ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಈ ಕಾರಣಕ್ಕಾಗಿ ಸಿಕ್ಕಾಪಟ್ಟೆ ಹಣ ಖರ್ಚು ಮಾಡುತ್ತಿರುವ ಪವಿತ್ರ ಲೋಕೇಶ್…ಸತ್ಯ ಹೊರಕ್ಕೆ

401

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಪವಿತ್ರಾ ಲೋಕೇಶ್ ಅವರು ಸ್ಯಾಂಡಲ್ ವುಡ್ ಮಾತ್ರವಲ್ಲದೆ ಟಾಲಿವುಡ್ ನಲ್ಲೂ ಜನಪ್ರಿಯತೆ ಪಡೆದಿದ್ದಾರೆ. ಹೌದು ಇತ್ತೀಚಿನ ದಿನಗಳಲ್ಲಿ ಪವಿತ್ರಾ ಲೋಕೇಶ್ ಅವರು ತೆಲುಗಿನ ಹಿರಿಯ ನಟ ನರೇಶ್ ಬಾಬು ಅವರನ್ನು ಮದುವೆಯಾಗಲಿದ್ದಾರೆ ಎಂಬ ವದಂತಿ ಮಾಧ್ಯಮಗಳಲ್ಲಿ ಭಾರೀ ಸುದ್ದಿ ಮಾಡಿತ್ತು.

ಹೌದು ಅದರಲ್ಲೂ ಮೈಸೂರಿನ ಹೋಟೆಲ್ ವೊಂದರಲ್ಲಿ ನರೇಶ್ ಅವರ ಪತ್ನಿ ಇಬ್ಬರನ್ನೂ ರೆಡ್ಹ್ಯಾಂಡ್ ಆಗಿ ಹಿಡಿದಾಗ ಈ ವಿಷಯ ಮತ್ತೆ ಚರ್ಚೆಗೊಳಪಟ್ಟಿತ್ತು. ಇದರ ಮಧ್ಯೆ ಪವಿತ್ರಾ ಲೋಕೇಶ್ ಅವರು ನರೇಶ್ ನನಗೆ ಇಷ್ಟವಾಗಿದ್ದು ಅವರೊಂದಿಗೆ ಇರುವುದಾಗಿ ಸ್ಪಷ್ಟಪಡಿಸಿದ್ದರು. ಆದರೆ ಇದೀಗ ಪವಿತ್ರಾ ಲೋಕೇಶ್ ರವರು ಮತ್ತೆ ಸುದ್ದಿಯಲ್ಲಿದ್ದು ಆದರೆ ಈ ಭಾರಿ ಅವರು ಸುದ್ದಿಯಾಗುತ್ತಿರುವುದು ನಟ ನರೇಶ್ ಅವರ ವಿಚಾರವಾಗಿ ಅಲ್ಲ. ಹೌದು ಅವರು ಸದ್ದು ಮಾಡುತ್ತಿರುವುದು ಬೇರೆ ಕಾರಣಕ್ಕೆ ಆಗಿದ್ದು ಹಾಗೆದರೆ ಮತ್ಯಾವ ಕಾರಣಕ್ಕೆಅಂತೀರಾ? ಮುಂದೆ ಓದಿ

ಪವಿತ್ರಾ ಲೋಕೇಶ್ ರವರು ತಮ್ಮ ಫಿಟ್ನೆಸ್ ಗಾಗಿ ದೊಡ್ಡ ಮೊತ್ತದ ಹಣವನ್ನು ಅಂದರೆ ಕೋಟಿ ಕೋಟಿ ಹಣವನ್ನು ಖರ್ಚು ಮಾಡಿದ್ದು ತಮ್ಮ ಫಿಗರ್ ಕಾಪಾಡಿಕೊಳ್ಳಲು ಅವರು ಹೀಗೆ ಹಣವನ್ನು ಖರ್ಚು ಮಾಡುತ್ತಾರೆ ಎಂದು ತಿಳಿದುಬಂದಿದೆ.

ಸ್ಕಿನ್ ಟೋನ್ ಕಾಪಾಡಿಕೊಳ್ಳಲು ಕ್ರೀಮುಗಳಿಗೆ ಲಕ್ಷಗಟ್ಟಲೆ ಖರ್ಚು ಮಾಡುತ್ತಾರಂತೆ. ಹೌದು ಈಗ ಅವರು ಮೊದಲಿಗಿಂತ ಸ್ವಲ್ಪ ತೆಳ್ಳಗೆ ಕಾಣುತ್ತಿದ್ದು ಏಕೆಂದರೆ ಅವರು ಫಿಟ್ ನೆಸ್ ಗಾಗಿ ವಿಶೇಷ ಆಹಾರವನ್ನು ತೆಗೆದುಕೊಳ್ಳುತ್ತಾರೆ ಮತ್ತು ವ್ಯಾಯಾಮವನ್ನು ಮಾಡುತ್ತಾರಂತೆ. ವಿಶೇಷ ಜಿಮ್ ತರಬೇತುದಾರರನ್ನು ಸಹ ನೇಮಿಸಿಕೊಳ್ಳಲಾಗಿದ್ದು ಅಲ್ಲದೇ ಡ್ರೆಸ್ಸಿಂಗ್ ಸ್ಟೈಲ್ ಬದಲಾಯಿಸಿಕೊಳ್ಳಲು ಸಾಕಷ್ಟು ಹಣ ಖರ್ಚು ಮಾಡುತ್ತಾರೆ ಎಂಬ ಸುದ್ದಿ ಈಗ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಇನ್ನು ನಟಿ ಪವಿತ್ರಾ ಲೋಕೇಶ್ ಅವರು ನಟ ಸುಚೇಂದ್ರ ಪ್ರಸಾದ್ ಅವರನ್ನು ಮದುವೆಯಾಗಿದ್ದು ಸುಚೇಂದ್ರ ಪ್ರಸಾದ್ ಅವರು 2004 ರಲ್ಲಿ ಪವಿತ್ರಾ ಲೋಕೇಶ್ ಅವರನ್ನು ಪ್ರೀತಿಸಿ ನಂತರ ವಿವಾಹವಾದರು. ಹೌದು ಸುಚೇಂದ್ರ ಪ್ರಸಾದ್ ಕನ್ನಡ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರಾಗಿದ್ದು ಈ ಮೊದಲು ಸಾಫ್ಟ್ ವೇರ್ ಇಂಜಿನಿಯರ್ ಜೊತೆ ಮದುವೆಯಾಗಿದ್ದ ಪವಿತ್ರಾ ಲೋಕೇಶ್ ಅವರು ಆ ಬಳಿಕ ಅವರಿಗೆ ವಿಚ್ಛೇದನ ನೀಡಿ ಸುಚೇಂದ್ರ ಪ್ರಸಾದ್ ಜೊತೆ ವಾಸಿಸಲು ಆರಂಭಿಸಿದರು. ಆದರೆ ಕಳೆದ ಜುಲೈ ತಿಂಗಳಲ್ಲಿ ನರೇಶ್ ಮತ್ತು ಪವಿತ್ರಾ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

ಪವಿತ್ರಾ ಲೋಕೇಶ್ ರವರು ಸಭ್ಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದು ಒಂದು ಕಾಲದಲ್ಲಿ ಗ್ಲಾಮರಸ್ ಹೀರೋಯಿನ್ ಆಗಿದ್ದರೂ ಕೂಡ ಪವಿತ್ರಾ ಲೋಕೇಶ್ ಹೆಚ್ಚಾಗಿ ಹೋಮ್ಲಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅವರು ಸಾಮಾನ್ಯವಾಗಿ ಪ್ರಮುಖ ಕಲಾವಿದರ ತಾಯಿಯಾಗಿ ನಟಿಸುತ್ತಿದ್ದು ಇಂದಿಗೂ ಪವಿತ್ರಾ ಲೋಕೇಶ್ ಅತ್ಯಂತ ಬ್ಯುಸಿ ಕಲಾವಿದರಲ್ಲಿ ಒಬ್ಬರಾಗಿದ್ದಾರೆ.

ಪವಿತ್ರಾ ಲೋಕೇಶ್ ಅವರು ತೆಲುಗು ಚಿತ್ರರಂಗದಲ್ಲಿಯೂ ಹೆಚ್ಚು ಜನಪ್ರಿಯರಾಗಿದ್ದು ಇವರು ಟಾಲಿವುಡ್ ನಲ್ಲಿ ಬಹಳ ಸಮಯದಿಂದ ವಿಭಿನ್ನ ರೀತಿಯ ಪಾತ್ರಗಳನ್ನು ಮಾಡುತ್ತಾ ಬಂದಿದ್ದಾರೆ. ವದಂತಿಗಳ ಪ್ರಕಾರವಾಗಿ ದಿನಕ್ಕೆ ಐವತ್ತರಿಂದ ಎಪ್ಪತ್ತು ಸಾವಿರ ಸಂಭಾವನೆ ಪಡೆಯುತ್ತಿದ್ದ ಪವಿತ್ರಾ ಲೋಕೇಶ್ ಈಗ ಸಂಭಾವನೆಯನ್ನು ಹೆಚ್ಚಿಸಿದ್ದಾರಂತೆ.