ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸಿನಿಮಾ ಹಾಗೂ ಕಿರುತೆರೆಯಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ಜಗ್ಗೇಶ್..ನೋಡಿ

426
ಕನ್ನಡ ಸಿನಿಮಾರಂಗದಲ್ಲಿ ನವರಸ ನಾಯಕರೆಂದೇ ಖ್ಯಾತಿ ಗಳಿಸಿರುವವರು ಜಗ್ಗೇಶ್. ಹೌದು ತಮ್ಮ ಅಭಿನಯ ಹಾಗೂ ಮಾತಿನ ಶೈಲಿಯಿಂದಲೇ ಅಪಾರ ಸಂಖ್ಯೆಯ  ಅಭಿಮಾನಿಗಳನ್ನು ಹೊಂದಿರುವರಲ್ಲಿ ನಟ ಜಗ್ಗೇಶ್ ಕೂಡ ಒಬ್ಬರು. ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ನಾಯಕನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರರಂಗ ಮಾತ್ರವಲ್ಲದೇ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದು, ವಿಧಾನ ಸಭೆ ಮತ್ತು ವಿಧಾನ ಪರಿಷತ್ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಂದಹಾಗೆ, ಜಗ್ಗೇಶ್ ಸುಮಾರು ಮೂರು ದಶಕಗಳಿಗೂ ಹೆಚ್ಚಿನ ಸಿನಿಜೀವನದಲ್ಲಿ 120 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
1963, ಮಾರ್ಚ್ 17 ರಂದು ಶಿವಲಿಂಗಪ್ಪ ಮತ್ತು ನಂಜಮ್ಮ ದಂಪತಿಗಳಿಗೆ ಬೆಂಗಳೂರಿನ ಶ್ರೀರಾಮಪುರದಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರು ಈಶ್ವರ ಗೌಡ. ಇವರು ಮೂಲತಃ ತುಮಕೂರು ಜಿಲ್ಲೆಯ ಮಾಯಸಂದ್ರದವರು. ಇವರಿಗೆ ಇಬ್ಬರು ಸಹೋದರ ಮತ್ತು ಸಹೋದರಿಯರಿದ್ದಾರೆ. ಇವರ ಸಹೋದರ ಕೋಮಲ್ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.1982 ರಲ್ಲಿ ನಿರ್ದೇಶಕ ಕೆ.ವಿ ರಾಜು ಮತ್ತು ರಾಜಕಿಶೋರ್ ಅವರ ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದರು. ತದನಂತರ ಕೆಲ ಚಿತ್ರಗಳಲ್ಲಿ ಖಳನಾಯಕ ಮತ್ತು ಪೋಷಕ ನಟನಾಗಿ ನಟಿಸಿದರು. ಇವರ ನಟನೆಯ ರಣಧೀರ, ಸಾಂಗ್ಲಿಯಾನ, ರಣರಂಗ, ಯುದ್ಧಕಾಂಡ, ಪರಶುರಾಮ್, ರಾಣಿ ಮಹಾರಾಣಿ, ಸೋಲಿಲ್ಲದ ಸರದಾರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದವು.
1992 `ಭಂಡ ನನ್ನ ಗಂಡ’ ಚಿತ್ರದ ಮೂಲಕ ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು. ಆ ವರ್ಷದಲ್ಲೇ ತೆರೆಗೆ ಬಂದ ತರ್ಲೆ ನನ್ಮಗ’ ಚಿತ್ರ ಇವರಿಗೆ ನಾಯಕನಾಗಿ ಬಿಗ್‌ ಬ್ರೇಕ್ ನೀಡಿತು. ಆದಾದ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ತನ್ನ ಅಭಿನಯದಿಂದಲೇ ಅಭಿಮಾನಿಗಳ ಮನಸ್ಸನ್ನು ಸೊರೆ ಗೊಳಿಸಿದರು. ಇನ್ನು, 2006 ರಲ್ಲಿ ಇವರ ನೂರನೇ ಚಿತ್ರ ಮಠ ಭರ್ಜರಿ ಯಶಸ್ಸು ಕಂಡಿತು. 2012 ರಲ್ಲಿ ತಮ್ಮ ಪುತ್ರ ಗುರುರಾಜ್‌ರ `ಗುರು’ 2017 ರಲ್ಲಿ ತೆರೆಕಂಡ `ಮೇಲುಕೋಟೆ ಮಂಜ’ ಚಿತ್ರಗಳನ್ನು ನಿರ್ದೇಶನ ಮಾಡಿ ನಿರ್ದೇಶಕರಾದರು. ಕಿರುತೆರೆಯಲ್ಲಿ ಹಲವು ಕಾರ್ಯಕ್ರಮಗಳ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಸದ್ಯಕ್ಕೆ ಇವರ ಬಹುನಿರೀಕ್ಷಿತ ಸಿನಿಮಾ ತೋತಪುರಿ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ತನ್ನ ಸಿನಿಮಾ ಹಾಗೂ ಕಿರುತೆರೆಯ ಸಂಭಾವನೆಯ  ಕುರಿತು ಬಹಿರಂಗ ಪಡಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಸಖತ್ ಸುದ್ದಿ ಮಾಡುತ್ತಿರುವ ಹಾಗೂ ನವರಸನಾಯಕ ಜಗ್ಗೇಶ್ ಅಭಿನಯದ ಹಾಗೂ ನೀರ್​​ದೋಸೆ ಸಿನಿಮಾ‌ ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಈ ವರ್ಷದ ಬಹುನಿರೀಕ್ಷಿತ ಚಿತ್ರ ತೋತಾಪುರಿ  ಇದೇ ತಿಂಗಳ ಸೆಪ್ಟೆಂಬರ್ 30 ರಂದು ತೆರೆಗೆ ಬರುತ್ತಿದೆ.  ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಜಗ್ಗೇಶ್ ಅವರು, ಸಂಭಾವನೆ ವಿಚಾರದಲ್ಲಿ ನನ್ನದು ಮುಚ್ಚುಮರೆ ಏನಿಲ್ಲ. ಸಿನಿಮಾಗೆ 2 ಕೋಟಿ ರೂ. ಪಡೆಯುತ್ತೇನೆ. ಟಿವಿಯಲ್ಲಿ 3  ಕೋಟಿ ಪಡೆಯುತ್ತೇನೆ ಎಂದು ನವರಸ ನಾಯಕ ಜಗ್ಗೇಶ್‌ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೇ, ನನ್ನ ಕುಟುಂಬ ಸಾಕಲು ನನಗೆ ಇಷ್ಟು ಸಂಭಾವನೆ ಸಾಕು. ನನ್ನ ಹೆಂಡತಿ ಮಕ್ಕಳನ್ನು ನೆಮ್ಮದಿಯಿಂದ ಸಾಕುವುದಕ್ಕೆ ಇಷ್ಟು ಸಾಕಾಗುತ್ತದೆ. ಬೇರೆ ಯಾವ ವಿಚಾರಕ್ಕೂ ನಾನು ತಲೆ ಹಾಕುವುದಿಲ್ಲ’ ಎಂದು ಹೇಳಿದ್ದಾರೆ.
‘ ನಾನು ಏನೇ ಮಾತನಾಡಿದರೂ ಸಾಮಾಜಿಕ ಜಾಲತಾಣದಲ್ಲಿ ಹೆಬ್ಬೇಟ್ಟು ತೋರಿಸಿಬಿಡುತ್ತಾರೆ. ಕೆಲವರು ಮೇಲಕ್ಕೆ ತೋರಿಸಿದರೆ ಕೆಲವರು ಕೆಳಗೆ ಹಾಕುತ್ತಾರೆ. ಯಾರೋ ಕೆಲವರು ಜೀವನದಲ್ಲಿ ಸಾಧನೆ ಮಾಡದೇ ಇರೋರೆಲ್ಲಾ ಪ್ರತಿಕ್ರಿಯೆ ಕೊಡುತ್ತಾರೆ. ವಿಷಯದ ಗಂಭೀರತೆ ಅರ್ಥನೇ ಮಾಡಿಕೊಳ್ಳಲ್ಲ. ಹಾಗಾಗಿ ಇನ್ನು ಮುಂದೆ ಯಾವುದೇ ವಿಷಯಕ್ಕೆ ಹೋಗಲ್ಲ. ನನಗಿರೋದು ಒಬ್ಬರೆ ಹೆಂಡ್ತಿ, ಎರಡು ಮಕ್ಕಳು. ನನ್ನ ಮಕ್ಕಳು ನನ್ನ ಹೆಸರನ್ನು ಎಲ್ಲಿಯೂ ಬಳಸಿಕೊಳ್ಳುವುದಿಲ್ಲ. ನನಗೆ ಎರಡೆರಡು ಸೆಟಪ್‌ ಇಲ್ಲ. ಹಾಗಾಗಿ ೯ ಗಂಟೆಗೆ ಮನೆಗೆ ಹೋಗಿ ಸೇರಿಕೊಳ್ಳುತ್ಥೇನೆ. ಹಾಗಾಗಿ ನಮ್ಮದು ಸುಖಿ ಕುಟುಂಬ. ದೇವರನ್ನು ನಂಬಿಕೊಂಡು ಬದುಕಿದ್ದೇನೆ.
ನಮಗೆಲ್ಲ ಭಗವಂತ ಆನಂದದ ಜೀವನ ಕೊಟ್ಟಿದ್ದಾನೆ’  ಎಂದಿದ್ದಾರೆ. ತನ್ನ ಪ್ರಾರಂಭದ ದಿನಗಳನ್ನು ಮೆಲುಕು ಹಾಕಿದ ಜಗ್ಗೇಶ್ ಅವರು, ‘ಹಿಂದಿನ ಕಾಲದಲ್ಲಿ ನಾವು ಶೂಟಿಂಗ್ ಗೆ ಹೋಗುವಾಗ ಎಷ್ಟೆಲ್ಲಾ ಕಷ್ಟ ಪಡುತ್ತಿದ್ದೆವು. ಪ್ರಶ್ನೆ ಮಾಡಿದರೆ ಮುಖ್ಯ ದೃಶ್ಯವನ್ನೇ ಕತ್ತರಿಸುತ್ತೇನೆ ಎಂದು ನಿರ್ದೇಶಕರು ಬೆದರಿಸುತ್ತಿದ್ದರು. ಆಗ ತುಂಬಾ ಕಷ್ಟಪಡುತ್ತಿದ್ದೆವು. ಆದರೆ ಈಗ ಹಲೋ ಹಾಯ್‌ ಅಂತ ಅದೇನೋ ವೀಡಿಯೋ ಮಾಡಿ ದೀಢರ್‌ ಅಂತ ಫೇಮಸ್‌ ಆಗುತ್ತಾರೆ. ಚಿತ್ರರಂಗಕ್ಕೂ ಬಂದು ಬಿಡುತ್ತಾರೆ. ಇದು ಎಷ್ಟು ಸರಿ ತಪ್ಪು ಅಂತ ಯೋಚನೆ ಮಾಡುತ್ತಿರುತ್ತೇನೆ ಎಂದಿದ್ದಾರೆ.