ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಪ್ಪು ಗೆ ಸಿಕ್ಕ ಕರ್ನಾಟಕ ರತ್ನ ಬೆಲೆ ಪ್ರಶಸ್ತಿಯ ಬೆಲೆ ಎಷ್ಟು ಕೋಟಿ ಗೊತ್ತಾ…ದಾಖಲೆ

56,708

ಚಿತ್ರರಂಗದ ಅಜಾತಶತ್ರು ಪುನೀತ್ ರಾಜ್ ಕುಮಾರ್ ರವರು ಸರಳತೆಗೆ ಮತ್ತೊಂದು ಹೆಸರು ಎನ್ನುವಂತೆ ಬದುಕಿ ತೋರಿಸಿದ್ದಾರೆ ಎಂದು ಹೇಳಿದರೆ ಖಂಡಿತವಾಗಿಯೂ ತಪ್ಪಾಗಲಾರದು. ಹೌದು ತಂದೆ ಡಾ.ರಾಜ್ ಕುಮಾರ್ ಅವರು ವಿಶ್ವಮಟ್ಟದಲ್ಲಿ ಹೆಸರು ಗಳಿಸಿದ್ದ ಶ್ರೇಷ್ಠ ನಟರಾಗಿದ್ದು ಎಷ್ಟು ಸರಳ ಸ್ವಭಾವದ ವ್ಯಕ್ತಿತ್ವ ಹೊಂದಿದ್ದರೋ ಮಗನಾದ ಪುನೀತ್ ರಾಜ್ ಕುಮಾರ್ ರವರು ಸಹ ತಂದೆ ತಾಯಿಯ ಹಾಗೆ ಅತ್ಯಂತ ಸರಳ ಸ್ವಭಾವ ಹೊಂದಿದ್ದರು.

ಅಪ್ಪು ಅವರ ಒಳ್ಳೆಯತನದ ಬಗ್ಗೆ ಎಷ್ಟೇ ಪದಗಳಲ್ಲಿ ವರ್ಣಿಸುವ ಪ್ರಯತ್ನ ಮಾಡಿದರು ಕೂಡ ಅದು ನಿಜಕ್ಕೂ ಕಡಿಮೆಯೇ. ಅಪ್ಪು ಅವರು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಆದರೆ ಇದರ ಬಗ್ಗೆ ಎಲ್ಲಿಯೂ ಕೂಡ ಸುದ್ದಿಗಳು ಹೆಚ್ಚಾಗಿ ಹೊರಬರುತ್ತಿರಲಿಲ್ಲ. ಯಾಕೆಂದರೆ ಅಪ್ಪು ಅವರಿಗೆ ಪ್ರಚಾರ ಬೇಕಿರಲಿಲ್ಲ. ಹೌದು ಅಂತಹ ಸರಳ ವ್ಯಕ್ತಿ ನಮ್ಮ ಅಪ್ಪು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾಡಿರುವ ಹಲವಾರು ಸಮಾಜ ಸೇವೆಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದು ಅವರ ಸರಳ ವ್ಯಕ್ತಿತ್ವ ಕೂಡ ಪ್ರತಿಯೊಬ್ಬರಿಗೂ ಮಾದರಿ ಎನ್ನಬಹುದು.

ಇಲ್ಲಿಯವರೆಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಬರೋಬ್ವರಿ 26 ಅನಾಥಾಶ್ರಮ 46 ಉಚಿತ ಶಾಲೆಗಳು 16 ವೃದ್ದಾಶ್ರಮಗಳು 19 ಗೋಶಾಲೆಗಳು 1800 ಮಕ್ಕಳ ಸಂಪೂರ್ಣ ಶಿಕ್ಷಣ ಜವಾಬ್ದಾರಿ ಹಾಗೂ ಮೈಸೂರಿನಲ್ಲಿ ಹೆಣ್ಣುಮಕ್ಳಳಿಗಾಗಿ ಶಿಕ್ಷಣ ವ್ಯವಸ್ಥೆ ವಸತಿಯನ್ನು ನೋಡಿಕೊಳ್ಳುತ್ತಿರುವ ಶಕ್ತಿಧಾಮ ಸಂಸ್ಥೆ ಈ ಎಲ್ಲವನ್ನು ಕೂಡ ಅಪ್ಪು ಅವರು ನೋಡಿಕೊಳ್ಳುತ್ತಿದ್ದು ಸಮಾಜಕ್ಕೆ ಇಷ್ಟೆಲ್ಲಾ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದರು ಕೂಡ ಇವುಗಳ ಬಗ್ಗೆ ಒಂದು ದಿನವೂ ಹೇಳಿಕೊಂಡಿರಲಿಲ್ಲ.

ಹೌದು ತಮ್ಮಿಂದ ಆಗುವ ಎಲ್ಲಾ ಒಳ್ಳೆಯ ಕೆಲಸಗಳನ್ನು ಕೂಡ ಸದ್ದಿಲ್ಲದೆ ಮಾಡಿಕೊಂಡು ಹೋಗುತ್ತಿದ್ದ ಅಪ್ಪು ಇವುಗಳಷ್ಟೇ ಅಲ್ಲದೆ ಹಲವು ಜನರಿಗೆ ಸಹಾಯ ಕೂಡ ಮಾಡಿದ್ದಾರೆ. ಹೌದು ದೊಡ್ಮನೆಯ ಬಳಿ ಸಹಾಯ ಕೇಳಿ ಹೋದವರು ಬರಿಗೈಯಲ್ಲಿ ಎಂದಿಗೂ ಕೂಡ ಹಿಂತಿರುಗಿರುವ ಇತಿಹಾಸವೇ ಇಲ್ಲ. ಇನ್ನು ಅಪ್ಪು ಅವರನ್ನು ನೋಡುವ ಸಲುವಾಗಿ ಮನೆ ಹತ್ತಿರ ಹೋದ ಅಭಿಮಾನಿಗಳನ್ನು ಕೂಡ ಅಪ್ಪು ಅವರು ಮಾತನಾಡಿಸದೆ ಕಳಿಸಿಲ್ಲವಂತೆ.

ಇನ್ನು ಅಭಿಮಾನಿಗಳ ಜೊತೆ ಸ್ನೇಹದಿಂದ ಪ್ರೀತಿಯಿಂದ ಇರುತ್ತಿದ್ದ ಅಪ್ಪು ಎಂದಿಗೂ ಕೂಡ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಹೌದು ಸ್ಟಾರ್ ನಟನ ಮಗ ತಾನು ಒಬ್ಬ ಸ್ಟಾರ್ ಎನ್ನುವ ಹಮ್ಮು ಬಿಮ್ಮು ಇಲ್ಲದೆ ಚಿತ್ರೀಕರಣ ಸ್ಥಳಕ್ಕೆ ನೋಡಲು ಬರುತ್ತಿದ್ದ ಪ್ರತಿ ಅಭಿಮಾನಿಯನ್ನು ಕೂಡ ಬಹಳ ಪ್ರೀತಿಯಿಂದ ಮಾತನಾಡಿಸಿ ಅವರು ತರುತ್ತಿದ್ದ ಉಡುಗೊರೆ ಳನ್ನು ಕೂಡ ಸ್ವೀಕರಿಸಿ ಫೋಟೋ ತೆಗೆಸಿಕೊಳ್ಳುತ್ತಿದ್ದರು ಅಭಿಮಾನಿಗಳ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು. ಹೌದು ಅಂತಹ ಸರಳತೆಯನ್ನು ಮತ್ತೊಮ್ಮೆ ಇನ್ಯಾರಲ್ಲಿಯೂ ನೋಡಲು ಸಾಧ್ಯವಿಲ್ಲ ಎನ್ನುವುದು ಅಕ್ಷರಶಃ ಸತ್ಯ.

ಹೀಗೆ ಇಷ್ಟೆಲ್ಲಾ ಸಮಾಜ ಕಾರ್ಯಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಕನ್ನಡ ರಾಜ್ಯೋತ್ಸವದ ಶುಭದಿನದಂದು ಮಾನ್ಯ ಮುಖ್ಯಮಂತ್ರಿಗಳಾಗಿರುವ ಶ್ರೀ ಬಸವರಾಜ ಬೊಮ್ಮಾಯಿ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಜೂನಿಯರ್ ಎನ್ಟಿಆರ್ ಅವರು ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪರವಾಗಿ ಅವರ ಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಪವಿತ್ರ ಹಾಗೂ ಶ್ರೇಷ್ಠ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇನ್ನು ಈ ಕರ್ನಾಟಕ ರತ್ನ ಪ್ರಶಸ್ತಿಗೆ ಇರುವಂತಹ ಬೆಲೆ ನೋಡುವುದಾದರೆ 6 ಲಕ್ಷ ರೂಪಾಯಿ ಆಗಿದ್ದು ಕರ್ನಾಟಕ ರತ್ನ ಪ್ರಶಸ್ತಿಯ ರೂಪದಲ್ಲಿ 24 ಕ್ಯಾರೆಟ್ ಚಿನ್ನದ ಸರ ಸಿಕ್ಕಿದೆ ಎನ್ನುವದಾಗಿ ತಿಳಿದು ಬಂದಿದೆ. ಹೌದು ಕರ್ನಾಟಕ ರತ್ನ ಪ್ರಶಸ್ತಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕೆಲಸವನ್ನು ಗುರುತಿಸಿ ಸಿಕ್ಕಿರುವುದು ನಿಜಕ್ಕೂ ಕೂಡ ಅರ್ಥಪೂರ್ಣವಾಗಿದೆ ಎನ್ನಬಹುದು. ಆದರೆ ಅಪ್ಪು ಅಭಿಮಾನಿಗಳ ಮುಂದೆ ಈ ಪ್ರಶಸ್ತಿಗೆ ಕೋಟಿ ಬೆಲೆ ಇದ್ದರೂ ಅದು ಸಮವಲ್ಲ.