ಸದ್ಯ ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ಕಾಂತಾರ ಚಿತ್ರ ಇತಿಹಾಸ ಸೃಷ್ಟಿಸುತ್ತಿದ್ದು ಕಳೆದ ಶುಕ್ರವಾರ ( ಸೆಪ್ಟೆಂಬರ್ 30 ) ಬಿಡುಗಡೆಗೊಂಡ ಕಾಂತಾರ ಚಿತ್ರ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಹೌದು ರಾಜ್ಯದ ಕರಾವಳಿ ಭಾಗದ ಆಚರಣೆಗಳನ್ನು ಅಚ್ಚುಕಟ್ಟಾಗಿ ತೋರಿಸುವುದರ ಜೊತೆಗೆ ಕಾಡು ಮತ್ತು ಮನುಷ್ಯನ ನಡುವಿನ ಸಂಘರ್ಷವನ್ನೂ ಕೂಡ ತೆರೆ ಮೇಲೆ ತರಲಾಗಿತ್ತು.ರಿಷಬ್ ಶೆಟ್ಟಿ ಅವರ ನೂತನ ಶೈಲಿಯ ಚಿತ್ರಕತೆಗೆ ಮನಸೋತ ಸಿನಿ ಪ್ರೇಕ್ಷಕರು ನಟ ರಿಷಬ್ ಶೆಟ್ಟಿಯ ನಟನೆಗೂ ಸಹ ಜೈ ಎಂದಿದ್ದು ಇನ್ನು ಕಾಂತಾರ ಚಿತ್ರ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದ್ದು ಸತತವಾಗಿ ಬಹುತೇಕ ಹೌಸ್ಫುಲ್ ಪ್ರದರ್ಶನಗಳನ್ನು ಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.
ಸದ್ಯ ಈ ನಡುವೆ ಕಾಂತಾರ ಸಿನಿಮಾದ ವೀಕ್ಷಣೆಗೆಂದು ತೆರಳಿದ್ದ ಖ್ಯಾತ ಹಾಗೂ ಉದಯೋನ್ಮುಖ ಸಂಗೀತ ನಿರ್ದೇಶಕ ವಾಸುಕಿ ವೈಭವ್ ರವರೊಂದಿಗೆ ಯುವಕರ ಗುಂಪೊಂದು ಸಿಕ್ಕಾಪಟ್ಟೆ ಗಲಾಟೆ ಮಾಡಿದ್ದು ಪೊಲೀಸರ ಮಧ್ಯ ಪ್ರವೇಶದ ಬಳಿಕ ಪರಿಸ್ಥಿತಿ ತಿಳಿಯಾಗಿದೆ ಎನ್ನಲಾಗಿದೆ.ಹೌದು ಗಾಯಕ ವಾಸುಕಿ ವೈಭವ್ ಮತ್ತು ಯುವಕರ ನಡುವೆ ಥಿಯೇಟರ್ನಲ್ಲಿ ಗಲಾಟೆಯಾಗಿದ್ದು ಇದು ಬೆಂಗಳೂರಿನ ಖ್ಯಾತ ಊರ್ವಶಿ ಚಿತ್ರಮಂದಿರದಲ್ಲಿ ಘಟನೆ ನಡೆದಿದೆ. ವಾಸುಕಿ ವೈಭವ್ ರವರು ತಮ್ಮ ಸ್ನೇಹಿತರ ಜೊತೆ ಕಾಂತಾರ ಸಿನಿಮಾ ನೋಡಲು ಹೋಗಿದ್ದು ಈ ವೇಳೆ ಚಿತ್ರಮಂದಿರದಲ್ಲಿ ಸೀಟಿನಲ್ಲಿ ಕೂರುವ ವಿಚಾರಕ್ಕೆ ಗಲಾಟೆ ಆಗಿದೆ ಎನ್ನಲಾಗಿದೆ.
ಹೌದು ತಡವಾಗಿ ಬಂದಂತಹ ಯುವಕರು ವಾಸುಕಿ ಕುಳಿತಿದ್ದ ಆಸನಗಳ ಮುಂದೆ ಹಾದುಹೋಗುವಾಗ ವಾಸುಕಿ ರವರು ಬೇಗ ಹೋಗುವಂತೆ ಸೌಮ್ಯವಾಗಿಯೇ ಹೇಳಿದ್ದು ಈ ವೇಳೆ ಯುವಕರ ಗುಂಪು ಗಲಾಟೆ ತೆಗೆದು ಏರು ದನಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ. ನಾಲ್ಕೈದು ಮಂದಿಯ ಯುವಕರ ಗುಂಪು ವಾಸುಕಿ ಹಾಗೂ ಸ್ನೇಹಿತರ ಜೊತೆ ಗಲಾಟೆ ಮಾಡುವುದಲ್ಲದೇ ಅಸಭ್ಯವಾಗಿ ವರ್ತಿಸಿದ್ದು ಇದು ಅಷ್ಟಕ್ಕೇ ನಿಲ್ಲದೇ ಚಿತ್ರದ ಇಂಟರ್ವಲ್ ವೇಳೆಯಲ್ಲೂ ಕೂಡ ಯುವಕರು ಗುಂಪು ವಾಸುಕಿ ತಂಡವನ್ನು ಗುರಿಯಾಗಿಸಿಕೊಂಡು ಕೀಟಲೆ ಮಾಡಿದ್ದಾರಂತೆ.
ಪರಿಸ್ಥಿತಿ ನಿಯಂತ್ರಣ ತಪ್ಪಿದಾಗ ವಾಸುಕಿ ವೈಭವ್ ರವರು ಪೊಲೀಸರಿಗೆ ಕರೆ ಮಾಡಿದ್ದು ಅಲ್ಲದೆ ಕಲಾಸಿಪಾಳ್ಯ ಪೊಲೀಸ್ ಸ್ಟೇಷನ್ನಲ್ಲಿ ದೂರು ನೀಡಲು ಕೂಡ ಮುಂದಾಗಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದ ಕಲಾಸಿಪಾಳ್ಯ ಪೊಲೀಸರು ಸ್ಟೇಷನ್ನಲ್ಲಿ ರಾಜಿ ಸಂಧಾನ ನಡೆಸಿದ್ದಾರೆ ಎಂದು ಹೇಳಲಾಗಿದೆ.ಇನ್ನು ಯುವಕರು ಹಾಗೂ ವಾಸುಕಿ ವೈಭವ್ ನಡುವೆ ಪೊಲೀಸರು ಸಂಧಾನ ಕೂಡ ನಡೆಸಿದ್ದು ಕೇಸ್ ದಾಖಲಿಸೋದು ಬೇಡ ಕ್ಷಮೆ ಕೇಳಿದರೆ ಸಾಕು ಎಂದು ವಾಸುಕಿ ರವರು ಹೇಳಿದ್ದಾರೆ.
ಅದರಂತೆಯೇ ಯುವಕರು ಕ್ಷಮೆ ಕೇಳಿದ ಬಳಿಕ ಎಲ್ಲರನ್ನೂ ಕೂಡ ಪೊಲೀಸರು ಬಿಟ್ಟು ಕಳುಹಿಸಿದ್ದು ರಾಜಿ ಸಂಧಾನದ ಬಳಿಕ ಪೊಲೀಸ್ ಠಾಣೆಯಿಂದ ವಾಸುಕಿ ವೈಭವ್ ರವರು ಹೊರಬರುತ್ತಿರುವಂತಹ ದೃಶ್ಯಗಳು ಇದೀಗ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇನ್ನು ಘಟನೆ ಸಂಬಂಧ ವಾಸುಕಿ ವೈಭವ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ವಾಸುಕಿ ವೈಭವ್ ರಂಗಭೂಮಿ ಕಲಾವಿದ ಗೀತ ರಚನಕಾರ ಸಂಗೀತ ನಿರ್ದೇಶಕ ಹಾಗೂ ಗಾಯಕರಾಗಿ ಚಂದನವನದಲ್ಲಿ ಗುರುತಿಸಿಕೊಂಡಿದ್ದು ಕಾಗದದ ದೋಣಿಯಲಿ ಹಾಡು ವಾಸುಕಿ ವೈಭವ್ಗೆ ದೊಡ್ಡ ಬ್ರೇಕ್ ನೀಡಿತ್ತು. ಹೌದು 2016ರಲ್ಲಿ ತೆರೆಕಂಡ ರಾಮಾ ರಾಮಾ ರೇ ಚಿತ್ರದ ಸಂಗೀತ ನಿರ್ದೇಶನ ಇವರಿಗೆ ಹೆಸರು ತಂದುಕೊಟ್ಟಿದ್ದು ಬಿಗ್ಬಾಸ್-7ರಲ್ಲಿ ಸ್ಪರ್ಧಿ ಕೂಡ ಆಗಿದ್ದರು.