ನಾನು ಯುವ ವಿಜ್ಞಾನಿ ಹಾಗೂ ನಾನು ಡ್ರೋನ್ ತಯಾರಿಸಿದ್ದೇನೆ ಎಂದು ಹೇಳಿಕೊಂಡು ವ್ಯಾಪಕ ಸುದ್ದಿಗೆ ಗ್ರಾಸವಾಗಿ ವಿವಾದದ ನಂತರ ನಾಪತ್ತೆಯಾಗಿದ್ದ ಡ್ರೋನ್ ಪ್ರತಾಪ್ ಸದ್ಯ ಇದೀಗ ಮತ್ತೆ ಕಾಣಿಸಿಕೊಂಡಿದ್ದು ಪೊಲೀಸರ ವಿಚಾರಣೆಯನ್ನೂ ಎದುರಿಸಿ ಕಣ್ಮರೆಯಾಗಿದ್ದ ಡ್ರೋನ್ ಪ್ರತಾಪ್ ಇದೀಗ ಎರಡು ವರ್ಷಗಳ ಬಳಿಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರತ್ಯಕ್ಷರಾಗಿರುವ ಪ್ರತಾಪ್ ಈ ಬಾರಿ ಹೊಸದಾಗಿ ಏನೋ ಪ್ರಾರಂಭಿಸುತ್ತಿರುವಂತೆ ಮುನ್ಸೂಚನೆ ನೀಡಿದ್ದು ಟೇಬಲ್ ಮೇಲೊಂದು ಲ್ಯಾಪ್ಲಾಪ್ ಇಟ್ಟು ಅದಕ್ಕೆ ಡಾಟಾ ಕೇಬಲ್ ಅವಳವಡಿಸಿರುವ ಯಾವುದೋ ಒಂದು ಸಾಧನವನ್ನು ತಮ್ಮ ಮುಂದಿಟ್ಟುಕೊಂಡು ಎರಡು ಕೈಗಳಿಗೆ ಹಳದಿ ಬಣ್ಣದ ರಕ್ಷಾ ಕವಚ ಮತ್ತು ಕಣ್ಣಿಗೆ ಸುರಕ್ಷಿತ ಕನ್ನಡಕ ಧರಿಸಿ ಒಂದು ಕೈಯಲ್ಲಿ ಸಾಲ್ಡರಿಂಗ್ ಗೇರ್ ಹಿಡಿದು ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಇನ್ನು ಟೇಬಲ್ ಮೇಲೆ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳಿದ್ದು ಟೇಬಲ್ನ ಒಂದು ಬದಿಯಲ್ಲಿ ಡ್ರೋನ್ ಕ್ಯಾಮೆರಾದ ಅರ್ಧ ಚಿತ್ರ ಕಾಣುತ್ತದೆ.
ಈ ಬಾರಿ ಡ್ರೋನ್ ಪ್ರತಾಪ್ ಯಾವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ತಿಳಿಸಿಲ್ಲ. ಆದರೆ ಕೆಟ್ಟ ಜನರು ನಿಮ್ಮ ಜೀವನವನ್ನು ತೊರೆದಾಗ ಸರಿಯಾದ ವಿಷಯಗಳು ನಿಮ್ಮ ಜೀವನದಲ್ಲಿ ನಡೆಯಲು ಪ್ರಾರಂಭಿಸುತ್ತವೆ ಎಂಬ ಅಡಿಬರಹ ಕೂಡ ನೀಡಿದ್ದಾರೆ. ಸದ್ಯ ಪ್ರತಾಪ್ ಅವರ ಹೊಸ ಅವತಾರ ವೈರಲ್ ಆಗಿದ್ದು ಫೋಟೋ ನೋಡಿದ ನೆಟ್ಟಿಗರು ಪ್ರತಾಪ್ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಗೆಬಗೆಯ ಕಾಮೆಂಟ್ ಮೂಲಕ ಕಾಲೆಳೆಯುತ್ತಿದ್ದಾರೆ.
ಹೌದು ಈ ಬಾರಿ ಯಾವ ರಾಕೆಟ್ ಹಾರಿಸ್ತೀರಾ ಅಣ್ಣಾ ಎಂದು ನೆಟ್ಟಿಗರೊಬ್ಬರು ಕೇಳಿದ್ದು ಇನ್ನೊಬ್ಬ ಅಣ್ಣಾ ಮಿಕ್ಸಿ ರಿಪೇರಿ ಮಾಡುತ್ತಿದ್ದೀರಾ ಎಂದಿದ್ದಾರೆ. ಕಾಗೆ ಪ್ರತಾಪ ಎಂದು ಮಗದೊಬ್ಬ ನೆಟ್ಟಿಗ ವ್ಯಂಗ್ಯವಾಡಿದ್ದು ಅಣ್ಣಾ ನನ್ನ ಇಯರ್ ಫೋನ್ನಲ್ಲಿ ಒಂದು ಬದಿ ಕೇಳುತ್ತಿಲ್ಲ ರಿಪೇರಿ ಮಾಡಿ ಕೊಡು ಸಾಲ್ಡರಿಂಗ್ ಮಾಡೋಕೆ ಈ ರೀತಿಯ ಬಿಲ್ಡಪ್ ಬೇಕಾ? ಅಣ್ಣನ ಮರು ವಿಶ್ವರೂಪ ಬ್ರೊ ತುರ್ತಾಗಿ ಶಿವಮೊಗ್ಗದಿಂದ ವಿಜಯಪುರಕ್ಕೆ ಒಂದು ಬ್ಲಡ್ ಬಾಟಲ್ ಕಳುಹಿಸಬೇಕಿತ್ತು. 10 ನಿಮಷದಲ್ಲಿ ಕಳುಹಿಸಬೇಕು. ನಿಮ್ಮ ಡ್ರೋಣ್ ಕಳುಹಿಸಿ ನಮಗೆ ಸಹಾಯವಾಗುತ್ತೆ ಎಂಬಿತ್ಯಾದಿ ಬಗೆಬಗೆಯ ಕಾಮೆಂಟ್ಗಳ ಪ್ರತಾಪ್ನನ್ನು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
ಈ ನಡುವೆ ಡ್ರೋನ್ ಪ್ರತಾಪ್ ಹಾಗೂ ನಾನು ಒಂದೇ ತಾಯಿಯ ಮಕ್ಕಳು ನಾನು ಹುಣ್ಣಿಮೆಯಲ್ಲಿ ಹುಟ್ಟಿದೆ ಡ್ರೋನ್ ಪ್ರತಾಪ್ ಹುಟ್ಟಿದಾಗ ಕರೆಂಟ್ ಹೋಗಿತ್ತು ಈ ಮಾತನ್ನು ಸ್ವತಹ ನಟ ಹಾಗೂ ನಿರ್ದೇಶಕ ಒಳ್ಳೆ ಹುಡುಗ ಪ್ರಥಮ್ ಹೇಳಿದ್ದು ಈ ಮಾತು ಭಾರಿ ವೈರಲ್ ಆಗಿದೆ.
ಈಗಲೂ ಕೂಡ ಡ್ರೋನ್ ಪ್ರತಾಪನ ಹೊಸ ಅವತಾರ ಎಲ್ಲಾ ಕಡೆ ವೈರಲ್ ಆಗಿದ್ದು ಪೋಸ್ಟ್ ನೋಡಿದ ನೆಟ್ಟಿಗರು ಡ್ರೋನ್ ಪ್ರತಾಪನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವನು ಅಪ್ಲೋಡ್ ಮಾಡಿರುವ ಫೋಟೋಗೆ ಬಗೆ ಬಗೆಯ ಕಮೆಂಟ್ ಗಳನ್ನು ಹಾಕಿ ಡ್ರೋನ್ ಪ್ರತಾಪನ ಕಾಲೆಳಿಯುತ್ತಿದ್ದರೆ ಇತ್ತ ನಟ ಹಾಗೂ ನಿರ್ದೇಶಕ ಒಳ್ಳೆ ಹುಡುಗ ಪ್ರಥಮ್ ಕೂಡ ಡ್ರೋನ್ ಪ್ರತಾಪನ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ.
ಹೌದು ನನ್ನ ತಮ್ಮ ಡ್ರೋನ್ ಪ್ರತಾಪ್ ಹಾಗೂ ನಾನು ಇಬ್ಬರು ಒಂದೇ ತಾಯಿಯ ಮಕ್ಕಳಿದ್ದಂಗೆ ನಾನು ಹುಣ್ಣಿಮೆಯಲ್ಲಿ ಹುಟ್ಟಿದೆ ಆದರೆ ಡ್ರೋನ್ ಪ್ರತಾಪ್ ಹುಟ್ಟಿದಾಗ ಕರೆಂಟ್ ಹೋಗಿತ್ತು ಯಾವತ್ತಿದ್ರೂ ಪ್ರಥಮ ಡ್ರೋನ್ ಪ್ರತಾಪ್ ನಿರ್ದೇಶಕ ಪ್ರೇಮ್ ತ್ರಿಮೂರ್ತಿಗಳು ನಾವೆಲ್ಲ ಒಂದೇ ಎಂದು ಕಮೆಂಟ್ ಮಾಡುವ ಮೂಲಕ ಡ್ರೋನ್ ಪ್ರತಾಪನ್ನು ಕಿಚಾಯಿಸಿದ್ದಾರೆ.
ಇನ್ನು ನೆಟ್ಟಿಗರು ಪ್ರಥಮ್ ರವರ ಕಮೆಂಟ್ ಗೆ ಪ್ರತಿಕ್ರಿಯೆ ನೀಡಿದ್ದು ಪ್ರತಾಪ್ ಕಾಗೆ ಹಾರಿಸ್ತಾರೆ ನೀವೇನನ್ನು ಹಾರಿಸುತ್ತೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ಕಮೆಂಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಬಹಳಾನೇ ಚರ್ಚೆಯಾಗುತ್ತಿದೆ.