ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮದುವೆಯಲ್ಲಿ ಅದಿತಿ ಪ್ರಭುದೇವ ಟಪಾಂಗುಚ್ಚಿ ಡ್ಯಾನ್ಸ್…ಚಿಂದಿ ವಿಡಿಯೋ

511
aditi prabhudeva marriage party dance video: ಕನ್ನಡ ಚಿತ್ರರಂಗದ ಖ್ಯಾತ ನಟಿ ಅದಿತಿ ಪ್ರಭುದೇವ . ಸ್ಯಾಂಡಲ್ ವುಡ್ ಕ್ವೀನ್ ಅದಿತಿ ಪ್ರಭುದೇವ ಈ ವರ್ಷ ಕನ್ನಡ ಚಿತ್ರ ರಂಗದಲ್ಲಿ ಸಾಕಷ್ಟು ಚಿತ್ರಗಳನ್ನು ಮಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದು  ಮೊದಲು ಇವರು ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು ಬಳಿಕ ಚಿತ್ರರಂಗಕ್ಕೆ ಕಾಲಿಡುತ್ತಾರೆ. ಚಿತ್ರರಂಗದಲ್ಲಿ ಹಲವು ನಂತರ ನಟಿಸಿ ಕನ್ನಡ ಚಿತ್ರರಂಗದ ಹೆಮ್ಮೆಯ ನಾಯಕಿ ಎನಿಸಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ಟಾಪ್ ಬೆಡಗಿ ಅದಿತಿ ಪ್ರಭುದೇವ ಅವರು ನವೆಂಬರ್ 27 ರಂದು ಯಶಸ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು  ಮದುವೆ ಸಂಭ್ರಮ ಬಹಳ ಅದ್ದೂರಿಯಾಗಿ ನಡೆದಿತ್ತು. ಇವರ ಮದುವೆಗೆ ಸಾಕಷ್ಟು ಗಣ್ಯರು ಚಿತ್ರ ರಂಗದ ನಟ ನಟಿಯರು ಕಲಾವಿದರು ಆಗಮಿಸಿದ್ದು ಈ ಸುಂದರ ಜೋಡಿಗೆ ಸ್ಯಾಂಡಲ್ ವುಡ್ ತಾರೆಗಳು ಸೇರಿದಂತೆ ಅವರ ಅಭಿಮಾನಿಗಳ ಮದುವೆಯ ಶುಭಾಶಯ ತಿಳಿಸಿದ್ದಾರೆ.
ಅದಿತಿ ತಮ್ಮ ಮದುವೆಯ ವಿಡಿಯೋಗಳನ್ನು ಹಂಚಿಕೊಂಡಿದ್ದು ಮದುವೆಯ ಕಾರ್ಯಕ್ರಮಗಳು ಪ್ರಾರಂಭವಾದ ದಿನದಿಂದಲೇ ನಟಿ ಅದಿತಿ ಪ್ರಭುದೇವ ಅವರು ತಮ್ಮ ಅದ್ದೂರಿ ಮದುವೆಯ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದೀಗ ಅವರ ಸಂಭ್ರಮದ ಮದುವೆ ನೋಡಲು ಮೈಸುಮಾಡಿಕೊಂಡಿರುವ ಅಭಿಮಾನಿಗಳಿಗಾಗಿ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದು  ವಿಡಿಯೋ ನೋಡಿದ ಅದಿತಿ ಫ್ಯಾನ್ಸ್ ಸೂಪರ್ ಅಂತ ಕಾಮೆಂಟ್ ಮಾಡಿದ್ದಾರೆ.
ತಮ್ಮ ಅಭಿಮಾನಿಗಳಿಗಾಗಿ ಮದುವೆ ವಿಡಿಯೋ ಮಾಡಿಸಿಕೊಂಡ ಅದಿತಿ ಪ್ರಭುದೇವ ಕನ್ನಡ ಚಿತ್ರರಂಗದ ಮನೆ ಮಾತಾಗಿದ್ದಾರೆ. ಸ್ಯಾಂಡಲ್ ವುಡ್ ಕ್ವೀನ್ ಅದಿತಿ ನ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ . ಇವರಿಗೆ ಸಾಕಷ್ಟು ಅಭಿಮಾನಿಗಳು ಶುಭ ಹಾರೈಸಿದ್ದರು. ಸದ್ಯ ಇದೀಗ ಮದುವೆ ಪಾರ್ಟಿಯಲ್ಲಿ ಅಧಿತಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು ಲೇಖನಿಯ ಕೆಳಗೆ ಈ ವಿಡಿಯೋ ನೋಡಬಹುದು.
ಇನ್ನು ಈ ಹಿಂದೆ ಮದುವೆ ಬಗ್ಗೆ ಮಾತನಾಡಿದ್ದ ಅಧಿತಿ ಇದು ಎಲ್ಲರಿಗೂ ಸರ್ಪ್ರೈಸ್ ಆಗಿರುತ್ತದೆ ಎಂದು ಗೊತ್ತಿದೆ. ಆದರೆ ಇದು ಸಡನ್ ಆಗಿ ತೆಗೆದುಕೊಂಡ ನಿರ್ಧಾರವಲ್ಲ. ಈವರೆಗೂ ನನ್ನ ಪೋಷಕರು ಮದುವೆ ಆಗಲು ಯಾವುದೇ ರೀತಿ ಒತ್ತಾಯ ಮಾಡಿಲ್ಲ. ಆದರೆ ನನಗೆ ಸಂಬಂಧ ಹುಡುಕುತ್ತಿದ್ದರು. ಆದರೆ ಅವರು ತೋರಿಸಿದ ಸಂಬಂಧ ಇಷ್ಟವಾದರೆ ನಾನು ಒಪ್ಪಿಕೊಳ್ಳುವೆಬಎಂದು ಮೈಂಡ್ ಮಾಡಿಕೊಂಡಿದ್ದೆ.
ನಾವು ಅಂದುಕೊಂಡ ರೀತಿಯಲ್ಲಿ ಎಲ್ಲಾ ನಡೆಯಿತು. ಹೀಗಾಗಿ ಕ್ರಿಸ್ಮಸ್ ವೀಕೆಂಡ್‌ನಲ್ಲಿ ನಾವು ಹಾಸನದಲ್ಲಿರುವ  ಸಂಬಂಧಿಕರ ನಿವಾಸದಲ್ಲಿ ನಿಶ್ಚಿತಾರ್ಥ ಮಾಡಿಕೊಂಡೆವು. ನಾನು ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವೆ. ಹೀಗಾಗಿ ನನ್ನ ನೈಟ್ ಶೂಟಿಂಗ್ ಸ್ಥಳಕ್ಕೆ ಯಶಸ್‌ ಅವರೇ ಡ್ರಾಪ್ ಮಾಡಿದ್ದರು  ಎಂದು ಅದಿತಿ ಟೈಮ್ಸ್‌ ಆಫ್‌ ಇಂಡಿಯಾ ಜೊತೆ ಮಾತನಾಡಿದ್ದರು.
ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್  ಮೊದಲು ಪೋಷಕರು ಭೇಟಿ ಮಾಡಿದ್ದರು ಆನಂತರ ನಾನು ಪ್ರೀತಿಸಲು ಶುರು ಮಾಡಿದ್ದು ನಟಿಯಾಗಿ ಇದು ನನಗೆ ಡಿಮ್ಯಾಂಡಿಂಗ್ ಪ್ರೊಫೆಷನ್. ನನಗೆ ಪ್ರಕೃತಿ ಪ್ರಾಣಿ ಅಂದ್ರೆ ತುಂಬಾನೇ ಇಷ್ಟ. ನಾನು ಹೋಮ್‌ ಬರ್ಡ್ ಆಗಿರುವ ಕಾರಣ ಯಶಸ್‌ ಅವರು ಕೂಡ ನನ್ನದೇ ಇಷ್ಟ ಹಂಚಿಕೊಳ್ಳುವವರು.
ಅವರು ಕೂರ್ಗ್‌ನಲ್ಲಿರುವ  ಪಟ್ಲಾದವರು. ಅವರಿಗೆ ಫ್ಯಾಮಿಲಿ ಅಂದ್ರೆ ತುಂಬಾನೇ ಇಷ್ಟ ಎಮೋಷನಲ್‌ ಮತ್ತು ಪ್ರಾಣಿ ಪ್ರೇಮಿ. ಕಾಫಿ ಪ್ಲಾಂಟರ್ ಆಗಿರುವ ಕಾರಣ ಪ್ರಕೃತಿ ಜೊತೆಗಿರುವುದು ಅವರಿಗೆ ಎರಡನೇ ಸ್ಕಿನ್‌ ಇದ್ದಂತೆ. ನನ್ನ ಹುಡುಗನಲ್ಲಿ ಇರಬೇಕಾದ ಎಲ್ಲಾ ಗುಣಗಳು ಅವರಲ್ಲಿದೆ ಎಂದು ಅದಿತಿ ಹೇಳಿದ್ದಾರೆ.
ಇನ್ನು ಪರ್ಫೆಕ್ಟ್‌ ಗರ್ಲ್‌ ಹಾಡಿನಲ್ಲಿ ಅದಿತಿ ಅವರನ್ನು ನೋಡಿ ಅಂದಿನಿಂದಲೂ ಯಶಸ್ ಅವರಿಗೆ ಇಷ್ಟವಿತ್ತಂತೆ. ಅವರ ಕುಟುಂಬ ಹುಡುಕಲು ಶುರು ಮಾಡಿದ್ದಾಗ ಅವರಿಗೆ ನನ್ನ ಪೋಷಕರು ಹುಡುಕುತ್ತಿರುವ ವಿಚಾರ ತಿಳಿದು ಬಂತು. ಮೊದಲು ಮನೆಯ ಹಿರಿಯರು ಭೇಟಿ ಆದರು. ಆನಂತರ ನಾವು ಭೇಟಿ ಮಾಡಿದೆವು. ಯಶಸ್‌ ಅವರಿಗೆ ಇದು ಲವ್ ಮ್ಯಾಚ್. ನನಗೆ ಇದು ಅರೇಂಜ್ಡ್ ಮ್ಯಾಚ್ ಎಂದಿದ್ದಾರೆ