ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರೋಹಿತ್ ಶರ್ಮಾ ಭಾರಿಸಿದ ಸಿಕ್ಸರ್ ಬೌಲ್ ಭದ್ರತಾ ಸಿಬ್ಬಂದಿ ಗೆ ಬಲವಾಗಿ ಬಿತ್ತು… ಸಿಕ್ಸ್ ವಿಡಿಯೋ ವೈರಲ್

115

ಸದ್ಯ ಏಷ್ಯಾ ಕಪ್ 2022 ರ ಅಂಗವಾಗಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಮಹತ್ವದ ಪಂದ್ಯದಲ್ಲಿ ಪ್ರಮುಖ ಘಟನೆಯೊಂದು ನಡೆದಿದ್ದು ಭಾರತದ ಇನ್ನಿಂಗ್ಸ್ ಸಮಯದಲ್ಲಿ ರೋಹಿತ್ ಶರ್ಮಾ ಒಂದು ಬೃಹತ್ ಸಿಕ್ಸರ್ ಅನ್ನು ಹೊಡೆದರು ಅದು ಭದ್ರತಾ ಸಿಬ್ಬಂದಿಗೆ ಹೋಗಿ ಬಡಿದಿದೆ.
ಸದ್ಯ ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು ನೆಟಿಜನ್ ಗಳು ರೋಹಿತ್ ಸಿಕ್ಸರ್‌ ಕುರಿತಾಗಿ ತಮಾಷೆಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಭಾರತದ ಇನ್ನಿಂಗ್ಸ್‌ನಲ್ಲಿ ಅಸಿತಾ ಫೆರ್ನಾಂಡೋ ಎಸೆದ 10ನೇ ಓವರ್‌ನಲ್ಲಿ ಈ ಅಚಾನಕ್ ಘಟನೆ ನಡೆದಿದೆ.

ಹೌದು ರೋಹಿತ್ ಶರ್ಮಾ ಈ ಓವರ್‌ನ ಮೊದಲ ಎಸೆತವನ್ನು ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್ ಕಡೆಗೆ ಬೃಹತ್ ಸಿಕ್ಸರ್‌ಗೆ ಹೊಡೆದಿದ್ದು ರೋಹಿತ್ ಗೆ ಬೌಂಡರಿ ಗೆರೆಯಿಂದ ಹೊರಗೆ ಬಿದ್ದ ಚೆಂಡು ಅಲ್ಲಿದ್ದ ಸೆಕ್ಯುರಿಟಿಗೆ ಬಲವಾಗಿ ಬಡಿದಿದೆ. ಅವರು ತಮ್ಮ ಸಹ ಭದ್ರತಾ ಸಿಬ್ಬಂದಿಯೊಂದಿಗೆ ಮಾತನಾಡುತ್ತಿದ್ದರು ಮತ್ತು ಚೆಂಡನ್ನು ಗಮನಿಸಲಿಲ್ಲ. ಆದರೆ ಅವರಿಗೆ ಗಂಭೀರ ಗಾಯವಾಗದ ಕಾರಣ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಗೆ 173 ರನ್ ಗಳಿಸಿದ್ದು ನಾಯಕ ರೋಹಿತ್ ಶರ್ಮಾ (41 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 72) ನಿರ್ಣಾಯಕ ಇನಿಂಗ್ಸ್ ಆಡಿದರು. ಅಗ್ರ-2 ಬ್ಯಾಟ್ಸ್ ಮನ್ ಗಳು ವಿಫಲರಾದಾಗ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರು.

ಅವರ ನಂತರ ಸೂರ್ಯಕುಮಾರ್ ಯಾದವ್ (29 ಎಸೆತಗಳಲ್ಲಿ 4, ಒಂದು ಸಿಕ್ಸರ್ ಸಹಿತ 34) ಮಾತ್ರ ಮಿಂಚಿದ್ದು ಮತ್ತೊಮ್ಮೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಪಂತ್(17), ಹಾರ್ದಿಕ್ ಪಾಂಡ್ಯ(17) ಮತ್ತು ದೀಪಕ್ ಹೂಡಾ(3) ವಿಫಲರಾದರು. ಕೊನೆಯಲ್ಲಿ ರವಿಚಂದ್ರನ್ ಅಶ್ವಿನ್ (ಔಟಾಗದೆ 15) ಅಮೂಲ್ಯ ರನ್ ಗಳಿಸಿ ತಂಡಕ್ಕೆ ಹೋರಾಟದ ಗುರಿ ನೀಡಿದ್ದು ಲಂಕಾ ಬೌಲರ್‌ಗಳಲ್ಲಿ ದಿಲ್ಶಾನ್ ಮಧುಶಂಕ ಮೂರು ವಿಕೆಟ್ ಪಡೆದರು.ಚಾಮಿಕಾ ಕರುಣರತ್ನೆ ಮತ್ತು ದಸನ್ ಶಾನಕ ತಲಾ ಎರಡು ವಿಕೆಟ್ ಪಡೆದರು. ಮಹಿಷ್ ಥಿಕ್ಷನ್ ಒಂದು ವಿಕೆಟ್ ಪಡೆದಿದ್ದು ಬಳಿಕ ಶ್ರೀಲಂಕಾಕ್ಕೆ ಆರಂಭಿಕರಾದ ಪಾತುಮ್ ನಿಸ್ಸಾಂಕ ಮತ್ತು ಕುಶಾಲ್ ಮೆಂಡಿಸ್ ಉತ್ತಮ ಆರಂಭ ನೀಡಿದರು. ಈ ಜೋಡಿಯು ಪವರ್ ಪ್ಲೇನಲ್ಲಿ ಬೃಹತ್ ಬೌಂಡರಿಗಳೊಂದಿಗೆ 60 ರನ್ ಗಳಿಸಿತು. ಭಾರತ ವಿರುದ್ಧ ಪಾತುಮ ಹಾಗೂ ಕುಶಾಲ್ ಮೆಂಡೀಸ್ ತಲಾ ಅರ್ಧಶತಕ ದಾಖಲಿಸಿ ತಂಡಕ್ಕೆ ಅದ್ಭುತ ಆರಂಭ ನೀಡಿದ್ರು. ಅಂತಿಮವಾಗಿ ಭಾನುಕ ರಾಜಪಕ್ಷೆ ಅಜೇಯ 25 ಹಾಗೂ ದಸುನ್ ಶನಕ ಅಜೇಯ 33 ರನ್‌ಗಳಿಸಿ ತಂಡವನ್ನ ಗೆಲುವಿನ ದಡ ತಲುಪಿಸಿದರು.