Kantara: ಸಿನೆಮಾ ಎಲ್ಲಾ ಕಡೆ ಹೌಸ್ ಫುಲ್ ಆಗುತ್ತಿರುವ ಬೆನ್ನಲ್ಲೇ ರಿಷಬ್ ಶೆಟ್ಟಿಗೆ ಆಘಾತ…ಅಚಾತುರ್ಯ
ಹೌದು ಶಿವಮೊಗ್ಗದ ಕೋಟ್ ಸರ್ಕಲ್ ಹತ್ತಿರ ಗೋಡೆಗಳಿಗೆ ಜಾಹೀರಾತಿನ ಮಾದರಿಯಲ್ಲಿ ಅಂಟಿಸಲಾಗಿದ್ದ ಕಾಂತಾರ ಚಿತ್ರದ ಪೋಸ್ಟರ್ ಮೇಲೆ ಕೆಲವು ಕಿಡಿಗೇಡಿಗಳು ಕೆಟ್ಟ ಪದಗಳನ್ನು ಬರೆದಿದ್ದು ಇದು ಹಿಂದು ಪರ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದ್ದು ಪ್ರತಿಭಟನೆ ಕೂಡ ನಡೆಯಿತು.
ಸದ್ಯ ರಿಷಬ್ ಶೆಟ್ಟಿ ಅಭಿನಯದ ನಿರ್ದೇಶನದ ಕಾಂತಾರ ಸಿನಿಮಾ ನಿರೀಕ್ಷೆಗೂ ಮೀರಿ ಸೂಪರ್ ಹಿಟ್ ಆಗಿದ್ದು ಬಿಡುಗಡೆಯಾಗಿ ಒಂದು ವಾರ ಕಳೆದಿದ್ದರೂ ಕೂಡ ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಹೌದು ಇದು ರಿಷಬ್ ಶೆಟ್ಟಿ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್ ನೀಡಿದ್ದು ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ಈ ಸಿನಿಮಾದ ಬಗ್ಗೆ ದೇಶಾದ್ಯಂತ ಟಾಕ್ ಸೃಷ್ಟಿ ಆಗಿದ್ದು ಹಿಂದಿ ಪ್ರೇಕ್ಷಕರು ಕೂಡ ಕಾಂತಾರ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಆ ಕಾರಣದಿಂದ ಹಿಂದಿಯಲ್ಲೂ ಟ್ರೇಲರ್ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದ್ದು ಈ ಬಗ್ಗೆ ಸ್ವತಃ ರಿಷಬ್ ಶೆಟ್ಟಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಸದ್ಯ Kantara ಸಿನಿಮಾದಲ್ಲಿ ಬೆಳಕುಚೆಲ್ಲಲಾಗಿರುವ ದೈವ ಸಂಪ್ರದಾಯ ಇನ್ನಿತರ ವಿಷಯಗಳ ಬಗ್ಗೆ ಜೋರಾದ ಚರ್ಚೆಗಳು ನಡೆಯುತ್ತಿದ್ದು ವೈದಿಕ ಹಾಗೂ ಅವೈದಿಕ ಚರ್ಚೆಯನ್ನು ಕೂಡ ಕಾಂತಾರ ಹುಟ್ಟುಹಾಕಿದೆ. ಹೌದು ಇದರ ಜೊತೆಗೆ ಕಾಂತಾರ ಸಿನಿಮಾವನ್ನು ಹಿಂದು ಧರ್ಮದ ಪ್ರತಿಪಾದನೆ ಎಂದೆಲ್ಲ ಕೆಲವರು ಸೋಶಿಯಲ್ ಮೀಡಿಯಾಲ್ಲಿ ಬರೆದುಕೊಂಡಿರುವುದು ಸಹ ಇದ್ದು ಇದಕ್ಕೆ ವಿರೋಧವೂ ವ್ಯಕ್ತವಾಗಿದೆ.
ಇನ್ನು ಕಾಂತಾರ ಸಿನಿಮಾಕ್ಕೆ ಹಿಂದು ಬಣ್ಣ ಬಳಿಯುತ್ತಿದ್ದಂತೆ ಕೆಲವರು ಸಿನಿಮಾದ ವಿರೋಧವಾಗಿ ದನಿ ಎತ್ತಲು ಆರಂಭಿಸಿದ್ದು ಶಿವಮೊಗ್ಗದಲ್ಲಿ ಕಾಂತಾರ ಸಿನಿಮಾದ ಪೋಸ್ಟರ್ಗಳ ಮೇಲೆ ಕೆಟ್ಟ ವಾಕ್ಯಗಳನ್ನು ಬರೆಯಲಾಗಿದ್ದು ಇದು ಕೆಲ ಸಮಯ ಸೂಕ್ಷ್ಮ ವಾತಾವರಣವನ್ನು ಕೂಡ ಸೃಷ್ಟಿಸಿತ್ತು.
Courtesy: News18
ಹೌದು ಶಿವಮೊಗ್ಗದ ಕೋಟ್ ಸರ್ಕಲ್ ಹತ್ತಿರ ಗೋಡೆಗಳಿಗೆ ಜಾಹೀರಾತಿನ ಮಾದರಿಯಲ್ಲಿ ಅಂಟಿಸಲಾಗಿದ್ದ ಕಾಂತಾರ ಚಿತ್ರದ ಪೋಸ್ಟರ್ ಮೇಲೆ ಕೆಲವು ಕಿಡಿಗೇಡಿಗಳು ಕೆಟ್ಟ ಪದಗಳನ್ನು ಬರೆದಿದ್ದು ಇದು ಹಿಂದು ಪರ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದ್ದು ಪ್ರತಿಭಟನೆ ಕೂಡ ನಡೆಯಿತು. ಇನ್ನು ಕಾಂತಾರ ಸಿನಿಮಾದ ಪೋಸ್ಟರ್ ಮೇಲೆ ಕೇಲ ಶಬ್ದಗಳನ್ನು ಬರೆದಿರುವುದನ್ನು ಖಂಡಿಸಿೆುವ ಶಿವಮೊಗ್ಗದ ಹಿಂದು ಜಾಗರಣೆ ವೇದಿಕೆ ಸದಸ್ಯ ಪ್ರತಿಭಟನೆ ನಡೆಸಿದ್ದು ಈ ರೀತಿಯ ದೇಶವಿರೋಧಿ ಹಿಂಸೆಗೆ ಪ್ರಚೋದನೆ ನೀಡುವಂತಹ ಸಮಾಜದ ಶಾಂತಿ ಕದಡುವ ಗೋಡೆ ಬರಹಗಳು ಮಂಗಳೂರಿನಲ್ಲಿ ಮಾತ್ರ ಕಂಡು ಬರುತ್ತಿದ್ದವು. ಆದರೆ ಇದೀಗ ಈ ಬರಹಗಳು ಶಿವಮೊಗ್ಗದಲ್ಲಿಯೂ ಕೂಡ ಕಂಡು ಬಂದಿದ್ದು ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದ್ದಾರೆ.
ಇನ್ನು ಬೇಕಂತಲೇ ಉದ್ದೇಶಪೂರ್ವಕವಾಗಿ ಕಾಂತಾರ ಚಿತ್ರದ ಪೋಸ್ಟರ್ ಮೇಲೆ ಕೆಟ್ಟ ಶಬ್ದಗಳನ್ನು ಬರೆಯಲಾಗಿದ್ದು ಕೆಟ್ಟ ಶಬ್ದ ಬರೆದ ಭಯೋತ್ಪಾದಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ ಹಿಂದು ಜಾಗರಣೆ ವೇದಿಕೆ ಸದಸ್ಯರು. ಇನ್ನು ವಿಷಯ ತಿಳಿಯುತ್ತಲೆ ಸ್ಥಳಕ್ಕೆ ಆಗಮಿಸಿದ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ಸಿಬ್ಬಂದಿಗಳು ಅವಾಚ್ಯಗಳನ್ನು ಬರೆಯಲಾಗಿದ್ದ ಪೋಸ್ಟರ್ನ ಭಾಗವನ್ನಷ್ಟೆ ಕಿತ್ತು ಎಸೆದಿದ್ದು ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರದವರು ಅಂಟಿಸಿದ ಪೋಸ್ಟರ್ನ ಮೇಲೆ ಕೆಟ್ಟ ಶಬ್ದಗಳು ಬರೆದಿರುವ ಕಾರಣ ಮಲ್ಲಿಕಾರ್ಜುನ ಚಿತ್ರಮಂದಿರದವರು ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ ಎಂದಿದ್ದಾರೆ. ಇನ್ನು ಕಾಂತಾರ ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿಯಾಗಲಿ ಇನ್ನಾವುದೇ ಚಿತ್ರತಂಡದ ಸದಸ್ಯರಾಗಲಿ ಈ ಬಗ್ಗೆ ಇನ್ನು ಕೂಡ ಪ್ರತಿಕ್ರಿಯೆ ನೀಡಿಲ್ಲ.