ಸದ್ಯ ಇದೀಗ ಅಂತರರಾಷ್ಟ್ರೀಯ ನಟರಾಗಿ ಮೆರೆಯುತ್ತಿರುವ ನಟ ರಾಕಿಂಗ್ ಸ್ಟಾರ್ ಯಶ್ ರವರು ಇದೀಗ ಎಲ್ಲರಿಗೂ ಕೂಡ ಚಿರಪರಿಚಿತರಾಗುರುವ ಹೆಸರಾಗಿದೆ. ಇನ್ನು ಒಂದಾನೊಂದು ಕಾಲದಲ್ಲಿ ತುಂಬಾನೇ ಕಷ್ಟಪಟ್ಟಿದ್ದ ಯಶ್ ಇಂದು ಇಡೀ ಪ್ರಪಂಚಕ್ಕೆ ತಾನು ಯಾರೆಂಬುದನ್ನ ತಿಳಿಸುವಂತೆ ಮಾಡಿದ್ದಾರೆ. ಹೌದು ಅವರ ವಿಶಿಷ್ಟ ಅಭಿನಯದ ಮೂಲಕ ಇಡೀ ವಿಶ್ವಕ್ಕೆ ಯಶ್ ರವರು ಪರಿಚಯ ಆಗಿದ್ದಾರೆ ಎಂದು ಹೇಳಬಹುದಾಗಿದೆ.
ಇನ್ನು ಯಶ್ ಸಿನಿಮಾರಂಗಕ್ಕೆ ಬರುವ ಮುನ್ನ ಅವರ ಜೀವನ ಹೇಗಿತ್ತು ಎಂದರೆ ಹೇಳತೀರದು.ಅಂದಹಾಗೆ, ವಸಿಷ್ಠ ಸಿಂಹ ಯಶ್ ಬಗ್ಗೆ ಸಂದರ್ಶನವೊಂದರಲ್ಲಿ ತನ್ನ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದಾರೆ.ರಾಕಿಂಗ್ ಸ್ಟಾರ್ ಯಶ್ ಅವರ ಬಹುಕಾಲದ ಗೆಳೆಯರಾದ ವಶಿಷ್ಠ ಸಿoಹ ಅವರು ರಾಕಿಂಗ್ ಸ್ಟಾರ್ ಯಶ್ ಅವರ ಬಗ್ಗೆ ಹೇಳಿದ್ದೇನು ಗೊತ್ತಾ?.ಯಶ್ ಅವರು ಇರುವ ಸ್ಥಾನ ಬದಲಾಗಿರಬಹುದು.
ಆದರೆ ವ್ಯಕ್ತಿ ಬದಲಾಗಿಲ್ಲ.ಆವತ್ತಿಗೂ ಏನೂ ಹಸಿವು ಛಲ ಹಠ ಇತ್ತೋ, ಇವತ್ತಿಗೂ ಆ ಹಠ ಛಲ ಹಸಿವು ಇದೆ. ಇನ್ನು ಕೆಜಿಎಫ್ ಸಿನಿಮಾ ಕನ್ನಡದ ಹೆಮ್ಮೆ. ಇನ್ನು ಇವತ್ತು ಆ ಸಿನಿಮಾಕ್ಕಾಗಿ ಇಡೀ ದೇಶವೇ ಎದುರು ನೋಡುತ್ತಿದೆ, ಸಿನಿಮಾ ನೋಡಲು ಕಾಯುತ್ತಿದೆ ಎಂದರೆ ಆ ಸಿನಿಮಾ ಮಾಡಿರುವ ಇಂಪಾಕ್ಟ್ ಜೊತೆಗೆ ಆ ಸಿನಿಮಾದ ಆಗುವುದಕ್ಕೆ ಕಾರಣವಾದ ಶಕ್ತಿಗಳು ಯಶ್, ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕರು, ಇನ್ನು ಆ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರು ಅದ್ಭುತನೇ.
ಒಂದು ಹಡಗು ಚೆನ್ನಾಗಿ ಹೋಗುತ್ತದೆ ಎಂದರೆ ಅದಕ್ಕೆ ಕ್ಯಾಪ್ಟನ್ ಚೆನ್ನಾಗಿ ನಿಭಾಯಿಸಿಕೊಂಡು ಹೋಗ್ತಾ ಇದ್ದಾನೆ ಅಂತ ಲೆಕ್ಕ. ಹೀಗಾಗಿ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನು ಅದೆ ತರಹ ಕಾರ್ ಡೈವರ್ ಚೆನ್ನಾಗಿದ್ರೆ ಡ್ರೈವ್ ಮಾಡ್ತಾ ಇದ್ರೆ ಚೆನ್ನಾಗಿ ನಿದ್ದೆ ಮಾಡ್ತೇವೆ. ಅದೇ ತರಹ, ಅಷ್ಟು ಸಮರ್ಥವಾಗಿ ಕೆಜಿಎಫ್ ಸಿನಿಮಾವನ್ನು ನಡೆಸುಕೊಂಡು ಹೋಗಿದ್ದಾರೆ.ಕನ್ನಡ ಸಿನಿಮಾ ಹಾಗೂ ಕನ್ನಡ ಮಾರ್ಕೆಟ್ ಅಂದುಕೊಳ್ಳುವುದ್ದಕ್ಕಿಂತ ದೊಡ್ಡದಿದೆ.ಗುರಿ ತಲುಪ ಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಇದಾದ ಬಳಿಕ ನಾವೆಲ್ಲಾ ನೋಡುತ್ತಿರುವಂತೆ,ಕೆಜಿಎಫ್ ಲೆವೆಲ್ ಗೆ ಸಿನಿಮಾಗಳನ್ನು ಮಾಡುತ್ತಾ ಇದ್ದಾರೆ.ಈ ಸಿನಿಮಾವು ಒಂದು ಉದಾಹರಣೆಯಾಗಿದೆ” ಎಂದಿದ್ದಾರೆ ನಟ ವಸಿಷ್ಠ ಸಿಂಹ. ಇನ್ನು ಕೆ ಜಿ ಫ್ 2 ಸಿನಿಮಾದ ಟೀಸರ್ ಬಗ್ಗೆ ಕರ್ನಾಟಕದ ರಾಜಕಾರಣಿಗಳು, ಸಿನಿಮಾ ತಾರೆಯರಾದ ಶ್ರುತಿ, ತಾರಾ, ಅಭಿಷೇಕ್ ಅಂಬರೀಷ್, ಸುಮಲತಾ, ಸೇರಿದಂತೆ ಸಾಕಷ್ಟು ತಾರೆಯರು ಪ್ರಶಂಸೆ ವ್ಯಕ್ತ ಪಡಿಸಿದ್ದರು. ಈ ಸಿನಿಮಾವನ್ನು ನೋಡಲು ಅಭಿಮಾನಿಗಳು ಮಾತ್ರವಲ್ಲ, ಚಿತ್ರ ತಯಾರಕರು ಕೂಡ ಕಾದು ಕುಳಿತಿದ್ದಾರೆ. ಒಟ್ಟಿನಲ್ಲಿ ಬಹುನಿರೀಕ್ಷಿತ ಕೆಜಿಎಫ್ ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎಂದು ಕಾದು ನೋಡಬೇಕು.