ವಾರ್ತಾ ಮಂಜರಿ
Trending Stories, Viral News, Gossips & Everything in Kannada

ವೈಯುಕ್ತಿಕ ಜೀವನದ ಬಗ್ಗೆ ದಿಟ್ಟ ನಿರ್ಧಾರ ಕೈಗೊಂಡ ಸಮಂತಾ, ಕಾದಿದೆ ಹಬ್ಬ ಎಲ್ಲರಿಗೂ.

251
ನಟಿ ಸಮಂತಾ ಇದೀಗ ಸ್ವತಂತ್ರ ವಾಗಿ ಬದುಕುತ್ತಿದ್ದು, ಸ್ವತಂತ್ರವಾಗಿಯೇ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ. ನಟಿ ಸಮಂತಾರವರು ವೈವಾಹಿಕ ಜೀವನದಿಂದ ದೂರವಾಗಿ ತನ್ನ ಬದುಕನ್ನು ತಾನೇ ನೋಡಿಕೊಳ್ಳುತ್ತಿದ್ದಾರೆ. ಹೌದು, ನಟಿ ಸಮಂತಾ ಹಾಗೂ ನಾಗಚೈತನ್ಯ ಪ್ರೀತಿಸಿ ಮದುವೆಯಾದವರು. ಆದರೆ ಇದೀಗಇಬ್ಬರೂ ದೂರವಾಗಿದ್ದಾರೆ. ಅದಲ್ಲದೆ, ಮದುವೆಯಾಗುವ ಮೊದಲು  ನಾಗ ಚೈತನ್ಯ ಹಾಗೂ ಸಮಂತಾರವರ ಜೋಡಿ ಸಿನಿ ಪರದೆಯ ಮೇಲೆ ಎಲ್ಲರಿಗೂ ಇಷ್ಟವಾಗಿ ಬಿಟ್ಟಿದ್ದರು. ಹೀಗಿರುವಾಗ 2017 ರ ವೇಳೆಗೆ ಈ ಇಬ್ಬರೂ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಕಳೆದ ವರ್ಷ ಕೆಲವು ವೈಯಕ್ತಿಕ ಕಾರಣದಿಂದ ಈ ಇಬ್ಬರೂ ಬೇರೆ ಬೇರೆಯಾದರು.
ತದನಂತರದಲ್ಲಿ ದಿನಗಳಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಅವಕಾಶಗಳು ಬಂದವು. ಅದಲ್ಲದೆ ಸಮಂತಾರವರ ಆಯ್ಕೆಗಳು ಬದಲಾದವು. ಅದರ ಜೊತೆಗೆ ಮನಸ್ಸು ಶಾಂತಿ ಕಾಪಾಡಿಕೊಳ್ಳಲು ಆಗಾಗ ಬೇರೆ ಬೇರೆ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುತ್ತಿದ್ದು, ಜೊತೆಗೆ ಸಿನಿಮಾದಲ್ಲಿಯೂ ಬ್ಯುಸಿಯಾಗಿದ್ದಾರೆ. ಅಂದಹಾಗೆ, ಪುಷ್ಪ ಸಿನಿಮಾದಲ್ಲಿ ಐಟಮ್ ಹಾಡಿಗೆ ಸೊಂಟ ಬಳುಕಿಸಿದ ಸಮಂತಾರವರಿಗೆ ಬಾರಿ ಬೇಡಿಕೆಯು ಹೆಚ್ಚಾಗಿದೆ. ಹೀಗಾಗಿ ಅನೇ ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಬಂದಿದೆ. ಸದ್ಯಕ್ಕೆ ಸಮಂತಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಆದರೆ ಇದೀಗ ನಟಿ ಸಮಂತಾರವರು ಕೆಲವೊಂದು ವಿಚಾರಗಳಿಗೆ ಸಂಬಂಧ ಪಟ್ಟಂತೆ ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಅವರು ತೆಗೆದುಕೊಂಡಿರುವ ನಿರ್ಧಾರ ಕೇಳಿದರೆ ಅಚ್ಚರಿಯಾಗುತ್ತದೆ.
ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿರುವ ಸಮಂತಾರವರು ವೈವಾಹಿಕ ಜೀವನಕ್ಕೆ ಪೂರ್ಣ ಹಾಡಿದ ನಂತರದಲ್ಲಿ ಸುದ್ದಿಯಾಗಿದ್ದೆ ಹೆಚ್ಚು ಎನ್ನಬಹುದು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿ ಇರುತ್ತಿದ್ದ ಸಮಂತಾರವರು ಸದ್ಯಕ್ಕೆ ಸೋಶಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಂಡಿದ್ದಾರೆ. ಅದಲ್ಲದೆ, ಅವರ ಕುರಿತಾಗಿ ಸಾಕಷ್ಟು ವದಂತಿಗಳು, ಗಾಸಿಪ್ ಗಳು ಕೇಳಿಬರುತ್ತಲೇ ಇದೆ. ಇತ್ತೀಚೆಗಷ್ಟೇ ಆರೋಗ್ಯ ಸರಿಯಿಲ್ಲ ಸಮಂತಾ ಕೆಲವು ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಮಾತುಗಳು ಬರುತ್ತಿವೆ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ ನಟಿ ಸಮಂತಾ.
ಈ ಹಿಂದೆ ತನ್ನ ವೈಯಕ್ತಿಕ ಜೀವನದ ಬಗ್ಗೆ ವದಂತಿಗಳನ್ನು ಸೃಷ್ಟಿಸಿದ ಯೂಟ್ಯೂಬ್ ಚಾನೆಲ್ ವೆಬ್ ಸೈಟ್ ಗಳ ಮೇಲೆ ಸ್ಯಾಮ್ ಕೋರ್ಟ್ ಮೊರೆ ಹೋಗಿದ್ದರ. ಆ ವೇಳೆ ನಾಗ ಚೈತನ್ಯ ಜೊತೆಗಿನ ಬ್ರೇಕಪ್ ಗೆ ಸಮಂತಾ ವರ್ತನೆಯೇ ಕಾರಣ ಎಂದು ಹಲವು ಲೇಖನಗಳು ಪ್ರಕಟವಾಗಿತ್ತು. ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ವದಂತಿ ಹಬ್ಬಿತ್ತು. ಆದರೆ ಇದೀಗ ತನ್ನ ಆರೋಗ್ಯ ಕುರಿತಂತೆ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ನೊಂದುಕೊಂಡಿದ್ದಾರೆ. ಸಮಂತಾ ಇದೀಗ ಆಯಾ ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ಸಮಂತಾ ದೂರು ದಾಖಲಿಸಲು ಸಿದ್ದತೆ ನಡೆಸುತ್ತಿದ್ದಾರಂತೆ ಎನ್ನುವ ಸುದ್ದಿಯೂ ಕೇಳಿ ಬಂದಿದೆ. ಅದರ ಜೊತೆಗೆ, ಸಮಂತಾ ತಾನು ನಟಿಸಲಿರುವ ಚಿತ್ರಗಳ ಬಗ್ಗೆಯೂ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಹೌದು, ತಾವು ನಟಿಸುವ ಸಿನಿಮಾಗಳಲ್ಲಿ ಗ್ಲಾಮರ್ ಶೋ ಇಲ್ಲದೆ ಲಿಪ್ ಲಾಕ್ ದೃಶ್ಯಗಳಿಂದ ದೂರ ಉಳಿಯಲಿದ್ದಾರೆ, ಈ ಷರತ್ತುಗಳಿಗೆ ಒಪ್ಪಿದರೆ ಮಾತ್ರ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.