ಮುಂದಿನ ವಾರದಲ್ಲಿ ಟಿ20 ವಿಶ್ವಕಪ್ ಗೆ ಟೀಮ್ ಇಂಡಿಯಾ ಪ್ರಕಟ, ತಂಡದಲ್ಲಿ 12 ಆಟಗಾರರ ಸ್ಥಾನ ಫಿಕ್ಸ್, ಇನ್ನು ಯಾರೆಲ್ಲಾ ಸೇರಬಹುದು ನೋಡಿ
ಸದ್ಯ ವಿಶ್ವಕಪ್ ಪಂದ್ಯಾವಳಿ ಹತ್ತಿರವಾಗುತ್ತಿದ್ದು ತಂಡದ ಪ್ರಕಟಿಸುವ ಗಡುವು ಸಮೀಪಿಸುತ್ತಿದೆ.ಸದ್ಯ ಈಗಾಗಲೇ ಇಂಗ್ಲೆಂಡ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿಶ್ವಕಪ್ಗೆ ತಂಡಗಳನ್ನು ಪ್ರಕಟಿಸಿದ್ದು ಆದರೆ ಟೀಂ ಇಂಡಿಯಾ ಮಾತ್ರ ಇನ್ನೂ ತಂಡವನ್ನು ಪ್ರಕಟಿಸಲು ಸಮಯ ತೆಗೆದುಕೊಳ್ಳುತ್ತಿದೆ.ಟೀಂ ಇಂಡಿಯಾ ತಂಡ ಪ್ರಕಟಿಸಲು ಆಟಗಾರರ ಗಾಯದ ಸಮಸ್ಯೆ ದೊಡ್ಡ ಅಡ್ಡಿಯಾಗಿದ್ದು ಮೂಲಗಳ ಪ್ರಕಾರ ಬಿಸಿಸಿಐ ಪ್ರಮುಖ ಆಟಗಾರರ ಫಿಟ್ನೆಸ್ ವರದಿಗಾಗಿ ಕಾಯುತ್ತಿದೆ. ಮುಖ್ಯವಾಗಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಅವರ ಫಿಟ್ನೆಸ್ ವರದಿಗಾಗಿ ಬಿಸಿಸಿಐ ಕಾಯುತ್ತಿದೆ ಎನ್ನಲಾಗಿದೆ.
ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನಿಂದ ಬಳಲುತ್ತಿದ್ದು ಹರ್ಷಲ್ ಪಟೇಲ್ ಗಾಯದಿಂದ ಮರಳಲು ಸಜ್ಜಾಗಿದ್ದಾರೆ. ಪ್ರಮುಖ ಆಲ್ರೌಂಡರ್ ರವೀಂದ್ರ ಜಡೇಜಾ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಅವರು ವಿಶ್ವಕಪ್ ಟೂರ್ನಿಯಲ್ಲಿ ಆಡುವುದು ಬಹುತೇಕ ಅನುಮಾನವಾಗಿದ್ದು ಎಲ್ಲವೂ ಅಂದುಕೊಂಡಂತೆ ಆದರೆ ಏಷ್ಯಾಕಪ್ 2022ರ ಫೈನಲ್ ಪಂದ್ಯದ ನಂತರ ಮುಂಬರುವ ವಿಶ್ವಕಪ್ ಪಂದ್ಯಾವಳಿಗಾಗಿ ತಂಡವನ್ನು ಬಿಸಿಸಿಐ ಹೆಸರಿಸುವ ಸಾಧ್ಯತೆ ಇದೆ. ಹೌದು ಗಾಯದ ಸಮಸ್ಯೆ ಆಯ್ಕೆದಾರರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ವಿಶ್ವಕಪ್ ಪಂದ್ಯಾವಳಿಗೆ ತಂಡವನ್ನು ಪ್ರಕಟಿಸಲು ಇನ್ನೂ ಸಮಯವಿದ್ದು ಪ್ರಸ್ತುತ ಏಷ್ಯಾಕಪ್ ಟೂರ್ನಿ ನಡೆಯುತ್ತಿದೆ. ಆದ್ದರಿಂದ ಆತುರ ಪಡಲು ಸಾಧ್ಯವಿಲ್ಲ. ಇನ್ನು ಜಸ್ಪ್ರಿತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಫಿಟ್ನೆಸ್ ಅಪ್ಡೇಟ್ ನಮಗೆ ಅಗತ್ಯವಿದ್ದು ಹಾಗಾಗಿ ಎಲ್ಲವೂ ಮುಗಿದ ತಂಡವನ್ನು ಪ್ರಕಟಿಸಲು ತೀರ್ಮಾನಿಸಲಾಗಿದೆ. ಗಾಯದ ಮೌಲ್ಯಮಾಪನಕ್ಕಾಗಿ ಜಸ್ಪ್ರೀತ್ ಈ ವಾರ ಎನ್ಸಿಎಗೆ ಹಾಜರಾಗುವ ನಿರೀಕ್ಷೆಯಿದ್ದು ಅದನ್ನು ನೋಡಿಕೊಂಡು ತೀರ್ಮಾನ ಮಾಡಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಅವರ ಫಿಟ್ನೆಸ್ ಬಗ್ಗೆ ಆಯ್ಕೆಗಾರರು ಹೆಚ್ಚು ಚಿಂತೆ ಮಾಡುತ್ತಿದ್ದು ಬುಮ್ರಾ ಫಿಟ್ನೆಸ್ ಬಗ್ಗೆ ಇನ್ನೂ ಅನುಮಾನಗಳಿದ್ದರೂ ಹರ್ಷಲ್ ಪಟೇಲ್ ಬಹುತೇಕ ಗುಣಮುಖರಾಗಿದ್ದಾರೆ.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಹರ್ಷಲ್ ಪಟೇಲ್ ಆಯ್ಕೆಯಾಗುವ ಸಾಧ್ಯತೆ ಇದ್ದು ಪಕ್ಕೆಲುಬಿನ ನೋವಿನಿಂದ ಬಳಲುತ್ತಿದ್ದ ಹರ್ಷಲ್ ಪಟೇಲ್ ಏಷ್ಯಾಕಪ್ನಿಂದ ಹೊರಗುಳಿದಿದ್ದರು. ಹರ್ಷಲ್ ಪಟೇಲ್ ಇನ್ನೂ ಎನ್ಸಿಎಯಲ್ಲಿದ್ದಾರೆ ಮುಂದಿನ ವಾರ ಫಿಟ್ನೆಸ್ ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. ಟೀಂ ಇಂಡಿಯಾಗೆ ಶೇಕಡಾ 80 ರಿಂದ 90 ರಷ್ಟು ತಂಡದ ಆಟಗಾರರ ಆಯ್ಕೆ ನಿರ್ಧಾರವಾಗಿದೆ ಎಂದು ರೋಹಿತ್ ಶರ್ಮಾ ಈಗಾಗಲೇ ಸುಳಿವು ನೀಡಿದ್ದು ಒಂದು ವೇಳೆ ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗದಿದ್ದರೆ ಮೊಹಮ್ಮದ್ ಶಮಿ ಆಯ್ಕೆಯಾಗುವ ಸಾಧ್ಯತೆ ಇದೆ.
ಮೊಣಕಾಲಿನ ಗಾಯದಿಂದಾಗಿ ರವೀಂದ್ರ ಜಡೇಜಾ ಟಿ20 ವಿಶ್ವಕಪ್ಗೆ ಆಯ್ಕೆಯಾಗುವ ಸಾಧ್ಯತೆ ಬಹುತೇಕ ಕಡಿಮೆ ಇದ್ಫು ಮುಂದಿನ ವಾರ ಹರ್ಷಲ್ ಪಟೇಲ್ ಫಿಟ್ನೆಸ್ ಪರೀಕ್ಷೆಯಲ್ಲಿ ತಮ್ಮ ಆಯ್ಕೆಯನ್ನು ನಿರ್ಧರಿಸಲಿದ್ದಾರೆ. ಏಷ್ಯಾಕಪ್ ನಡೆಯುತ್ತಿರುವುದರಿಂದ ಪಂದ್ಯಾವಳಿ ಮುಗಿದ ನಂತರ ತಂಡವನ್ನು ಆಯ್ಕೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 11 ರಂದು ಏಷ್ಯಾ ಕಪ್ ಫೈನಲ್ ಪಂದ್ಯದ ಬಳಿಜ ತಂಡವನ್ನು ಪ್ರಕಟಿಸುವ ನಿರೀಕ್ಷೆಯಿದ್ದು ತಂಡವನ್ನು ಪ್ರಕಟಿಸುವ ಮೊದಲು ಮುಂಬೈನಲ್ಲಿ ಆಯ್ಕೆ ಸಭೆಗಾಗಿ ಆಯ್ಕೆಗಾರರು ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಚರ್ಚಿಸುವ ಸಾಧ್ಯತೆಯಿದೆ. ಅದೇ ಸಭೆಯಲ್ಲಿ, ಭಾರತವು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಜೊತೆಗೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸರಣಿಗಳಿಗೆ ತಂಡವನ್ನು ಆಯ್ಕೆ ಮಾಡುತ್ತದೆ.
ಇನ್ನು ಟೀಮ್ ಇಂಡಿಯಾದಲ್ಲಿ ಕಣಕ್ಕಿಳಿಯಲು ಸಜ್ಜಾಗಿರುವ ಆಟಗಾರರು ಅಂದ್ರೆ, ನಾಯಕ ರೋಹಿತ್ ಶರ್ಮಾ, ಉಪನಾಯಕ KL ರಾಹುಲ್, ವಿರಾಟ್ ಕೊಹ್ಲಿ ಟಾಪ್-3 ಪ್ಲೇಯರ್ಸ್ ಆಗಿದ್ದಾರೆ. ಇನ್ನ ಸೂರ್ಯಕುಮಾರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ದೀಪಕ್ ಹೂಡಾ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಆರ್ಷ್ದೀಪ್, ಯಜುವೇಂದ್ರ ಚಹಲ್ ಬೌಲಿಂಗ್ ವಿಭಾಗದಲ್ಲಿ ಬಹುತೇಕ ಕಣಕ್ಕಿಳಿಯುವ ಸಾಧ್ಯತೆ ಇದೆ.
ಈಗಾಗಲೇ 12 ಆಟಗಾರರು ಸ್ಥಾನವನ್ನ ಕನ್ಫರ್ಮ್ ಮಾಡಿದ್ಲರೆ ಉಳಿದ 3 ಸ್ಥಾನಗಳಿಗೆ 6 ಆಟಗಾರರು ರೇಸ್ನಲ್ಲಿದ್ದಾರೆ. ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಪೈಪೋಟಿ ನಡೆಸಿದ್ರೆ, ಆರ್.ಅಶ್ವಿನ್, ಇಂಜುರಿಯಿಂದ ರೆಸ್ಟ್ ಪಡೀತಿರುವ ಜಸ್ಪ್ರಿತ್ ಬೂಮ್ರಾ, ಹರ್ಷಲ್ ಪಟೇಲ್ ಕೂಡ ಸ್ಲಾಟ್ ಫಿಕ್ಸ್ ಮಾಡೋಕೆ ರೆಡಿಯಾಗಿದ್ದಾರೆ.