ಜೀಕನ್ನಡದ ಜನರ ಮೆಚ್ಚುಗೆ ಪಡೆದಿರುವ ಕಾರ್ಯಕ್ರಮಗಳಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್ ಕೂಡ ಒಂದು. ಹೌದು ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುವ ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡುವುದನ್ನು ಬಹಳ ಎಂಜಾಯ್ ಮಾಡುತ್ತಾ ಜನರು ನೋಡುತ್ತಾರೆ ಎನ್ನಬಹುದು. ಹೌದು ಇತ್ತೀಚೆಗೆ ಸರಿಗಮಪ ಸೀಸನ್ 19 ಪ್ರಾರಂಭವಾಗಿದ್ದು ರಾಜ್ಯಾದ್ಯಂತ ಪ್ರತಿಭೆ ಇರುವ ಸ್ಪರ್ಧಿಗಳನ್ನು ಕಾರ್ಯಕ್ರಮಕ್ಕೆ ಕರೆತರಲಾಗಿದೆ. ಇನ್ಮು ಎಲ್ಲರಿಗಿಂತ ಹೆಚ್ಚು ಫೇಮಸ್ ಆಗಿರುವುದು ದಿಯಾ ಹೆಗ್ಡೆ.
ಕೇವಲ 10 ವರ್ಷದ ಈ ಪುಟಾಣಿಯ ಟ್ಯಾಲೆಂಟ್ ಗೆ ಜಡ್ಜ್ ಗಳು ಹಾಗೂ ವೀಕ್ಷಕರು ಫಿದಾ ಆಗಿದ್ದು ದಿಯಾ ಹೆಗ್ಡೆ ಅವರ ವಿಶೇಷ ಟ್ಯಾಲೆಂಟ್ ಏನೆಂದರೆ ತಾವೇ ಸ್ವಂತವಾಗಿ ಪದಗಳನ್ನು ಜೋಡಿಸಿ ಹಾಡು ಹಾಡುತ್ತಾಳೆ. ಇದೇ ರೀತಿ ಅನುಶ್ರೀ ಅವರೇ ನನ್ನ ಸೊಸೆ ಆಗಬೇಕು ಎಂದು ದಿಯಾ ಬರೆದು ಹಾಡಿದ ಹಾಡು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತದೆ. ತದನಂತರ ಶಿವಣ್ಣ ಅವರು ವಿಶೇಷ ಅತಿಥಿಯಾಗಿ ಈ ಶೋಗೆ ಬಂದಿದ್ದು ದಿಯಾ ಹೆಗ್ಡೆಯ ಹಾಡು ಕೇಳಿ ಶಿವಣ್ಣ ಕೂಡ ಫಿದಾ ಆಗಿದ್ದಾರೆ.
ಇನ್ನು ದಿಯಾ ಹೆಗ್ಡೆ ಬಹಳ ಮುದ್ದಾಗಿ ಹಾಡುವ ಹಾಡಿಗೆ ಜಡ್ಜ್ ಗಳು ಹೊಗಳಿಕೆಯ ಮಳೆಯನ್ನೇ ಹರಿಸುತ್ತಿವೆ. ಇನ್ನು ದಿಯಾಯಿಂದಾಗಿ ಜೀವಾಹಿನಿಯ ಟಿಆರ್ಪಿ ಸಹ ಏರುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ಇದೀಗ ಈ ಪುಟ್ಟ ಪೋರಿಗೆ ಕಾರ್ಯಕ್ರಮದಲ್ಲಿ ಹಾಡುವುದಕ್ಕೆ ಕೊಡುವ ಸಂಭಾವನೆ ಎಷ್ಟು ಎನ್ನುವುದನ್ನು ಜೀಕನ್ನಡ ವಾಹಿನಿ ರಿವೀಲ್ ಮಾಡಿದ್ದು ದಿಯಾ ಹೆಗ್ಡೆ ಅವರ ಸಂಭಾವನೆ ಎಷ್ಟು ಎಂದು ತಿಳಿದರೆ ನೀವು ಕೂಡ ಶಾಕ್ ಆಗೋದು ಗ್ಯಾರಂಟಿ. ದಿಯಾ ಹೆಗ್ಡೆ ಅವರಿಗೆ ಒಂದು ಎಪಿಸೋಡ್ ಗೆ ಬರೋಬ್ಬರಿ 20 ಸಾವಿರ ಸಂಭಾವನೆ ಕೊಡಲಾಗುತ್ತಿದೆ.
ಸದ್ಯ ಇದೀಗ ದಿಯಾ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಈಗ ಮುದುಕಿ ಹಾಡನ್ನು ಅನುಶ್ರೀಗೆ ಕಟ್ಟಿದ್ದ ದಿಯಾ ಎರಡು ವರುಷದ ಹಿಂದೆ ಇದೇ ಹಾಡನ್ನ ಯಾವ ರೀತಿ ಹಾಡಿದ್ದರು ಗೊತ್ತಾ? ನೀವೆ ಲೇಖನಿಯ ಕೆಳಗಿನ ವಿಡಿಯೋ ನೋಡಿ.ಈ ಬಾರಿಯ ಸರಿಗಮಪ ಲಿಟಲ್ ಚಾಂಪ್ಸ್ ಸಾಕಷ್ಟು ಒಳ್ಳೆಯ ಪ್ರತಿಭೆಗಳನ್ನು ಹೊಂದಿದ್ದು ಪೈಪೋಟಿಯಲ್ಲಿ ಪ್ರತಿಭೆಗಳು ಮಿಂಚುತ್ತಿವೆ. ಹೌದು ಹಂಸಲೇಖ ವಿಜಯಪ್ರಸಾದ್ ಅರ್ಜುನ್ ಜನ್ಯರಂಥ ದಿಗ್ಗಜಗಳು ತೀರ್ಪುಗಾರರಾಗಿರುವ ಈ ರಿಯಾಲಿಟಿ ಶೋ ಅನಗತ್ಯ ಭಾವುಕತೆಯನ್ನು ಬಂಡವಾಳವಾಗಿಸಿಕೊಳ್ಳದೆ ಸಾಕಷ್ಟು ರಿಯಲ್ ಟ್ರ್ಯಾಕ್ನಲ್ಲೇ ನೋಡುಗರಿಗೆ ರೋಮಾಂಚನ ಮೂಡಿಸುವಲ್ಲಿ ಸಫಲತೆ ಕಂಡಿದೆ ಎನ್ನಬಹುದು.
ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ಸ್ ಪ್ರತೀ ಸೀಸನ್ನಲ್ಲಿಯೂ ಕೂಡ ವಿವಿಧ ಕಾರಣಗಳಿಂದ ಟಿಆರ್ಪಿ ಪಡೆದುಕೊಳ್ಳುತ್ತದೆ. ಅರಳು ಹುರಿದಂತೆ ಮಾತನಾಡುವ ಅನುಶ್ರೀ ಆ್ಯಂಕರಿಂಗ್ ಸೇರಿ ವಿಭಿನ್ನ ಪ್ರತಿಭೆಯುಳ್ಳವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಗೀತ ಪ್ರೇಮಿಗಳು ಮನ ತಣಿಸುವಲ್ಲಿ ಯಶಸ್ವಿಯಾಗುತ್ತಿದ್ದಿ ಒಂದೊಂದು ಸೀಸನ್ನಲ್ಲಿಯೂ ಒಬ್ಬೊಬ್ಬ ಕಲಾವಿದರು ಕೂಡ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುತ್ತಾರೆ ಎನ್ನಬಹುದು.