Ashwini: ಅಪ್ಪು ಇರದ ಆಯುಧ ಪೂಜೆಯಲ್ಲಿ ಯಾರು ಊಹಿಸದ ಕೆಲಸ ಮಾಡಿದ ಅಶ್ವಿನಿ
ಪುನೀತ್ ಅವರ ಅನುಪಸ್ಥಿತಿಯಲ್ಲಿಯೂ ಸಹ ಅವರ ನೆಚ್ಚಿನ ವಾಹನಗಳಿಗೆ ಅಶ್ವಿನಿ ಅವರು ಪೂಜೆ ಸಲ್ಲಿಸಿದ್ದು ಬಹಳ ಪ್ರೀತಿಸುತ್ತಿದ್ದ ಪತಿಯನ್ನು ಕಳೆದುಕೊಂಡ ನೋವಿನಲ್ಲಿದ್ದರೂ ಸಹ ಪುನೀತ್ ಅವರ ಸಾಕಷ್ಟು ಉಳಿತು ಹೋದ ಕನಸುಗಳನ್ನು ನನಸಾಗಿಸುವಲ್ಲಿ ಅಶ್ವಿನಿ ತೊಡಗಿದ್ದಾರೆ. ಅದರಂತೆ ಅಪ್ಪು ಅವರ ಕಾರುಗಳಿಗೆ ಪೂಜೆ ಮಾಡುವುದರ ಮೂಲಕ ಅಪ್ಪುವಿನ ಆತ್ಮಕ್ಕೆ ಸಂತಸವನ್ನು ನೀಡಿದ್ದಾರೆ ಅಶ್ವಿನಿಯವರು.
ಸಾಮಾನ್ಯವಾಗಿ ಈ ಆಯುಧ ಪೂಜೆಯು ನವರಾತ್ರಿ ಹಬ್ಬದ 9ನೇ ದಿನದಂದು ಮಹಾನವಮಿ ದಿನದ ಸಂಧರ್ಭದಲ್ಲಿ ಬರುತ್ತದೆ ಮತ್ತು ಇದು ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ಕರ್ನಾಟಕ ತಮಿಳುನಾಡು ಆಂಧ್ರಪ್ರದೇಶ ತೆಲಂಗಾಣ ಮತ್ತು ಕೇರಳದಲ್ಲಿ ಮಾತ್ರ ಜನಪ್ರಿಯವಾಗಿದೆ. ಹೌದು ನವರಾತ್ರಿಯಲ್ಲಿ ನವಮಿ ತಿಥಿಯಂದು ಆಯುಧಪೂಜೆ ಮಾಡಲಾಗುತ್ತಿದ್ದು ಆಯುಧ ಪೂಜೆಯನ್ನು ಶಸ್ತ್ರಪೂಜೆ ಹಾಗೂ ಅಸ್ತ್ರಪೂಜೆ ಎಂದೂ ಕೂಡ ಕರೆಯುತ್ತಾರೆ.
ಇನ್ನು ಐತಿಹಾಸಿಕವಾಗಿ ಆಯುಧ ಪೂಜೆಯು ಆಯುಧಗಳನ್ನು ಪೂಜಿಸುವ ಉದ್ದೇಶವನ್ನು ಹೊಂದಿದ್ದು ಆದರೆ ಆಧುನಿಕ ರೂಪದಲ್ಲಿ ಜನರು ಕಾರುಗಳು ಸ್ಕೂಟರ್ಗಳು ಹಾಗೂ ಮೋಟಾರ್ ಬೈಕ್ಗಳನ್ನು ಒಳಗೊಂಡಂತೆ ತಮ್ಮ ವಾಹನಗಳನ್ನು ಪೂಜಿಸಿದಾಗ ಆಯುಧ ಪೂಜೆಯು ವಾಹನ ಪೂಜೆಯಾಗಿ ಬಿಟ್ಟಿದೆ. ವಾಹನ ಪೂಜೆಯ ಸಮಯದಲ್ಲಿ ಬಳಕೆಯಲ್ಲಿರುವ ಎಲ್ಲಾ ರೀತಿಯ ವಾಹನಗಳನ್ನು ಸಿಂಧೂರ ಹಾರಗಳು,ಮ ಮಾವಿನ ಎಲೆಗಳು ಹಾಗೂ ಬಾಳೆ ಸಸಿಗಳಿಂದ ಅಲಂಕರಿಸಿ ಪೂಜಿಸಲಾಗುತ್ತಿದ್ದು.
ವಾಹನ ಪೂಜೆಯ ಸಮಯದಲ್ಲಿ ಅತ್ಯಂತ ಮಹತ್ವಪೂರ್ಣವಾಗಿ ಬಿಳಿ ಕುಂಬಳಕಾಯಿಯನ್ನು ಸಿಂಧೂರ ಹಾಹೂ ಅರಿಶಿನದಿಂದ ಅಲಂಕರಿಸಲಾಗುತ್ತದೆ ಮತ್ತು ಎಲ್ಲಾ ರೀತಿಯ ಅನಿಷ್ಟಗಳನ್ನು ತೊಡೆದುಹಾಕಲು ವಾಹನದ ಮುಂದೆ ಒಡೆದು ಹಾಕಲಾಗುತ್ತದೆ. ಈ ಬಾರಿ ಆಯುಧ ಪೂಜೆಯನ್ನು ಅಕ್ಟೋಬರ್ 4 ರಂದು ಮಂಗಳವಾರ ಆಚರಿಸಲಾಗಿದ್ದು ಬಹುತೇಕ ಎಲ್ಲಾ ಸಿನಿಮಾ ಸ್ಟಾರ್ ನಟರ ಮನೆಯಲ್ಲಿಯೂ ಕೂಡ ಅತ್ಯಂತ ವಿಜ್ರಂಭಣೆಯಿಂದ ಆಯುಧ ಪೂಜೆ ನೆರವೇರಿಸಲಾಗಿದೆ. ಇದಕ್ಕೆ ಪುನೀತ್ ಅವರ ಮನೆಯು ಹೊರತಾಗಿಲ್ಲ
ಹೌದು ನಮ್ಮ ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ ಮತ್ತು ತಮ್ಮ ಮುಗ್ಧ ನಗು ಮುಖಾಂತರ ಕೋಟಿ ಅಭಿಮಾನಿಗಳ ಮನಸ್ಸು ಗೆದ್ದಿದ್ದ ಸ್ಟಾರ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಕರ್ನಾಟಕ ಕಂಡ ರಾಜರತ್ನನಾಗಿದ್ದು ಎಲ್ಲರ ಅಚ್ಚುಮೆಚ್ಚಿನ ಅಪ್ಪು ಕೂಡ ಆಗಿದ್ದರು .ಹೌದು ಅಪ್ಪು ಅವರ ಮೇಲೆ ಇಡೀ ಕರ್ನಾಟಕದ ಜನತೆಗೆ ಬಹಳ ಪ್ರೀತಿ ಮತ್ತು ಗೌರವವಿದ್ದು ಅಪ್ಪು ಅವರು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತ ಚಿತ್ರರಂಗ ಕಂಡ ಅದ್ಭುತವಾದ ನಟ ಹಾಗೂ ಡ್ಯಾನ್ಸರ್ ಆಗಿದ್ದರು.
ಇನ್ನು ಅಪ್ಪು ಅವರ ಅವರ ಕಾರುಗಳ ಕಲೆಕ್ಷನ್ ಬಗ್ಗೆ ಹೇಳುವುದಾದರೆ ಅಪ್ಪು ಅವರ ಬಳಿ ಸುಮಾರು 9 ಕಾರ್ ಗಳಿದ್ದು ಮೊದಲನೆಯದಾಗಿ ನಿಸಾನ್ ಜಿ.ಟಿ.ಆರ್ ಈ ಕಾರ್ ನ ಬೆಲೆ 2.15 ಕೋಟಿ ರೂಪಾಯಿಗಳು. ಇನ್ನು ಎರಡನೆಯದಾಗಿ ಆಡಿ ಆರ್ 8 ಈ ಕಾರ್ ನ ಬೆಲೆ 2.72 ಕೋಟಿ ರೂಪಾಯಿಗಳಾಗಿದ್ದು ಮೂರನೆಯದು ಲ್ಯಾಂಭೋರ್ಗಿನಿ ಯೂರಸ್ ಈ ಕಾರ್ ನ ಬೆಲೆ 3.1ಕೋಟಿ ರೂಪಾಯಿಗಳಾಗಿದೆ.
ಇನ್ನು ನಾಲ್ಕನೆಯದು ರೇಂಜ್ ರೋವರ್ Vogue ಆಗಿದ್ದು ಇದರ ಬೆಲೆ 1.95 ಕೋಟಿ ರೂ ಪಾಯಿಗಳು.
ಹಾಗೇಯೇ ಐದನೆಯದು ವೋಲ್ವೋ ಎಕ್ಸ್.ಸಿ. 90, ಇದರ ಬೆಲೆ 80 ಲಕ್ಷ ರೂಪಾಯಿಗಳು.ಇನ್ನು ಆರನೆಯದು ಟೊಯೋಟಾ ಫಾರ್ಚ್ಯುನರ್. ಈ ಕಾರ್ ನ ಬೆಲೆ 33.6 ಲಕ್ಷ ರೂಪಾಯಿಗಳಾಗಿದ್ದು ಏಳನೆಯದು ಮಿನಿ ಕೂಪರ್ ಕನ್ವರ್ಟಿಬ ಇದರ ಬೆಲೆ 38.3 ಲಕ್ಷ ರೂಪಾಯಿಗಳು. ಹಾಗೆಯೇ ಎಂಟನೆಯದು Ford Endeavor, ಇದರ ಬೆಲೆ 33.7 ಲಕ್ಷ ರೂಪಾಯಿಗಳಾಗಿದೆ. ಇನ್ನು ಕೊನೆಯದಾಗಿ ಆಡಿ ಕ್ಯೂ7 ಇದರ ಬೆಲೆ 82 ಲಕ್ಷ ರೂಪಾಯಿಗಳಾಗಿದೆ.
ಸದ್ಯ ಎಲ್ಲಾ ಕಾರುಗಳಿಗೂ ಪೂಜೆ ಮಾಡಲಾಗಿದ್ದು ಈ ವರ್ಷವೂ ಕೂಡ ಪುನೀತ್ ಅವರ ಆಸೆಯಂತೆ ಅವರ ಮನೆಯಲ್ಲಿ ಅವರ ಪತ್ನಿ ಅಶ್ವಿನಿ ಆಯುಧ ಪೂಜೆ ನೆರವೇರಿಸಿದ್ದಾರೆ.
ಪುನೀತ್ ಅವರ ಅನುಪಸ್ಥಿತಿಯಲ್ಲಿಯೂ ಸಹ ಅವರ ನೆಚ್ಚಿನ ವಾಹನಗಳಿಗೆ ಅಶ್ವಿನಿ ಅವರು ಪೂಜೆ ಸಲ್ಲಿಸಿದ್ದು ಬಹಳ ಪ್ರೀತಿಸುತ್ತಿದ್ದ ಪತಿಯನ್ನು ಕಳೆದುಕೊಂಡ ನೋವಿನಲ್ಲಿದ್ದರೂ ಸಹ ಪುನೀತ್ ಅವರ ಸಾಕಷ್ಟು ಉಳಿತು ಹೋದ ಕನಸುಗಳನ್ನು ನನಸಾಗಿಸುವಲ್ಲಿ Ashwini ತೊಡಗಿದ್ದಾರೆ. ಅದರಂತೆ ಅಪ್ಪು ಅವರ ಕಾರುಗಳಿಗೆ ಪೂಜೆ ಮಾಡುವುದರ ಮೂಲಕ ಅಪ್ಪುವಿನ ಆತ್ಮಕ್ಕೆ ಸಂತಸವನ್ನು ನೀಡಿದ್ದಾರೆ ಅಶ್ವಿನಿಯವರು.
ಪುನೀತ್ ಅವರು ಕಾರ್ ಪ್ರಿಯರು. ಹೊಸದಾದ ಯಾವುದೇ ಮಾಡಲು ಕಾರು ಅಥವಾ ಬೈಕ್ ಬಂದರು ಅದನ್ನ ಒಮ್ಮೆ ಓಡಿಸಿ ನೋಡಿ ಇಷ್ಟವಾದರೆ ಅದನ್ನು ಖರೀದಿ ಮಾಡುತ್ತಿದ್ದರಂತೆ. ಸದ್ಯ ಈ ವರ್ಷದ ಆಯುಧ ಪೂಜೆಯ ದಿನ ಪುನೀತ್ ಇಲ್ಲದ ಇದ್ದರೂ ಕೂಡ ಅವರ ಬಳಿ ಇದ್ದ ಎಲ್ಲಾ ಕಾರ್ ಹಾಗೂ ಬೈಕುಗಳಿಗೆ ಅಶ್ವಿನಿ ಪೂಜೆ ಸಲ್ಲಿಸಿದ್ದು ನಿಜಕ್ಕೂ ವಿಶೇಷವಾಗಿತ್ತು.