ಸಾಮಾಜಿಕ ಜಾಲತಾಣವೇ ಹಾಗೆ ಇಲ್ಲಿ ಯಾರು ಯಾವಾಗ ಯಾವ ರೀತಿಯಲ್ಲಿ ಸೆಲೆಬ್ರಿಟಿಗಳಾಗಿ ಬಿಡುತ್ತಾರೆ ಎಂದು ಹೇಳುವುದು ಕಷ್ಟಸಾಧ್ಯ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಯುವ ಪೀಳಿಗೆಗಳು ತಾವು ಸೆಲೆಬ್ರಿಟಿ ಯಾಗಬೇಕು ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆ ಗಳನ್ನು ಇಟ್ಟುಕೊಂಡಿದ್ದಾರೆ. ಎಲ್ಲರಿಗೂ ಯಾಕೆ ಈ ರೀತಿಯ ಹುಚ್ಚು ಕನಸು ಬೀಳುತ್ತಿದೆ ಎಂಬುದು ತಿಳಿಯುತ್ತಿಲ್ಲ.
ವಿದ್ಯಾಭ್ಯಾಸಕ್ಕಿಂತ ಹೆಚ್ಚಾಗಿ ಸೆಲೆಬ್ರೆಟಿ ಆಗಬೇಕು ಎಂಬ ಹುಚ್ಚು ಕುದುರೆಯ ಬಾಲವನ್ನು ಹಿಡಿದಿದ್ದಾರೆ. ಇನ್ನು ಸಾಮಾಜಿಕ ಜಾಲತಾಣ ಇಷ್ಟೊಂದು ಬಲಿಷ್ಠವಾಗಿದ್ದು ಅಂತರ್ಜಾಲ ಸೇವೆಗಳು ಮೊತ್ತ ಕುಸಿದಾಗ. ಹೌದು ದಶಕಗಳ ಹಿಂದೆ 1 ಜಿಬಿ ಡಾಟಾ ಸೇವೆ ಪಡೆಯಬೇಕಾದರೆ ತಿಂಗಳಿಗೆ ಮುನ್ನೂರು ರೂಪಾಯಿ ಬೇಕಾಗಿತಚತು. ಆದರೆ ಇದೀಗ ಅದೇ ಮುನ್ನೂರು ರೂಪಾಯಿಗೆ ಪ್ರತಿ ನಿತ್ಯ 1 ಜಿಬಿ ಡಾಟಾ ದಂತೆ, ತಿಂಗಳಿಗೆ ಮೂವತ್ತು ಜಿಬಿ ಡಾಟಾ ಸಿಗುತ್ತಿದೆ.
ಇಷ್ಟೊಂದು ಕಡಿಮೆ ಬೆಲೆಯಲ್ಲಿ ಅಂತರ್ಜಾಲ ಸೇವೆಗಳು ಅಗ್ಗವಾಗುತ್ತಿದ್ದಂತೆ ಪ್ರತಿಯೊಬ್ಬರೂ ಕೂಡ ಇದಕ್ಕೆ ಮಾರಿಹೋಗಿದ್ದಾರೆ. ಪ್ರತಿಯೊಬ್ಬರ ಕೈಯಲ್ಲೂ ಆ್ಯಂಡ್ರಾಯ್ಡ್ ಫೋನ್ ಗಳು ರಾರಾಜಿಸುತ್ತಿವೆ. ದೂರದರ್ಶನಗಳು ಮೂಲೆಗುಂಪಾಗುತ್ತಿವೆ. ಪ್ರತಿಯೊಂದು ಕೂಡ ನಮ್ಮ ಬೆರಳ ತುದಿಯಲ್ಲೇ ಸಿಗುತ್ತಿದ್ದು ಆಧುನಿಕ ಯುಗದಲ್ಲಿ ಮೊಬೈಲ್ ಒಂದು ಅವಿಭಾಜ್ಯ ಅಂಶವಾಗಿದೆ. ಇದೀಗ ಯುವತಿಯ ಡಾನ್ಸ್ ನೋಡಿ.