ಕಾಡು ಪ್ರಾಣಿಗಳು ದಿನವೂ ಜೀವನ್ಮರಣದ ಮಧ್ಯೆ ಹೋರಾಡುತ್ತಾ ಬದುಕುತ್ತಿರುತ್ತವೆ. ಬೇಟೆಯಾಡುವ ಹಾಗೂ ಬೇಟೆಯಾಗುವ ಪ್ರಾಣಿಗಳ ಮಧ್ಯೆ ಕಾಳಗ ನಡೆಯುತ್ತಲೆ ಇದ್ದು, ನೋಡುಗರಿಗೆ ಬಚ್ಚಿ ಬೀಳಿಸುತ್ತದೆ. ಚಿಕ್ಕ ವಯ್ಯಸ್ಸಿನಿಂದಲೂ ಕಾಡಿನ ರಾಜ ಸಿಂಹ ಎನ್ನುವುದನ್ನ ನಾವು ಪಾಠಗಳಲ್ಲಿ ಕೇಳಿರುತ್ತೇವೆ. ಸಿಂಹದ ಶೌರ್ಯ, ಸಾಹಸ ಹಾಗೂ ಕಾಡಿನಲ್ಲಿ ಅದರ ಗತ್ತು ಗಮ್ಮತ್ತುಗಳ ಬಗ್ಗೆ ಕೂಡಾ ಅನೇಕ ಕಥೆಗಳನ್ನು ಕೇಳಿರುತ್ತೇವೆ. ಇವೆಲ್ಲವನ್ನೂ ಕೇಳಿದಾಗ ನಮ್ಮ ಮನಸ್ಸಿನಲ್ಲಿ ಸಿಂಹದ ಬಗ್ಗೆ ಒಂದು ಚಿತ್ರಣ ಮೂಡುತ್ತದೆ.
ಇದಕ್ಕೆ ಪೂರಕ ಎಂಬಂತೆ ಕಾಡಿನಲ್ಲಿ ಸಿಂಹದ ಜೀವನ, ಅದು ಬೇಟೆಯಾಡುವ ವಿಧಾನಗಳನ್ನು ನೋಡಿದಾಗಲೆಲ್ಲಾ ಥ್ರಿಲ್ ಆಗುವುದು ಸಹಜ. ಇನ್ನು ಸಾಮಾಜಿಕ ಜಾಲತಾಣದಲ್ಲೂ ಕೂಡಾ ಕಾಡಿನ ರಾಜ ಸಿಂಹ ಬೇರೆ ಪ್ರಾಣಿಗಳನ್ನು ಬೇಟೆ ಮಾಡುವ ನೂರಾರು ವೀಡಿಯೋಗಳು ಲಭ್ಯವಿರುತ್ತದೆ ಅದನ್ನು ನೋಡಿದಾಗ ಬಹಳ ಅಚ್ಚರಿ ಹಾಗೂ ಅದ್ಭುತ ಎನಿಸುವುದು ಸಹಜ. ಸಿಂಹಗಳು ಸಾಮಾನ್ಯವಾಗಿ ಗುಂಪಿನಲ್ಲೇ ಇರುತ್ತವೆ
.
ಒಂದು ಗುಂಪಿನಲ್ಲಿ ಸುಮಾರು 15 ಸಿಂಹಗಳಿರುತ್ತವೆ. ಈ ಗುಂಪಿಗೆ ಒಂದು ಹೆಣ್ಣು ಸಿಂಹದ ನೇತೃತ್ವ ಇರುತ್ತದೆ. ಗಂಡು ಸಿಂಹಗಳು ಹೆಣ್ಣು ಸಿಂಹಗಳೊಡನೆ ಇರುವುದಿಲ್ಲ. ಕೂಡಿಕೆ ಕಾಲದಲ್ಲಿ ಮಾತ್ರ ಎರಡೂ ಜೊತೆಗಿರುತ್ತವೆ. ಅವುಗಳ ವ್ಯಾಪ್ತಿಯಲ್ಲಿ ಸುತ್ತಾಡುತ್ತ, ಬೇರೆ ಗಂಡು ಸಿಂಹಗಳಿಂದ ಕಾಪಾಡಿಕೊಳ್ಳುತ್ತವೆ. ಜೋಡಿ ಗಂಡು ಸಿಂಹಗಳು ಒಂದು ನಿರ್ದಿಷ್ಟವನ್ನು ತಮ್ಮದು ಎಂಬಂತೆ ಗುರುತಾಗಿ ಇರಿಸಿಕೊಂಡಿರುತ್ತವೆ.ಇದೀಗ ಸಿಂಹಕ್ಕೆ ಆಹಾರ ನೀಡುವಾಗ ನಡೆದ ಘಟನೆ ನೋಡಿ.