ವಾರ್ತಾ ಮಂಜರಿ
Trending Stories, Viral News, Gossips & Everything in Kannada

Rachitaram: 30ನೇ ವರ್ಷದ ಜನ್ಮದಿನದಂದು ಸಿಹಿಸುದ್ದಿ ಕೊಟ್ಟ ನಟಿ ರಚಿತಾರಾಮ್

ಇನ್ನು ಹುಟ್ಟುಹಬ್ಬದ ಸಂದರ್ಭದಲ್ಲಿ ತಮ್ಮ ಮುಂದಿನ ಸಿನಿಮಾದ ಕುರಿತು ಅಪ್ಡೇಟ್ ನೀಡುವುದರ ಜೊತೆಗೆ ತಮ್ಮ ವೈಯಕ್ತಿಕ ಬದುಕಿನ ಕುರಿತು ಮಾತನಾಡಿದ್ದು ಸದ್ಯ ಸಿನಿ ಕರಿಯರ್ನತ್ತ ಕೊಂಚ ಬಿಜಿಯಾಗಿದ್ದೇನೆ. ವಿವಾಹದ ಬಗ್ಗೆ ಯೋಚನೆ ಬಂದರೆ ಖಂಡಿತ ನಿಮ್ಮೆಲ್ಲರಿಗೂ ತಿಳಿಸುತ್ತೇನೆ ಎಂದು ಹೇಳುವ ಮೂಲಕವಾಗಿ ರಚ್ಚು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

428

ನಮ್ಮ ಕನ್ನಡ ಚಿತ್ರರಂಗದಲ್ಲಿರುವ ಖ್ಯಾತ ನಟಿಯರ ಪೈಕಿ ಗುಳಿಕೆನ್ನಿ ಸುಂದರಿ ರಚಿತಾ ರಾಮ್ ರವರು ಮುಂಚಣಿಯಲ್ಲಿ ಇದ್ದು ದರ್ಶನ್ ಅಭಿನಯದ ಬುಲ್ ಬುಲ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಚಿತಾ ರಾಮ್ ರವರು ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ ಎನ್ನಬಹುದು. ಬುಲ್ ಬುಲ್ ಚಿತ್ರ ಇವರಿಗೆ ದೊಡ್ಡ ಹೆಸರು ಮತ್ತು ಯಶಸ್ಸು ತಂದು ಕೊಟ್ಟಿದ್ದು ಆ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ಕೂಡ ರಚಿತಾ ಬ್ಯುಸಿ ಆಗಿಬಿಟ್ಟರು.

ಅಲ್ಲದೇ ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ನಟನೆಯನ್ನ ಕೂಡ ಮಾಡಿರುವ ರಚಿತಾ ರಾಮ್ ರವರು ಸದ್ಯಕ್ಕೆ ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದು ಕನ್ನಡ ಚಿತ್ರರಂಗದ ಬಹುತೇಕ ನಾಯಕ ನಟರ ಜೊತೆಗೆ ಅಭಿನಯವನ್ನ ಮಾಡಿರುವ Rachitaram  ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿ ಎಂದೇ ಹೇಳಿಬಹುದಾಗಿದೆ. ಇನ್ನು ನಟಿ ರಚಿತಾ ರಾಮ್ ರವರು ಸಂಭಾವನೆಯ ವಿಚಾರದಲ್ಲಿಯೂ ಸಹ ಬಹಳ ಮೇಲೆ ಇದ್ದಾರೆ ಎನ್ನಲಾಗುತ್ತಿದ್ದು ಇತರೆ ಕನ್ನಡದ ನಟಿಯರಿಗೆ ಹೋಲಿಕೆ ಮಾಡಿದರೆ ನಟಿ ರಚಿತಾ ರಾಮ್ ರವರ ಸಂಭಾವನೆ ಕೂಡ ಬಹಳ ಜಾಸ್ತಿಯಿದೆ.

ಹೌದು ರಚಿತಾ ರವರು 2ನೇ ಅಕ್ಟೋಬರ್ 1992ರಂದು ಜನಿಸಿದ್ದು ರಚಿತಾರಾಮ್ ರವರು ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ್ತಿ ಕೂಡ ಆಗಿದ್ದಾರೆ. ಸುಮಾರು 40 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದು ಅವರ ತಂದೆ ಸಹ ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರರಾಗಿದ್ದರು. ಇನ್ನು ಅವರ ತಂದೆಯವರು 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದು ಕಿರುತೆರೆಯಲ್ಲಿ ಉದಯ ವಾಹಿನಿಯ ನಂದಿನಿ ಖ್ಯಾತಿಯ ನಟಿ ನಿತ್ಯಾ ರಾಮ್ ಅವರು ರಚಿತಾ ರಾಮ್ ಅವರ ಸಹೋದರಿ. ಇನ್ನು ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ರಚಿತಾ ರಾಮ್ ರವರು ಚಂದನವನದ ನಿರ್ಮಾಪಕರ ಮೊದಲ ಆಯ್ಕೆಯ ನಟಿಯಾಗಿದ್ದಾರೆ.

ಹೌದು ಇದಲ್ಲದೆ ರಚಿತಾರಾಮ್ ರವರು ಕಿರುತೆರೆಯ ರಿಯಾಲಿಟಿ ಶೋಗಳಾದ ಕಾಮಿಡಿ ಟಾಕೀಸ್ ಮಜಾಭಾರತ- 2 ಕಾರ್ಯಕ್ರಮಗಳಲ್ಲಿ ಕೂಡ ತೀರ್ಪುಗಾರರಾಗಿಯೂ ಕೂಡ ಕೆಲಸ ಮಾಡಿದ್ದಾರೆ. ಇನ್ನು ಇದಲ್ಲದೆ ರಚಿತಾ ನಿರ್ಮಾಪಕಿಯಾಗಿಯೂ ಕೂಡ ಯಶಸ್ಸುಗಳಿಸಿದ್ದು ಶ್ರೀ ಮಹಾದೇವ ಮತ್ತು ಪ್ರಜ್ವಲ್ ದೇವರಾಜ್‌ರವರ ಪತ್ನಿ ರಾಗಿಣಿ ಅಭಿನಯದ ರಿಷಭಪ್ರಿಯ ಎಂಬ ಕಿರು ಚಿತ್ರವನ್ನು ನಿರ್ಮಿಸಿ ಚಿತ್ರ ನಿರ್ಮಾಣದಲ್ಲಿ ಮೊದಲ ಪ್ರಯತ್ನ ಮಾಡಿದ್ದರು. ಇನ್ನು ಇದೊಂದು ಮ್ಯೂಸಿಕಲ್ ಕಿರುಚಿತ್ರವಾಗಿದ್ದು ಸೈಮಾ ಕಿರುಚಿತ್ರ ಸ್ಫರ್ಧೆಯಲ್ಲಿ ಮೂರು ವಿಭಾಗದಲ್ಲಿ ಕೂಡ ಪ್ರಶಸ್ತಿಯನ್ನು ಕೂಡ ಪಡೆದಿತ್ತು.

ರಾಜ್ಯದಲ್ಲಿ ಬಹಳ ಅಭಿಮಾನಿ ಬಳಗವನ್ನ ಹೊಂದಿರುವ ರಚಿತಾ ರಾಮ್ ರವರ ಚಿತ್ರವನ್ನ ನೋಡಲು ಜನರು ಬಹಳ ಕಾತುರದಿಂದ ಕಾಯುತ್ತಿದ್ದು ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿ ಕೆನ್ನೆ ಸುಂದರಿ ಚಂದನವನದ ಪ್ರಮುಖ ನಾಯಕ ನಟಿ ಕೂಡ ಹೌದು. ಕನ್ನಡದ ಎಲ್ಲಾ ಪ್ರಮುಖ ನಟರೊಂದಿಗೆ ಕೂಡ ತೆರೆ ಹಂಚಿಕೊಂಡಿರುವ ರಚಿತಾರಾಮ್ 2013 ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು ಚಿತ್ರದ ಅಡಿಷನ್‌ಗಾಗಿ ಬಂದ 200 ಕ್ಕೂ ಹೆಚ್ಚು ಯುವತಿಯರಲ್ಲಿ ರಚಿತಾ ಆಯ್ಕೆಯಾದರು.

ಈ ಚಿತ್ರದಲ್ಲಿ ತಮ್ಮ ಉತ್ತಮ ಸಂಭಾಷಣೆ ಮತ್ತು ಮುಗ್ಧ ನಟನೆಯಿಂದ ಪ್ರೇಕ್ಷಕರ ಮತ್ತು ವಿಮರ್ಶಕರ ಅಪಾರ ಮೆಚ್ಚುಗೆ ಪಡೆದರು. ಇನ್ನು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿರುವ ರಚಿತಾ ರಾಮ್ ಅವರು ಒಂದು ಚಿತ್ರಕ್ಕೆ 35 ರಿಂದ 40 ಲಕ್ಷ ರೂಪಾಯಿ ಸಂಭಾವನೆಯನ್ನ ಪಡೆಯುತ್ತಿದ್ದು ರಾಜ್ಯದಲ್ಲಿ ಮಾತ್ರವಲ್ಲದೆ ಬೇರೆ ರಾಜ್ಯದಲ್ಲಿ ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವ ರಚಿತಾ ಅವರು ಇಷ್ಟು ಸಂಭಾವನೆಯನ್ನ ಪಡೆದುಕೊಳ್ಳುತ್ತಾರೆ. ಸದ್ಯ ಈ ಗುಳಿಗೆನ್ನೆ ಸುಂದರಿ ಮದುವೆ ಬಗ್ಗೆ ಚರ್ಚೆ ಶುರುವಾಗುತ್ತಿದ್ದು ಈ ನಟಿ ಮದುವೆಯಾಗುತ್ತಿರಯವುದು ನಿಜಾನ.

This pair is super munchy; What do fans think of Rachita Ram-Kalyan Dev? |  Super Machi Trailer: Rachita Ram and Kalyan Dev starrer Super Machi movie  will release on 14th January |

ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬುಲ್ ಬುಲ್ ಸಿನಿಮಾದ ಮೂಲಕ ನಾಯಕನಟಿಯಾಗಿ ಹೊರಹೊಮ್ಮಿದ ರಚಿತಾ ಹೀಗೆ ಅವಕಾಶಗಳ ಸುರಿಮಳೆಯನ್ನು ಪಡೆದುಕೊಂಡು ಹಲವಾರು ರಿಯಾಲಿಟಿ ಶೋಗಳ ತೀರ್ಪುಗಾರ್ತಿಯಾಗಿಯೂ ಕೂಡ ಕಾಣಿಸಿಕೊಂಡಿರುವಂತಹ ಡಿಂಪಲ್ ಕ್ವೀನ್ ರಚಿತರಾಮ್ ರವರು ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾದ ನಾಯಕಿಯಾಗಿ ನಟಿಸಿರುತ್ತಿರುವುದು ಮತ್ತಷ್ಟು ವಿಶೇಷವಾಗಿದೆ.

ಇನ್ನು ಹುಟ್ಟುಹಬ್ಬದ ಸಂದರ್ಭದಲ್ಲಿ ತಮ್ಮ ಮುಂದಿನ ಸಿನಿಮಾದ ಕುರಿತು ಅಪ್ಡೇಟ್ ನೀಡುವುದರ ಜೊತೆಗೆ ತಮ್ಮ ವೈಯಕ್ತಿಕ ಬದುಕಿನ ಕುರಿತು ಮಾತನಾಡಿದ್ದು ಸದ್ಯ ಸಿನಿ ಕರಿಯರ್ನತ್ತ ಕೊಂಚ ಬಿಜಿಯಾಗಿದ್ದೇನೆ. ವಿವಾಹದ ಬಗ್ಗೆ ಯೋಚನೆ ಬಂದರೆ ಖಂಡಿತ ನಿಮ್ಮೆಲ್ಲರಿಗೂ ತಿಳಿಸುತ್ತೇನೆ ಎಂದು ಹೇಳುವ ಮೂಲಕವಾಗಿ ರಚ್ಚು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಇನ್ನು ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.