ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕಾಂತಾರ ಗೆದ್ದಿದ್ದೆ ತಡ ರಿಷಬ್ ಸಂಭಾವನೆ ಏರಿಕೆ…ಇನ್ಮೇಲೆ ಶೆಟ್ರಿಗೆ ಎಷ್ಟು ಕೊಡ್ಬೇಕು ಗೊತ್ತಾ

813
ಸದ್ಯ ಕಾಂತಾರ  ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದು ಮೊದಲಿಗೆ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡಿದ್ದ ಕಾಂತಾರ  ಈ ಮಟ್ಟಿಗೆ ಕಲೆಕ್ಷನ್ ಮಾಡುತ್ತದೆ ಎಂಬ ಊಹೆ ಯಾರಿಗೂ ಕೂಡ ಇರಲಿಲ್ಲ. ಸ್ವತಃ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೂ ಕೂಡ ತಮ್ಮ ಕಾಂತಾರ ಚಿತ್ರ ಇಷ್ಟೊಳ್ಳೆ ಕಲೆಕ್ಷನ್ ಮಾಡಲಿದೆ ಎಂಬ ಅಂದಾಜೂ ಕೂಡ ಇರಲಿಲ್ಲ ಎನ್ನಬಹುದು.
ಈ ಕಾರಣದಿಂದಾಗಿ ಚಿತ್ರವನ್ನು ಪ್ಯಾನ್ ಇಂಡಿಯಾ ಬಿಡುಗಡೆ ಮಾಡದೇ ಕೇವಲ ಕನ್ನಡ ಭಾಷೆಯಲ್ಲಿ ಮಾಡಿತ್ತು ಕಾಂತಾರ ಚಿತ್ರತಂಡ. ಹೌದು ಆದರೆ ಕನ್ನಡದಲ್ಲಿಯೇ ನೆರೆ ರಾಜ್ಯದ ಚಿತ್ರಮಂದಿರಗಳಲ್ಲಿ ಕಾಂತಾರ ತುಂಬಿದ ಪ್ರದರ್ಶನ ಕಾಣಲು ಆರಂಭಿಸಿದ್ದು ಪರಭಾಷಾ ಸಿನಿ ಪ್ರೇಕ್ಷಕರಿಂದ ಚಿತ್ರವನ್ನು ಡಬ್ ಮಾಡುವಂತೆ ಮನವಿಗಳು ಕೇಳಿಬಂದವು. ಇದರಿಂದಾಗಿ ಪ್ರೇರೇಪಿತಗೊಂಡ ಕಾಂತಾರ ತಂಡ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾವನ್ನಾಗಿ ಮಾರ್ಪಾಡು ಮಾಡಿತು.
ಇದರ ಪರಿಣಾಮವಾಗಿ ಚಿತ್ರದ ಗಳಿಕೆ ಹೆಚ್ಚಾಗಿದ್ದು ಹದಿನಾರು ಕೋಟಿ ವೆಚ್ಚದಲ್ಲಿ ತಯಾರಾದ ಕಾಂತಾರ ಚಿತ್ರ ವಿದೇಶದ ಕಲೆಕ್ಷನ್‌ನಿಂದಲೇ ತನ್ನ ಬಜೆಟ್ ಅನ್ನು ಸಂಪಾದಿಸಿತು. ಹೌದು ಈ ಹಿಂದೆ ಯಶ್ ಅಭಿನಯದ ಕೆಜಿಎಫ್ 1 ಚಿತ್ರದ 250 ಕೋಟಿ ಲೈಫ್‌ಟೈಮ್ ಕಲೆಕ್ಷನ್ ಹಿಂದಿಕ್ಕಿದ ಕಾಂತಾರ ಈಗ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಪಾರ್ಟ್ 1 ಚಿತ್ರದ ಜೀವಮಾನ ಕಲೆಕ್ಷನ್ ಅನ್ನು ಹಿಂದಿಕ್ಕಲು ಸಜ್ಜಾಗಿದೆ.
ಹೌದು ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಪುಷ್ಪ ಚಿತ್ರ ಶುರುವಾಗುವ ಮುನ್ನವೇ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಎಲ್ಲಾ ಭಾಷೆಯ ಸಿನಿ ಪ್ರೇಕ್ಷಕರಿಗೂ ಇಷ್ಟವಾಗುವ ರೀತಿ ಚಿತ್ರೀಕರಣವನ್ನೂ ಕೂಡ ಮಾಡಲಾಗಿತ್ತು. ಹೀಗೆ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಗೊಂಡು ಹಿಂದಿಯೊಂದರಲ್ಲೇ 108 ಕೋಟಿ ಗಳಿಕೆ ಮಾಡಿದ್ದ ಪುಷ್ಪ ಪಾರ್ಟ್ 1 ಎಲ್ಲಾ ಭಾಷೆಯೂ ಸೇರಿದಂತೆ ಒಟ್ಟು 350.3 ಕೋಟಿ ರೂಪಾಯಿ ಗಳಿಕೆ ಮಾಡಿ ತನ್ನ ಓಟವನ್ನು ನಿಲ್ಲಿಸಿತ್ತು.
ಇನ್ನು ನವೆಂಬರ್ 5ರ ಶನಿವಾರದವರೆಗೆ ಕಾಂತಾರ ಚಿತ್ರ ಎಲ್ಲಾ ಭಾಷೆಯೂ ಸೇರಿದಂತೆ ವಿಶ್ವದಾದ್ಯಂತ 331 ಕೋಟಿ ಗಳಿಕೆ ಮಾಡಿದ್ದು ಪುಷ್ಪ ಪಾರ್ಟ್ 1 ಚಿತ್ರ ಮಾಡಿರುವ 350 ಕೋಟಿ ದಾಖಲೆ ಹಿಂದಿಕ್ಕಲು ಇನ್ನೂ 19 ಕೋಟಿ ಗಳಿಕೆ ಮಾಡಬೇಕಿದೆ. ಹೌದುಬಭಾನುವಾರ ರಜಾ ದಿನವಾಗಿರುವ ಕಾರಣ ಕಾಂತಾರ ಹತ್ತಕ್ಕೂ ಹೆಚ್ಚು ಕೋಟಿ ಗಳಿಸುವ ನಿರೀಕ್ಷೆ ಇದ್ದು ಇನ್ನೆರಡು ಮೂರು ದಿನಗಳಲ್ಲಿ ಪುಷ್ಪ ಪಾರ್ಟ್ 1 ಕಲೆಕ್ಷನ್ ಅನ್ನು ಹಿಂದಿಕ್ಕುವುದು ಖಚಿತ ಎನ್ನಬಹುದು. ಈ ನಡುವೆ ಇದೀಗ ರಿಷಬ್ ಶೆಟ್ಟಿ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಷ್ಟರ ಮಟ್ಟಿಗೆ ಎಂದರೆ ನಟ ಯಶ್ ಗಿಂತಲೂ ಕೂಡಡ ದುಪ್ಪಟ್ಟು ಸಂಭಾವನೆ ಪಡೆಯಲಿದ್ದಾರಂತೆ.
ಹೌದು ಕಾಂತಾರ ಸಿನಿಮಾ ನಾಯಕನಾಗಿ ಹಾಗೂ ನಿರ್ದೇಶಕನಾಗಿ ರಿಷಬ್ ಶೆಟ್ಟಿ ಅವರಿಗೆ ಬಹಳಷ್ಟು ದೊಡ್ಡ ಮಟ್ಟದ ಗೆಲುವನ್ನು ತಂದು ಕೊಟ್ಟಿರುವ ಸಿನಿಮಾವಾಗಿದ್ದು ಕಾಂತಾರ ಚಿತ್ರಕ್ಕಾಗಿ ನಿರ್ದೇಶಕ ರಿಷಬ್ ಶೆಟ್ಟಿ ಅವರು ಹತ್ತು ಕೋಟಿ ಸಂಭಾವನೆ ಪಡೆದಿದ್ದರು. ಇದೀಗ ರಿಷಬ್ ಶೆಟ್ಟಿ ಅವರು ಇದ್ದಕ್ಕಿದ್ದಂತೆ ತಮ್ಮ ಸಂಭಾವನೆ ಅನ್ನು ದುಪ್ಪಟ್ಟು ಮಾಡಿ ಕೊಂಡಿದ್ದು ತೆಲುಗು ತಮಿಳು ಚಿತ್ರ ರಂಗದ ದಿಗ್ಗಜ ನಿರ್ಮಾಪಕ ರಿಂದ ರಿಷಬ್ ಶೆಟ್ಟಿ ಅವರಿಗೆ ಭರ್ಜರಿ ಆಫರ್ ಬಂದಿದೆಯಂತೆ.
ಹೌದು ಮುಂದಿನ ಸಿನಿಮಾದಿಂದ ರಿಷಬ್ ಶೆಟ್ಟಿ ಅವರು ಭರ್ಜರಿ ಹತ್ತು ಕೋಟಿಗೂ ಅಧಿಕ ಸಂಭಾವನೆಯನ್ನು ಪಡೆಯಲಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು  ಬಲ್ಲ ಮೂಲಗಳ ಪ್ರಕಾರ ರಿಷಬ್ ಶೆಟ್ಟಿ ಅವರು ನಿರ್ದೇಶನ ಮತ್ತು ನಟನೆ ಎರಡಕ್ಕೂ ಸೇರಿಸಿ 30 ಕೋಟಿ ಗೂ ಅಧಿಕ ಸಂಭಾವನೆ ಪಡೆಯುವ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇನ್ಮೇಲೆ ರಿಷಬ್ ಶೆಟ್ಟಿ ಅವರು ಪಾನ್ಈ ಇಂಡಿಯನ್ ಸಿನೆಮಾವನ್ನೇ ಮಾಡಲಿದ್ದು  ನಟ ಯಶ್ ಅವರಿಗಿಂತ ಹೆಚ್ಚು ಸಂಭಾವನೆ ಪಡೆಯಲಿದ್ದಾರೆ  ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.