ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಯುವನ ಮುಂದೆಯೇ ಅಶ್ವಿನಿ ಬಾಡಿಗಾರ್ಡ್ ಗರಂ…ನಿಜಕ್ಕೂ ಆಗಿದ್ದೆ ಬೇರೆ

4,418

ನಟ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ರವರು ಅಗಲಿ ಒಂದು ವರ್ಷವೇ ಕಳೆದಿದ್ದು ಅ.29 ರಂದುಮೊದಲ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಅಪ್ಪು ಸಮಾಧಿಗೆ ಡಾ. ರಾಜ್​ಕುಮಾರ್​ ಕುಟುಂಬದ ಸದಸ್ಯರು ಪೂಜೆ ಸಲ್ಲಿಸುತ್ತಿದ್ದಾರೆ. ಹೌದು ಅದಕ್ಕಾಗಿ ಸಕಲ ಸಿದ್ಧತೆ ಕೂಡ ಸಾಕಷ್ಟು ದಿನಗಳಿಂದ ನಡೆದಿತ್ತು. ಅಪಾರ ಸಂಖ್ಯೆಯಲ್ಲಿ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಕೂಡ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದರು.

ಬೆಳಗ್ಗೆ 9 ಗಂಟೆಗೆ ಕುಟುಂಬದವರು ಸಮಾಧಿಗೆ ಪೂಜೆ ಮಾಡಿದ್ದು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಶಿವರಾಜ್​ಕುಮಾರ್​ ರಾಘವೇಂದ್ರ ರಾಜ್​ಕುಮಾರ್​ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ಇದರಲ್ಲಿ ಭಾಗಿ ಆಗಿದ್ದರು. ಅಲ್ಲದೇ ಅಪ್ಪು ಆಪ್ತರು ಮತ್ತು ಸ್ನೇಹಿತರು ಕೂಡ ಜೊತೆಗೆ ಇದ್ದರು. ಈ ನಡುವೆ ಅಶ್ವಿನಿ ಮೇಡಂ ರವರು ನಟ ಯುವರಾಜ್ ಕುಮಾರ್ ರವರ ಮುಂದೇನೇ ಬಹಳಾನೇ ಗರಂ ಆದರು. ಅದು ಯಾಕೆ ಗೊತ್ತಾ? ತಿಳಿಸುತ್ತವೆ ಮುಂದೆ ಓದಿ..

ಅಂದು ಸಮಾಧಿ ಬಳಿ ಪೂಜೆ ಮುಗಿದ ನಂತರ ಪುನೀತ್​ ರಾಜ್​ಕುಮಾರ್​ ನಿವಾಸದಲ್ಲಿ ವರ್ಷದ ಕಳಸ ಪೂಜೆ ನಡೆದಿದ್ದು ಅಪ್ಪುಗೆ ಇಷ್ಟವಾದ ತಿನಿಸುಗಳನ್ನು ಇಟ್ಟು ಪೂಜೆ ನೆರವೇರಿಸಲಾಗಿತ್ತು. ಪೂಜೆ ಸಲುವಾಗಿ ಶಿವಣ್ಣ ಮತ್ತು ಗೀತಕ್ಕ ಅವರು ಮುಂಜಾನೆಯೇ ಅಪ್ಪು ನಿವಾಸಕ್ಕೆ ಬಂದು ಹೋಗಿದ್ದು ಡಾ. ರಾಜ್​ಕುಮಾರ್​ ಹುಟ್ಟೂರಾದ ಗಾಜನೂರಿನಿಂದಲೂ ಅನೇಕ ಬಂಧುಗಳು ಸದಾಶಿವನಗರದಲ್ಲಿರುವ ಪುನೀತ್​ ಮನೆಗೆ ಆಗಮಿಸಿದ್ದರು. ಮನೆ ಮುಂದಿನ ಗಣೇಶನಿಗೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಲಾಗಿದೆ.

ಅಪ್ಪು ಪುಣ್ಯ ಸ್ಮರಣೆ ಅಂಗವಾಗಿ ಅಭಿಮಾನಿಗಳು ಬೇರೆ ಬೇರೆ ಊರುಗಳಿಂದ ಬೆಂಗಳೂರಿಗೆ ಆಗಮಿಸಿದ್ದು ಪುನೀತ್​ ರಾಜ್​ಕುಮಾರ್​ ಅವರ ಸಮಾಧಿಗೆ ನಮಿಸಿದ್ದಾರೆ. ಇನ್ನು ಪುನೀತ್​ ರಾಜ್​ಕುಮಾರ್​ ಸಮಾಧಿ ಇರುವ ಕಂಠೀರವ ಸ್ಟುಡಿಯೋ ಹೊರಗೆ ಅಪ್ಪು ಅವರ ವಿಶೇಷವಾದ ಕಟೌಟ್‌ಗಳನ್ನ ಹಾಕಲಾಗಿದ್ದು ಪುನೀತ್ ಅಭಿನಯದ ಸಿನಿಮಾಗಳ ಕಟೌಟ್ ಜೊತೆಯಲ್ಲಿ ಡಾ. ರಾಜ್​ಕುಮಾರ್ ಹಾಗೂ ಪಾರ್ವತಮ್ಮ ಅವರ ಕಟೌಟ್​ಗಳನ್ನೂ ಹಾಕುವ ಮೂಲಕ ಅಭಿಮಾನ ಮೆರೆಯಲಾಗಿತ್ತು.

ಇನ್ನು ಅಪ್ಪು ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ದಿನದಂದು ಸಮಾಧಿಯ ಬಳಿ ಅಶ್ವಿನಿ ಪುನೀತ್ ರಾಜಕುಮಾರ್ ಯುವರಾಜ್ ಕುಮಾರ್ ಸೇರಿದಂತೆ ಕುಟುಂಬದ ಸದಸ್ಯರೆಲ್ಲರೂ ಸಹ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ನೋಡಿದ ತಕ್ಷಣವೇ ಮಾಧ್ಯಮದವರು ಮೈಕ್ ಹಿಡಿದುಕೊಂಡು ಅವರ ಬಳಿಗೆ ಓಡಿ ಬರಲಾರಂಭಿಸಿದ್ದು ಇದೇ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮುಂದೆ ಯುವರಾಜ್ ಕುಮಾರ್ ಕೂಡ ಇದ್ದರು.

ಈ ಸಂದರ್ಭದಲ್ಲಿ ಮೀಡಿಯಾದವರ ವರ್ತನೆಯಿಂದ ಗರಂ ಆದ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಾಡಿಗಾರ್ಡ್ ಮುಂದೆ ಬಂದು ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಮೀಡಿಯಾದವರನ್ನು ದೂರ ಸರಿಸುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಸದ್ಯಕ್ಕೆ ಗಂಧದ ಗುಡಿ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು ಅಪ್ಪು ಅವರನ್ನು ಅವರ ಅಭಿಮಾನಿಗಳು ಸೇರಿದಂತೆ ಕನ್ನಡ ಪ್ರೇಕ್ಷಕರು ಕೊನೆಯ ಬಾರಿಗೆ ನೋಡುವ ತವಕ ದಿಂದ ಚಿತ್ರಮಂದಿರಕ್ಕೆ ಧಾವಿಸುತಿದ್ದು ಚಿತ್ರ ಕೂಡ ಕೋಟಿ ಕೋಟಿ ಲೂಟಿ ಮಾಡುತ್ತಿದೆ.