ನಮ್ಮ ದೇಶದಲ್ಲಿ ಕ್ರಿಕೇಟ್ ಪ್ರೀತಿಸುವ ಮಂದಿ ಹಲವರಿದ್ದು ಕ್ರಿಕೇಟಿಗರನ್ನು ಆರಾಧಿಸುತ್ತಾರೆ. ಅದರಲ್ಲೂ ಕ್ರಿಕೇಟ್ ಪ್ರಿಯರಿಗೆ ಐಪಿಎಲ್ ಎಂಬುದು ಹಬ್ಬವಿದ್ದಂತೆ. 4 ವರ್ಷಕೊಮ್ಮೆ ಬರುವ ವಿಶ್ವಕಪ್ ಗಿಂತ ಪ್ರತಿವರ್ಷ ನಡೆಯುವ ಐಪಿಎಲ್ ಟೂರ್ನಿಗೆ ಕ್ರೇಜ್ ಸಿಕ್ಕಾಪಟ್ಟೆ ಇರುತ್ತದೆ.
ವಿವಿಧ ದೇಶದ ಆಟಗಾರರನ್ನು ಬೆಟ್ಟಿಂಗ್ ಮುಖಾಂತರ ಖರೀದಿಸಿ ಒಂದು ತಂಡವನ್ನಾಗಿ ಕಟ್ಟಿಕೊಂಡು ಕ್ರಿಕೇಟ್ ಜಗತ್ತಿಗೆ ರಸದೌತಣ ನೀಡುವಲ್ಲಿ ಐಪಿಎಲ್ ಯಶಸ್ವಿಯಾಗಿದ್ದು ಈ ಟೂರ್ನಿಯ ಮೋಸ್ಟ್ ಫೇವರೇಟ್ ಟೀಮ್ ಎಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದೇ ಹೇಳಬಹುದು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ನೇತೃತ್ವದಲ್ಲಿ ಮುನ್ನುಗುತ್ತಿರುವ ಬೆಂಗಳೂರು ತಂಡಕ್ಕೆ ವಿಶ್ವಾದ್ಯಾಂತ ಅಭಿಮಾನಿಗಳಿದ್ದು ಇಲ್ಲಿಯ ತನಕ ಒಂದು ಬಾರಿ ಕಪ್ ಗೆಲ್ಲದೇ ಹೋದರು ಕೂಡ ಈ ತಂಡಕ್ಕೆ ಸಿಗುವ ಬೆಂಬಲ ಮಾತ್ರ ಕಮ್ಮಿಯಾಗಿಲ್ಲ ಎನ್ನಬಹುದು.
ಭಾರತೀಯರು ಕ್ರಿಕೇಟ್ ಅನ್ನು ಎಷ್ಟು ಪ್ರೀತಿಸುತ್ತಾರೆ ಎಂಬುವದಕ್ಕೆ ಈ ಐಪಿಎಲ್ ಟೂರ್ನಿಯೇ ಸಾಕ್ಷಿ ಯಾಗಿದ್ದು ಬೇರೆ ಆಟಗಾರರಿಗೆ ಈ ಟೂರ್ನಿಯಲ್ಲಿ ಬೆಂಬಲ ನೀಡುವ ಮೂಖಾಂತರ ನಮ್ಮವರೆ ಎಂಬುವಂತೆ ಭಾವಿಸುತ್ತಾರೆ. ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಬೆಂಗಳೂರು ನನ್ನ ಎರಡನೇ ಮನೆ ಎಂದು ಹೇಳಿಕೆ ನೀಡಿ ಕೊಂಡಾಡಿದ್ದರು ಅಲ್ಲದೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್ ತಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಟ್ಟಿರುವುದನ್ನು ನೋಡಿದರೆ ಗೊತ್ತಾಗುತ್ತದೆ. ಸದ್ಯ ಅಂಗವಿಕಲರ ಕ್ರಿಕೆಟ್ ಪಂದ್ಯಾಟದ ಕ್ಯಾಚ್ ನೋಡಿ.