ವಾರ್ತಾ ಮಂಜರಿ
Trending Stories, Viral News, Gossips & Everything in Kannada

ನಟ ಗಣೇಶ್ ಸದ್ದಿಲ್ಲದೇ ಮದುವೆಯಾಗಿದ್ದೇಕೆ ಗೊತ್ತಾ …ಕೊನೆಗೂ ಸಿಗ್ತು ಉತ್ತರ ನೋಡಿ

2,468

ಕನ್ನಡ ಸಿನಿಮಾರಂಗದಲ್ಲಿ ನಟನಾಗಿ ಸಾಕಷ್ಟು ಖ್ಯಾತಿ ಗಳಿಸಿಕೊಂಡವರು ಸಾಕಷ್ಟು ಜನರಿದ್ದಾರೆ. ಕೆಲವೊಮ್ಮೆ ಒಂದೇ ಒಂದು ಸಿನಿಮಾವು ಸ್ಟಾರ್ ಪಟ್ಟಕ್ಕೆ ಏರಲು ಅವಕಾಶ ಮಾಡಿಕೊಡುತ್ತದೆ. ಈ ನಟನಾ ಬದುಕಿನಲ್ಲಿ ಆದದ್ದು ಹೀಗೆಯೇ. ಒಂದೇ ಒಂದು ಸಿನಿಮಾದಿಂದ ಇವರ ಬದುಕಿಗೆ ದಿಕ್ಕೇ ಬದಲಾಯಿತು. ಎಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ಗೋಲ್ಡನ್ ಸ್ಟಾರ್ ಗಣೇಶ್. ಮೊದಲ ಬಾರಿಗೆ ಕಾಮಿಡಿ ಶೋಗಳಲ್ಲಿ ಕಾಣಿಸಿಕೊಂಡರು. ತದನಂತರದಲ್ಲಿ ಬೆಳ್ಳಿತೆರೆಯಲ್ಲಿ ಅವಕಾಶ ಗಿಟ್ಟಿಸಿಕೊಂಡರು.

ಹಲವು ಸಿನಿಮಾಗಳಲ್ಲಿ ನಟಿಸಿದ ಗಣೇಶ್ ಅವರಿಗೆ ಮುಂಗಾರು ಮಳೆ ಸಿನಿಮಾ ತಂದು ಕೊಟ್ಟ ಯಶಸ್ಸು ಬೇರೆ ಯಾವ ಸಿನಿಮಾದಲ್ಲಿ ಸಿಗಲೇ ಇಲ್ಲ. ಅಂದಹಾಗೆ, 2006 ರ ವೇಳೆಗೆ ಬಿಡುಗಡೆ ಗೊಂಡ ಚೆಲ್ಲಾಟ ಚಿತ್ರದಲ್ಲಿ ನಾಯಕನಾಗಿ ಎಂಟ್ರಿ ಕೊಟ್ಟರು. ಆದಾದ ಬಳಿಕ, ಯೋಗರಾಜ್ ಭಟ್ಟರ ನಿರ್ದೇಶನದಲ್ಲಿ ಮುಂಗಾರು ಮಳೆ ಸಿನಿಮಾದಲ್ಲಿ ಕಾಣಿಸಿಕೊಂಡರು.

ಮುಂಗಾರು ಮಳೆ ಚಿತ್ರ ಗಣೇಶ್ ಗೆ ಬಹುದೊಡ್ಡ ಮಟ್ಟಿಗೆ ಬಿಗ್ ಬ್ರೇಕ್ ನೀಡಿತು. ತದನಂತರದಲ್ಲಿ ಗೋಲ್ಡನ್ ಸ್ಡಾರ್ ನಾಯಕರಾಗಿ ಸುಮಾರು 35 ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ನಟನೆಗಾಗಿ ಹಲವು ಪ್ರಶಸ್ತಿಗಳನ್ನು ದೊರೆತಿವೆ. ಸಿನಿಮಾರಂಗದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದ ನಟ ಹೇಳದೇನೆ ರಾತ್ರೋ ರಾತ್ರಿ ಮದುವೆಯಾಗಿದ್ದು, ದೊಡ್ಡ ಮಟ್ಟಿಗೆ ಸುದ್ದಿಯಾಯಿತು. ಹೌದು ಗಣೇಶ್ ಅವರು ಯಾರಿಗೂ ಹೇಳದೇನೆ ಮದುವೆಯಾಗಿದ್ದು ಯಾಕೆ ಗೊತ್ತಾ, ಇಲ್ಲಿದೆ ಉತ್ತರ.

ಸದ್ಯಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಬೆಳ್ಳಿತೆರೆಯಲ್ಲಿ ಜನಪ್ರಿಯತೆ ಗಳಿಸಿಕೊಳ್ಳುವ ಮೊದಲು ಬದುಕು ಕಷ್ಟಕರವಾಗಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಪ್ರಾರಂಭದ ದಿನಗಳಲ್ಲಿ ರವಿಶಂಕರ್ ಗೌಡರವರು ತುಂಬಾನೇ ಸಹಾಯ ಮಾಡಿದ್ದರು. ಸದ್ಯಕ್ಕೆ ನಟ ಗಣೇಶ್ ಅವರು ಹಿರಿತೆರೆ ಹಾಗೂ ಕಿರುತೆರೆ ಲೋಕದಲ್ಲಿಯೂ ಸಕ್ರಿಯರಾಗಿದ್ದಾರೆ. ಹೌದು ಕಿರುತೆರೆ ಲೋಕದ ಶೋಗಳಲ್ಲಿ ನಿರೂಪಕರಾಗಿಯೂ ಕಾಣಿಸಿಕೊಂಡಿದ್ದು, ಈ ಹಿಂದೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಮಿನಿಟ್ ಎಂಬ ಶೋವನ್ನು ನಡೆಸಿಕೊಡುತ್ತಿದ್ದರು.

ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯೂ ಕೂಡ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಸಿಕ್ಕಿದೆ. ಅಂದಹಾಗೆ ವೈವಾಹಿಕ ಜೀವನಕ್ಕೆ ಬಂದರೆ, ಗಣೇಶ್ ಅವರು ಶಿಲ್ಪ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈ ದಂಪತಿಗಳಿಗೆ ಮುದ್ದಾದ ಇಬ್ಬರು ಮಕ್ಕಳಿದ್ದಾರೆ. ಮಕ್ಕಳೊಂದಿಗೆ ಆಗಾಗ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಅವರು ಕೂಡ ಮದುವೆಯ ವಿಚಾರವಾಗಿ ಬಹಳಷ್ಟು ಸುದ್ದಿಯಾಗಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪ ಒಬ್ಬರನ್ನೊಬ್ಬರು ಇಷ್ಟಪಟ್ಟೆ ಮದುವೆಯಾದವರು. ಒಬ್ಬ ಸ್ಟಾರ್ ನಟ ರಾತ್ರೋರಾತ್ರಿ ಮದುವೆಯಾಗಿದ್ದು ಸುದ್ದಿ ಆಗದೆ ಇರಲು ಸಾಧ್ಯವೇ? ಅದರಲ್ಲೂ ಗಣೇಶ ಅವರ ಪತ್ನಿ ಶಿಲ್ಪ ಅವರಿಗೆ ಮೊದಲೇ ಮದುವೆಯಾಗಿತ್ತು. ಆದರೂ ಗಣೇಶ ಅವರನ್ನು ಹೆದರಿಸಿ ಬೆದರಿಸಿ ಶಿಲ್ಪ ಮದುವೆಯಾಗಿದ್ದಾರೆ, ಅದಕ್ಕಾಗಿ ರವಿ ಪೂ’ಜಾರಿ ಅವರನ್ನು ಬಿಟ್ಟು ಹೆ’ದರಿಸಿದ್ದಾರೆ ಹೀಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಗಣೇಶ್ ಅವರು ವೀಕೆಂಡ್ ವಿಥ್ ರಮೇಶ್ ವೇದಿಕೆಯಲ್ಲಿ ಮೌನ ಮುರಿದಿದ್ದರು. ಈ ಕುರಿತು ಮಾತನಾಡಿದ್ದ ಗಣೇಶ್, ‘ ಜನರು ಹೀಗೆ ಬೇರೆಯವರ ಜೀವನದಲ್ಲಿ ಯಾಕೆ ಆಟ ಆಡ್ತಾರೋ ಗೊತ್ತಿಲ್ಲ, ಇಷ್ಟು ಕೆಟ್ಟದಾಗಿ ಯಾಕೆ ಮಾತನಾಡುತ್ತಾರೋ ಗೊತ್ತಿಲ್ಲ. ಈ ಒಂದು ವಿಷಯ ನಮ್ಮಿಬ್ಬರ ಮನಸ್ಸನ್ನು ತುಂಬಾ ಘಾಸಿಗೊಳಿಸಿತ್ತು. ನಾನು ಹಾಗೂ ಶಿಲ್ಪ ಪರಸ್ಪರ ಒಪ್ಪಿ ಇಷ್ಟಪಟ್ಟು ಮದುವೆಯಾಗಿದ್ದೇವೆ ಎಂದಿದ್ದರು. ಸದ್ಯಕ್ಕೆ ಪತಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್.