮಾದಲ್ಲಿ ಅನ್ನೋದು ವಿಶೇಷ.

ಹೌದು ಇತ್ತೀಚೆಗಷ್ಟೇ ನಟಿ ಮಾಲಾಶ್ರೀ ಅವರ ಮಗಳು ರಾಧನಾ ರಾಮ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಅದೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಮೂಲಕ ಭರ್ಜರಿಯಾಗಿ ಎಂಟ್ರಿ ಕೊಟ್ಟು ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರುವ ಎಲ್ಲಾ ಸೂಚನೆ ನೀಡಿದ್ದಾರೆ ಎನ್ನಬಹುದು.

ಅಂದುಕೊಂಡಂತೆ ದರ್ಶನ್ ಅವರ ಜೊತೆಗಿನ ಸಿನಿಮಾದ ಮುಹೂರ್ತ ಕಾರ್ಯಕ್ರಮವೂ ಸಹ ಅದ್ಧೂರಿಯಾಗಿ ನೆರವೇರಿದ್ದು ನನ್ನ ಮಗಳಿಗೆ ಕನ್ನಡ ಸಿನಿಮಾ ಪ್ರೇಕ್ಷಕರ ಆಶೀರ್ವಾದವಿರಲಿ ಎಂದು ಮಾಲಾಶ್ರೀ ಅವರು ಮಗಳ ಸಿನಿಮಾ ಎಂಟ್ರಿ ಬಗ್ಗೆ ಸಂತೋಷ ವ್ಯಕ್ತ ಪಡಿಸಿದ್ದರು. ಇನ್ನು ಇದೀಗ ಕನ್ನಡ ಚಿತ್ರರಂಗದ ಮತ್ತೊಬ್ಬ ಸ್ಟಾರ್ ನಟ ಲವ್ಲಿ ಸ್ಟಾರ್ ಪ್ರೇಮ್ ಅವರ ಮಗಳು ಸಹ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಅಭಿಮಾನಿಗಳ ಜೊತೆ ಪ್ರೇಮ್ ಅವರು ಇದೀಗ ಸಂತೋಷ ಹಂಚಿಕೊಂಡಿದ್ದಾರೆ.

ನೆನಪಿರಲಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಲವ್ಲಿ ಸ್ಟಾರ್ ಎಂದು ಖ್ಯಾತಿ ಪಡೆದ ಪ್ರೇಮ್ ರವರು ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿದ್ದು ದಶಕಗಳ ಕಾಲ ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಮಿಂಚಿದ್ದು ಸದ್ಯ ಇದೀಗ ಕಿರುತೆರೆಗೂ ಕೂಡ ಕಾಲಿಟ್ಟು ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಇತ್ತ ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟೀವ್ ಇರುವ ಪ್ರೇಮ್ ಅವರು ಕುಟುಂಬದ ಬಗ್ಗೆ ಸಾಕಷ್ಟು ಪೋಸ್ಟ್ ಗಳನ್ನು ಮಾಡುತ್ತಿದ್ದು ಮಗಳು ಎಸ್ ಎಸ್ ಎಲ್ ಸಿ ಪಿಯುಸಿ ಸಮಯದಲ್ಲಿ ರ್ಯಾಂಕ್ ಗಳಿಸಿದ್ದನ್ನು ಸಂತೋಷವಾಗಿ ಹೇಳಿಕೊಂಡಿದ್ದರು. ಸದ್ಯ ಇದೀಗ ಮಗಳು ಅಮೃತಾ ಚಿತ್ರರಂಗಕ್ಕೆ ಕಾಲಿಡುತ್ತಿರುವ ವಿಚಾರವನ್ನು ಕೂಡ ಅಷ್ಟೇ ಸಂತೋಷದಿಂದ ಹಂಚಿಕೊಂಡಿದ್ದು ನನ್ನ ಮಗುವನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ ನಿಮ್ಮ ಪ್ರೀತಿ ಆಶೀರ್ವಾದ ಪ್ರೋತ್ಸಾಹ ಅಭಿಮಾನವಿರಲಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ನಟ ಪ್ರೇಮ್ ಪುತ್ರಿ ಅಮೃತಾ ಅವರು ಸ್ಯಾಂಡಲ್ವುಡ್ ಗೆ ಸ್ಟಾರ್ ನಟನ ಮೂಲಕ ಎಂಟ್ರಿ ನೀಡುತ್ತಿರುವುದು ಮತ್ತೊಂದು ವಿಶೇಷವಾಗಿದ್ದು ಡಾಲಿ ಧನಂಜಯ್ ಅವರ ಮೂಲಕ ಅಮೃತಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.ಆದರೆ ಧನಂಜಯ್ ಅವರಿಗೆ ನಾಯಕಿಯಾಗಲ್ಲ.

ಬದಲಿಗೆ ಅವರ ನಿರ್ಮಾಣದಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲಿ ನಾಯಕಿಯಾಗಿ ಅಮೃತಾ ಸಿನಿಮಾ ಪ್ರವೇಶ ಮಾಡಿದ್ದು ಬಡವ ರಾಸ್ಕಲ್ ಸಿನಿಮಾ ನಂತರ ಧನಂಜಯ್ ಅವರು ಹೆಡ್ ಬುಶ್ ಸಿನಿಮಾ ನಿರ್ಮಾಣ ಮಾಡಿದರು. ಆನಂತರ ಇದೀಗ ಟಗರು ಪಲ್ಯ ಎಂಬ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು ಈ ಚಿತ್ರಕ್ಕೆ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿದ್ದಾರೆ.

ಇತ್ತ ನಾಗಭೂಷಣ್ ಸಿನಿಮಾದ ನಾಯಕರಾದರೆ ಉಮೇಶ್ ಕೆ ಕೃಪ ಅವರು ನಿರ್ದೇಶಕನಾಗಿ ಈ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡಿದ್ದಾರೆ. ಟಗರು ಪಲ್ಯ ಸಿನಿಮಾ ಕಂಟೆಂಟ್ ಆಧಾರಿತ ಸಿನಿಮಾವಾಗಿದ್ದು ಪ್ರೇಕ್ಷಕರಿಗೆ ಮನರಂಜನೆ ನೀಡುವುದರ ಜೊತೆಗೆ ಒಂದೊಳ್ಳೆ ಸಿನಿಮಾ ಎನಿಸಿಕೊಳ್ಳುವುದು ಖಚಿತ ಎನ್ನಲಾಗುತ್ತಿದೆ. ಇನ್ನು ಚಿತ್ರದ ಮಹೂರ್ತದ ವೇಳೆ ಅಮೃತಾ ಎಷ್ಟು ಮುದ್ದಾಗಿ ಕಾಣಿಸುತ್ತಿದ್ದಾರೆ ಹಾಗೂ ಅವರ ಸಂತೋಷದ ಕ್ಷಣಗಳನ್ನು ಕೆಳಗಿನ ವಿಡಿಯೋದಲ್ಲಿ ನೋಡಬಹುದು.