ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಬಿಗ್ ಬಾಸ್ ಮನೆಯಲ್ಲಿ ಸೋನು ಗೌಡ ಗೆ ಬೆವರಿಳಿಸಿದ ಆರ್ಯವರ್ಧನ್ ಗುರೂಜಿ..

342
ಬಿಗ್ ಬಾಸ್ ಮನೆಯಲ್ಲಿ ಸದಾ ಸುದ್ದಿಯಲ್ಲಿರುವ ಸ್ಪರ್ಧಿಗಳಲ್ಲಿ ಸೋನು ಶ್ರೀನಿವಾಸ್ ಗೌಡ ಕೂಡ ಒಬ್ಬರು. ಟಿಕ್ ಟಾಕ್ ನಿಂದಲೇ ಪ್ರಸಿದ್ಧಿಯಾದ ಸೋನು ಶ್ರೀನಿವಾಸ್ ಗೌಡ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. ಟಿಕ್ ಟಾಕ್ ಬ್ಯಾನ್ ಆದ ಬಳಿಕ ಸೋನು ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಅಪ್ಲಿಕೇಶನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಬೋಲ್ಡ್ ಫೋಟೋಸ್ ಮತ್ತು ಡ್ಯಾನ್ಸ್ ಮೂಲಕ ಈಕೆ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಮಿಂಚುವ ಮೂಲಕ ಲಕ್ಷಾಂತರ ಜನ ಫ್ಯಾನ್ಸ್ ಫಾಲೋವರ್ಸ್ ಹೊಂದಿದ್ದಾಳೆ. ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ ಗೌಡರವರು ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ಫೇಮಸ್ ಆಗಿದ್ದರೋ ಅದರ ಜೊತೆಗೆ ವಿವಾದಗಳಿಗೂ ಫೇಮಸ್ ಆಗಿದ್ದರು.
ಹಿಂದಿನಿಂದಲೂ  ತಾವಾಡುವ ಮಾತಿನಿಂದಲೇ ವಿವಾದಗಳನ್ನು ಮೈ  ಮೇಲೆ ಎಳೆದುಕೊಂಡ ಸೋನು ಗೌಡರವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಪ್ರೇಕ್ಷಕರಿಗೆ ಮನೋರಂಜನೆ ನೀಡುತ್ತಿದ್ದಾರೆ. ಆದರೆ ಇದೀಗ ಸೋನುರವರು ಮಾಡಿದ ತಪ್ಪಿಗೆ ಕಿಚ್ಚ ಸುದೀಪ್ ಅವರು ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರು ಸೋನು ಗೌಡರ ಮೇಲೆ ಕೋಪಗೊಳ್ಳಲು ಕಾರಣವೇನು ಎನ್ನುವುದಕ್ಕೆ ಉತ್ತರ ಇಲ್ಲಿದೆ.ಬಿಗ್ ಬಾಸ್ ಮನೆಯಲ್ಲಿ  ಸೋನು ಗೌಡರವರು, ಮೂರು ನಾಲ್ಕು ಬಾರಿ, ನಾವೇನು ಇಲ್ಲಿ ಮನೆ ಕೆಲಸ ಮಾಡೋಕೆ ಬಂದಿದ್ದೀವಾ ಎಂದು ಹೇಳಿದ್ರು. ಬಿಗ್​ಬಾಸ್​ ಹೇಳಿದ್ದಾರಾ ಕೆಲಸ ಮಾಡಿ ಎಂದು? ಯಾರೆಲ್ಲಾ ವೋಟ್​ ಮಾಡಿದ್ದಾರೋ ಅವರೆಲ್ಲ ಫೇಕ್​​ ಎಂದಿದ್ದರು.
ಆದರೆ ಎಲ್ಲಾ ವಿಚಾರವನ್ನು ತರಾಟೆಗೆ ತೆಗೆದುಕೊಂಡು ಸೋನು ಗೌಡ ಅವರಿಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಅದರ ಜೊತೆಗೆ, ಸೋನು ಶ್ರೀನಿವಾಸ್​ ಗೌಡ ಅವರು ಅಡುಗೆ ವಿಚಾರದಲ್ಲಿ ತಪ್ಪಿಸಿಕೊಂಡಿದ್ದರು. ಹೌದು, ತಮಗೆ ಅಡುಗೆ ಬರುತ್ತದೆ ಎಂಬ ವಿಚಾರವನ್ನು ಅವರು ಮುಚ್ಚಿಟ್ಟಿದ್ದು, ನಾಲ್ಕನೇ ವಾರದಲ್ಲಿ ಆ ಸತ್ಯ ಗೊತ್ತಾಗಿದೆ. ಈ ವಿಚಾರದಲ್ಲಿಯೂ ಮಾತನಾಡಿದ್ದರು. ಇನ್ನು, ಎಲ್ಲ ಸ್ಪರ್ಧಿಗಳಿಗೂ ಆಗಾಗ ಬಿಗ್​ ಬಾಸ್​ ಕಡೆಯಿಂದ ಆದೇಶಗಳು ಬರುತ್ತವೆ. ಅದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ಆದರೆ ಬಿಗ್​ ಬಾಸ್​ ನೀಡಿದ ಆದೇಶಗಳಿಗೆ ಸೋನು ಗೌಡ ಅವರು ಗೌರವ ನೀಡಿಲ್ಲ. ಈ ಕುರಿತು ಮಾತನಾಡಿದ್ದು, ‘ನಿಮ್ಮ ಮಾತುಗಳು ಕ್ಯೂಟ್​ ಆಗಿ ಇರಲಿಲ್ಲ. ಬಿಗ್​ ಬಾಸ್​ಗೆ ಅವಮಾನ ಮಾಡುವ ರೀತಿಯಲ್ಲಿ ಇತ್ತು.
ಇನ್ಮುಂದೆ ನಿಮಗೆ ಬಿಗ್​ ಬಾಸ್​ ಆದೇಶವೇ ನೀಡುವುದಿಲ್ಲ ಎಂದುಕೊಳ್ಳಿ. ಜೊತೆಗೆ ‘ನಿಮ್ಮಲ್ಲಿ ತುಂಬ ಜನ ಮಾತನಾಡುವ ಏಕವಚನ ನಿಜಕ್ಕೂ ಚಪ್ಪಲಿ ತಗೊಂಡು ಹೊಡೆದಂತೆ ಇರುತ್ತೆ. ಸ್ನೇಹಿತರಾದ ನಂತರ ಏಕವಚನ ಇರಬಾರದು ಅಂತಲ್ಲ. ಆದರೆ ನಿಮ್ಮ ಏಕವಚನದಲ್ಲಿ ಗೌರವ ಕಾಣಿಸಿಲ್ಲ ಎನ್ನುವುದನ್ನು ನೇರವಾಗಿ ಹೇಳಿದ್ದರು.ಬಿಗ್ ಬಾಸ್ ಕೆಲಸ ಮಾಡು ಎಂದು ಯಾರಿಗೂ ಹೇಳಿಲ್ಲ. ರೆಡಿಯಾಗು ಎಂದೂ ಯಾರಿಗೂ ಹೇಳಿಲ್ಲವಲ್ಲ. ಇನ್ನು ‌ಮೇಲೆ ಬಿಗ್ ಬಾಸ್ ಯಿಂದ ನಿಮಗೆ ಯಾವ ಆದೇಶವೂ ಬರಿವುದಿಲ್ಲ. ಯಾವ ಆಟಕ್ಕೂ ನೀವು ಇಲ್ಲ ಹಾಗಾಗಿ ಇನ್ನು ನಿಮಗೆ ಕಳಪೆಯೂ ಇಲ್ಲ ಉತ್ತಮ ಅಂತೂ ಇಲ್ಲವೇ ಇಲ್ಲ. ನಾವು ನಿಮ್ಮ ವರ್ತನೆಯಿಂದ ನಿಮ್ಮನ್ನು ತೆಗೆಯಬಹುದು ಆದರೆ ಇನ್ನು ನೀವು ಈ ಮನೆಯಲ್ಲಿರುವ ಸುಂದರ ವಸ್ತುಗಳಂತೆ ಅಷ್ಟೇ.
ರಾಕೇಶ್ ನಿಮಗೆ ಸಾರಿ ಕೇಳಿದ್ದು ಅವರು ತಪ್ಪು ಮಾಡಿದ್ದಾರೆ ಎಂದು ಅಲ್ಲ ನಿಮಗೆ ಬೇಸರ ಆಗಿದೆ ಎಂದು. ಎಲ್ಲರಿಗೂ ರಾಕೇಶ್ ಅಂತಹ ಒಳ್ಳೆಯ ಸ್ನೇಹಿತ ಸಿಗುವುದಿಲ್ಲ ತಪ್ಪನ್ನು ತಿದ್ದಲು. ನಾನು ನಿಮಗೆ ಹೊರಗೆ ನೀವು ಹೇಗೆ ಕಾಣುತ್ತಿದ್ದೀರಾ ಎಂದು ಹೇಳಿದ್ದೇನೆ ಇನ್ನು ನಿಮ್ಮಿಷ್ಟ ಎಂದು ಹೇಳುವ ಮೂಲಕ ಸೋನು ಗೌಡ ಅವರಿಗೆ ಎಚ್ಚರಿಕೆ ನೀಡಿದ್ದರು. ಇಷ್ಟೆಲ್ಲಾ ಎಚ್ಚರಿಕೆ ನೀಡಿದ್ದರೂ ಕೂಡ ಸೋನು ಗೌಡರವರು ಬಿಗ್ ಬಾಸ್ ಮನೆಯಲ್ಲಿ ಖಾರವಾಗಿಯೇ ಇದ್ದಾರೆ.  ಆದರೆ ಇದೀಗ, ಮಾತಿನ ವಿಚಾರಕ್ಕೆ ಸೋನು ಹಾಗೂ ಆರ್ಯವರ್ಧನ್ ಗುರೂಜಿ ಜಗಳ ಆಡಿದ್ದಾರೆ. ಐದನೇ ವಾರಕ್ಕೆ ಕಾಲಿಟ್ಟಿದ್ದು, ಸೋನುಗೌಡ ಹಾಗೂ ಗುರೂಜಿ ನಡುವೆ ಜಗಳವಾಗಿದೆ. ಈ ವೇಳೆಯಲ್ಲಿ ಸೋನು ಗೌಡ ಖಡಕ್ ಆಗಿಯೇ ಮಾತನಾಡಿದ್ದಾರೆ. ಹೌದು, ಜಗಳ ಮಾಡೋಕೆ ಬಂದ ಸೋನು ಗೌಡಗೆ ಬಾಯಿಗೆ ಪೊರಕೆ ಇಡಬೇಕಾ ಎಂದು ಖಾರವಾಗಿಯೇ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಜಗಳ, ಹಿಡಿತವಿಲ್ಲದ ಮಾತುಗಳು ಸರ್ವೇ ಸಾಮಾನ್ಯವಾಗಿದೆ.