ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮಗನನ್ನು ಖಾಸಗಿ ಶಾಲೆಯಿಂದ ಬಿಡಿಸಿದ ದರ್ಶನ್…ಮುಂದೇನು ಗೊತ್ತಾ ನೋಡಿ ಟ್ವಿಸ್ಟ್

3,551

ಸದ್ಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಪ್ರಚಾರವನ್ನು ಚಿತ್ರತಂಡ ಶುರು ಮಾಡಿದ್ದು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ತಂಡ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿತ್ತು. ಹೌದು ಜನವರಿ 26ಕ್ಕೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕ್ರಾಂತಿ ಸಿನಿಮಾ ತೆರೆಗೆ ಬರುತ್ತಿದ್ದು
ಅಭಿಮಾನಿಗಳನ್ನು ಚಿತ್ರತಂಡ ಬಹಳ ಸತಾಯಿಸಿತ್ತು. ಹೌದು ಚಿತ್ರೀಕರಣ ಕಂಪ್ಲೀಟ್ ಆಗುವವರೆಗೂ ಸಿನಿಮಾ ಬಗ್ಗೆ ಮಾತನಾಡುವುದಿಲ್ಲ ಎಂದು ಪಟ್ಟಹಿಡಿದಿತ್ತು.

ಸದ್ಯ ಇದೀಗ ಆ ಸಮಯ ಬಂದಿದ್ದು ಚಿತ್ರದ ಒಂದಷ್ಟು ಹೊಸ ಪೋಸ್ಟರ್‌ಗಳು ಕೂಡ ರಿಲೀಸ್ ಆಗಿದೆ. ವಿ. ಹರಿಕೃಷ್ಣ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್‌ ಸಿನಿಮಾದಲ್ಲಿ ದರ್ಶನ್ ಜೋಡಿಯಾಗಿ ರಚಿತಾ ರಾಮ್‌ ಮಿಂಚಿದ್ದು ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಮುಖ್ಯಮಂತ್ರಿ ಚಂದ್ರು ಉಮಾಶ್ರೀ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದ್ದು ಕಳೆದ ಸಾಕಷ್ಟು ತಿಂಗಳುಗಳಿಂದ ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಕ್ರಾಂತಿ’ಲ ಸಿನಿಮಾ ಪ್ರಚಾರ ಮಾಡುತ್ತಾ ಬಂದಿದ್ದರು. ಇನ್ನು ಅಭಿಮಾನಿಗಳ ಪ್ರೀತಿಗೆ ಚಾಲೆಂಜಿಂಗ್ ಸ್ಟಾರ್ ಖುಷಿಯಾಗಿದ್ದು ಇದೀಗ ಚಿತ್ರತಂಡ ಪ್ರಚಾರ ಕೆಲಸಕ್ಕೆ ಚಾಲನೆ ನೀಡಿದೆ.

ಸದ್ಯ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದ್ದು ಟ್ಯಾಬ್ಲೋ ಮಾದರಿಯಲ್ಲಿ ಕ್ರಾಂತಿ ಬ್ಯಾನರ್‌ಗಳಿಂದ ತುಂಬಿದ ಬಂಡಿಯೊಂದು ರಾಜ್ಯಾದ್ಯಂತ ಸುತ್ತಾಟ ಶುರು ಮಾಡಿದೆ. ಹೊಸಕೋಟೆ ರಾಮನಗರಕ್ಕೆ ಈ ಪ್ರಚಾರದ ಬಂಡಿ ಹೋಗುತ್ತಿದ್ದು ಕ್ರಾಂತಿ ಸಿನಿಮಾ ಬಗ್ಗೆ ಸಾರಿ ಸಾರಿ ಹೇಳಲಿದೆ. ಇನ್ನು 70 ದಿನಗಳ ಕಾಲ ರಾಜ್ಯದ ಮೂಲೆ ಮೂಲೆಗೆ ಈ ರೀತಿ ಪ್ರಚಾರ ನಡೆಯಲಿದೆಯಂತೆ.

ಸದ್ಯ ಅಭಿಮಾನಿಗಳ ಸಮ್ಮುಖದಲ್ಲಿ ಕ್ರಾಂತಿ ಸಿನಿಮಾ ಸಾಂಗ್ಸ್ ರಿಲೀಸ್ ಮಾಡುವ ಬಗ್ಗೆ ಚಿತ್ರತಂಡ ಚಿಂತನೆ ನಡೆಸಿದ್ದು ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ಸ್ವತಃ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದು ರಾಜ್ಯದ ಬೇರೆ ಬೇರೆ ಊರಿಗೆ ತೆರಳಿ ಅಭಿಮಾನಿಗಳ ಮಧ್ಯೆ ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. ಈ ಬಾರಿ ಕ್ರಾಂತಿ ಪ್ರಚಾರವನ್ನು ಹೊಸ ರೀತಿಯಲ್ಲಿ ಮಾಡಲು ತೀರ್ಮಾನಿಸಲಾಗಿದೆ.

ಇನ್ನು ಕ್ರಾಂತಿ ಸಿನಿಮಾ ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವಿನ ವ್ಯತ್ಯಾಸವನ್ನು ಹಾಗೂ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಶಿಕ್ಷಣದ ಖಾಸಗೀಕರಣದ ಕುರಿತಂತೆ ಇರುವಂತಹ ಸಿನಿಮಾ ಆಗಿದ್ದು ಇನ್ನು ಕ್ರಾಂತಿ ಸಿನಿಮಾದ ಬಿಡುಗಡೆಯ ದಿನಾಂಕದ ಘೋಷಣೆಯ ಸಂದರ್ಭದಲ್ಲಿ ಮಾಡಿದ ಪ್ರೆಸ್ ಮೀಟ್ ನಲ್ಲಿ ಡಿ ಬಾಸ್ ರವರು ತಮ್ಮ ಮಗನ ಶಾಲೆಗೆ ನಾನು ವರ್ಷಕ್ಕೆ ಒಂಬತ್ತು ಲಕ್ಷ ರೂಪಾಯಿ ಕಟ್ಟುತ್ತಿದ್ದೇನೆ ಎಂದು ಹೇಳಿದ್ದರು.

ಆದರೆ ಈ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಈಗ ತಮ್ಮ ಮಗನನ್ನು ಆ ಶಾಲೆಯಿಂದ ಬಿಡಿಸುತ್ತಿದ್ದಾರೆ ಎಂಬುದಾಗಿ ಸುದ್ದಿಗಳು ಓಡಾಡುತ್ತಿದ್ದು ಯಾಕೆ ಡಿ ಬಾಸ್ ಹೇಗೆ ಮಾಡುತ್ತಿದ್ದಾರೆ ಎಂಬುದು ಈಗಲೂ ಕೂಡ ತಿಳಿದು ಬಂದಿಲ್ಲ ಅಭಿಮಾನಿಗಳಲ್ಲೂ ಕೂಡ ಇದು ಸಾಕಷ್ಟು ಕುತೂಹಲವನ್ನು ತಂದಿದೆ. ಇನ್ನು ಮುಂದಿನ ದಿನಗಳಲ್ಲಿ ಡಿ ಬಾಸ್ ಯಾಕಾಗಿ ಹೀಗೆ ಮಾಡಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.