ವಾರ್ತಾ ಮಂಜರಿ
Trending Stories, Viral News, Gossips & Everything in Kannada

Radhika Pandit: ದಸರಾ ಕಾರ್ಯಕ್ರಮದಲ್ಲಿ ರಾಧಿಕಾ ಪಂಡಿತ್ ಚಿಂದಿ ಡ್ಯಾನ್ಸ್ ನೋಡಿ …ವಿಡಿಯೋ

60,003

ನಮ್ಮ ಕನ್ನಡ ಚಿತ್ರರಂಗದಲ್ಲಿ ಸಿಂಡ್ರೆಲಾ ಎಂದೇ ಜನಪ್ರಿಯತೆ ಕಂಡಿದ್ದಂತಹ Radhika Pandit  ರವರು ವಿವಾಹದ ಬಳಿಕ ಚಿತ್ರರಂಗದಿಂದ ದೂರವುಳಿದಿದ್ದು ಆದರೆ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಕೂಡ ಸಕ್ರೀಯರಾಗಿದ್ದಾರೆ. ಅದರಂತೆ ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಂನಲ್ಲಿ 500ನೇ ಪೋಸ್ಟ್ ಅನ್ನು ವಿಶೇಷವಾಗಿ ಹಂಚಿಕೊಂಡಿದ್ದರು.ತಮ್ಮ ಕುಟುಂಬದವರೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದ ರಾಧಿಕಾ ತಮ್ಮ 500ನೇ ಪೋಟೋಗಾಗಿ ಇದನ್ನು ಹಂಚಿಕೊಂಡಿದ್ದಕ್ಕಾಗಿ ಅವರು ಬರೆದುಕೊಂಡಿದ್ದರು.

ಇನ್ನು ರಾಧಿಕಾ ಪಂಡಿತ್​ ಹಂಚಿಕೊಂಡಿರುವ ಈ ಸ್ಪೆಷಲ್​ ಪೋಸ್ಟ್​ಗೆ ಕೆಲವೇ ಗಂಟೆಗಳಲ್ಲಿ ಸರಿ ಸುಮಾರು 3ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದು 3 ಸಾವಿರಕ್ಕೂ ಹೆಚ್ಚು ಜನರು ಕಾಮೆಂಟ್​ ಮಾಡಿದ್ದರು. ಇನ್ನು ವಿವಾಹದ ಬಳಿಕ ರಾಧಿಕಾ ಪಂಡಿತ್ ಆದಿ ಲಕ್ಷ್ಮಿ ಪುರಾಣಾ ಸಿನಿಮಾದಲ್ಲಿ 2017ರಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದು ಈ ಸಿನಿಮಾ 2019ರಲ್ಲಿ ತೆರೆಕಂಡಿತ್ತು.

2008ರಲ್ಲಿ ತೆರೆಗೆ ಬಂದ ಮೊಗ್ಗಿನ ಮನಸು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ರಾಧಿಕಾ ಪಂಡಿತ್​. ಹೌದು ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡಿದ್ದು ಆ ಬಳಿಕ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು. ಅಂದ್ಹಾಗೆ ಪುಟಾಣಿ ಮಕ್ಕಳ ಆರೈಕೆಯಲ್ಲೇ ಬ್ಯುಸಿಯಾಗಿರುವ ನಟಿ ರಾಧಿಕಾ ಪಂಡಿತ್ ಯಾವ ಚಿತ್ರವನ್ನೂ ಕೂಡ ಸದ್ಯಕ್ಕೆ ಒಪ್ಪಿಕೊಂಡಿಲ್ಲ. ಹೌದು ಆದಿಲಕ್ಷ್ಮಿ ಪುರಾಣ ಚಿತ್ರದ ಬಳಿಕ ಯಾವುದೇ ಚಿತ್ರಕ್ಕೂ ಕೂಡ ರಾಧಿಕಾ ಪಂಡಿತ್ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಇನ್ನು ಅವರು ಮತ್ತೆ ಸ್ಯಾಂಡಲ್​ವುಡ್​ಗೆ ರೀ ಎಂಟ್ರಿ ನೀಡಬೇಕು ಎಂದು ಅಭಿಮಾನಿಗಳು ಕೂಧ ಆಗ್ಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಿರುತ್ತಾರೆ.

ಪುನೀತ್​ ರಾಜ್​ಕುಮಾರ್ ಶಿವರಾಜ್​ ಕುಮಾರ್​​ ಧ್ರುವ ಸರ್ಜಾ ಹೀಗೆ ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ನಟರ ಜೊತೆಗೆ ರಾಧಿಕಾ ತೆರೆಹಂಚಿಕೊಂಡಿದ್ದು ಸದ್ಯ ಇದೀಗ ಮತ್ತೆ ಇವರು ಬಣ್ಣ ಹಚ್ಚಬೇಕು ಎಂದು ಅಭಿಮಾನಿಗಳು ಕೂಡ ಒತ್ತಾಯ ಮಾಡುತ್ತಿದ್ದಾರೆ. ಇನ್ನು ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ರಾಧಿಕಾ ಯಶ್​ ರವರಿಗೆ ದೊಡ್ಡ ಅಭಿಮಾನಿ ಬಳಗವೇ ಇದ್ದು ಸದ್ಯ ಇದೀಗ ಅವರ ಮಕ್ಕಳಾದ ಐರಾ ಯಥರ್ವ್​ಗೂ ಫಾನ್ ಫಾಲೋವರ್ಸ್ ಕೂಡ ಹೆಚ್ಚಾಗಿದ್ದಾರೆ. ಹೌದು ಐರಾಗೆ ಇರುವ ಅಭಿಮಾನಿಗಳ ಬಗ್ಗೆ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಯಶ್ ಕೂಡ ಮಾತಾಡಿದ್ದರು.

ಇನ್ನು 2016ರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರನ್ನ ರಾಧಿಕಾ ಪಂಡಿತ್ ಮದುವೆಯಾಗಿದ್ದು ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇನ್ನು ಸ್ಯಾಂಡಲ್ವುಡ್ಗೆ ಒಟ್ಟಿಗೆ ಕಾಲಿಟ್ಟ ಈ ಜೋಡಿ ಒಟ್ಟಿಗೆ ಕೆಲ ಚಿತ್ರಗಳನ್ನು ಕೂಡ ಮಾಡಿದ್ದು ಮೊಗ್ಗಿನ ಮನಸ್ಸು ಇಬ್ಬರ ಮೊದಲ ಚಿತ್ರವಾಗಿದೆ. ಹೌದು ಇದಾಸ ಬಳಿಕ ರಾಮಾಚಾರಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ಇಬ್ಬರು ಅಭಿನಯಿಸಿದ್ದು ಸದ್ಯ ಈ ಜೋಡಿ ಚಿತ್ರರಂಗದ ಫೇವರೇಟ್ ಜೋಡಿಯಾಗಿತ್ತು. ಸದ್ಯ ಸಾಮಾನ್ಯವಾಗಿ ಜಾಲತಾಣದಲ್ಲಿ ರಾಧಿಕಾ ರವರ ಹಳೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಈ ನಡುವೆ ಉದಯ ಫಿಲ್ಮ್ ಅವಾರ್ಡ್ಸ್ ನಲ್ಲಿ ರಾಧಿಕಾ ರಾಕಿಂಗ್ ಪರ್ಫಾರ್ಮೆನ್ಸ್ ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು ರಾಧಿಕಾ ಎಷ್ಟು ಅದ್ಬುತವಾಗಿ ಡ್ಯಾನ್ಸ್ ಮಾಡಿದ್ದಾರೆ ನೀವೆ ನೋಡಿ.