ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಮಾ ರಾಮಾ ರೇ ಒಂದಲ್ಲಾ ಎರಡಲ್ಲಾ ಮ್ಯಾನ್ ಆಫ್ ದಿ ಮ್ಯಾಚ್ ನಂತಹ ಅಪರೂಪದ ಸಿನಿಮಾ ಕಥೆ ಹೇಳಿ ಯಶಸ್ಸು ಕಂಡಿರುವ ನಿರ್ದೇಶಕ ಸತ್ಯಪ್ರಕಾಶ್ ರವರ ನಿರ್ಮಾಣದ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಹೌದು ಸತ್ಯ & ಮಯೂರ ಪಿಕ್ಚರ್ಸ್ ವತಿಯಿಂದ ನಿರ್ಮಾಣವಾಗುತ್ತಿರುವ ಅನ್ ಲಾಕ್ ರಾಘವ ಸಿನಿಮಾದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಅನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದು ಈ ವೇಳೆ ಅಪರೂಪದ ಘಟನೆ ನಡೆಯಿತು. ಅದೇನು ಎಂದು ತಿಳಿಯಲು ಲೇಖನಿಯನ್ನು ಸಂಪೂರ್ಣವಾಗಿ ಓದಿ.
ನಿರ್ಮಾಪಕ ಸತ್ಯಪ್ರಕಾಶ್ ಮಾತನಾಡಿ ಇಂಡಸ್ಟ್ರೀಗೆ ಬಂದಾಗ ದೊಡ್ಡ ಟೀಂ ಕಟ್ಟಬೇಕು ಎಂಬ ಆಸೆ ಇತ್ತು. ದೀಪಕ್ ಮಧುವನಹಳ್ಳಿ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ನಿಜವಾದ ಕಮರ್ಷಿಯಲ್ ಸಿನಿಮಾ. ಹೌದು ತುಂಬಾ ಹೊಸ ಪ್ರೆಸೆಂಟೇಷನ್ ನಲ್ಲಿ ಸಿನಿಮಾ ಮಾಡಿದ್ದೇವೆ. ಇಡೀ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಜರ್ನಿ ಇರುತ್ತದೆ. ಮೂರು ರೀತಿ ಕಾಮಿಡಿ ಕಾಣಿಸಲಿದೆ. ಪಾತ್ರ ಏನು ಮಾತಾಡ್ತಾರೆ ಅಂತಾ ಗೊತ್ತಾಗಲ್ಲ. ಆದರೆ ಪ್ರೇಕ್ಷಕ ನಗ್ತಾರೆ. ಅನೂಪ್ ಸೀಳಿನ್ ಸರ್ ಅದ್ಭುತ ಮ್ಯೂಸಿಕ್ ಕೊಟ್ಟಿದ್ದಾರೆ ಎಂದರು.
ವೀಕೆಂಡ್ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ನವನಟ ಮಿಲಿಂದ್ ನಾಯಕನಾಗಿ ಹಾಗೂ ಲವ್ ಮಾಕ್ಟೇಲ್ – 2 ಚಿತ್ರದ ರೇಚಲ್ ಡೇವಿಡ್ ನಾಯಕಿಯಾಗಿ ಬಣ್ಣ ಹಚ್ಚಿದ್ದು ಸಾಧುಕೋಕಿಲ ಅವಿನಾಶ್ ರಮೇಶ್ ಭಟ್ ಸುಂದರ್ ವೀಣಾ ಧರ್ಮಣ್ಣ ಕಡೂರು ಭೂಮಿಶೆಟ್ಟಿ ಮೊದಲಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದು ಲವಿತ್ ಛಾಯಾಗ್ರಹಣ ಹಾಗೂ ಅಜಯ್ ಕುಮಾರ್ ಸಂಕಲನವಿದೆ.
ಮೂಲತಃ ಬೆಂಗಳೂರಿನ ರಚೆಲ್ 2019ರಲ್ಲಿ ಇರುಪತಿಯೊನಾಮ್ ನೊತ್ತೊಂದಾ ಚಿತ್ರದ ಮೂಲಕ ಮಲಯಾಳಂಗೆ ಪದಾರ್ಪಣೆ ಮಾಡಿದರು. ಅದಾದ ಬಳಿಕ ಒರೊನ್ನೋರ್ ಪ್ರನಾಯಕದಾ 2021ರಲ್ಲಿ ಕಾವಲ್ ಚಿತ್ರದಲ್ಲಿಯೂ ನಟಿಸಿದರು. 2022ರಲ್ಲಿ ಡಾರ್ಲಿಂಗ್ ಕೃಷ್ಣ ನಿರ್ದೇಶನದ ಲವ್ ಮಾಕ್ಟೇಲ್ 2 ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟರು.
ಸದ್ಯ ಕನ್ನಡದ ಹಲವು ಚಿತ್ರಗಳನ್ನು ಒಪ್ಪಕೊಂಡಿರುವ ರಚೆಲ್ ಇದೀಗ ಸತ್ಯನ ಗ್ಯಾಂಗ್ ಸೇರಿದ್ದಾರೆ. ಇದರ ಜತೆಗೆ ತಮಿಳಿನ ಸಿನಿಮಾವೊಂದರಲ್ಲಿಯೂ ರಚೆಲ್ ನಟಿಸುತ್ತಿದ್ದಾರೆ. ಇನ್ನು ಹಾಸ್ಯ ನಟ ಧರ್ಮಣ್ಣ ಈ ಸಿನಿಮಾದಲ್ಲಿ ನಟಿಸುತ್ತಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ಆಗಿದ್ದು ಟೈಟಲ್ ಲಾಂಚ್ ವೇಳೆ ಅಶ್ವಿನಿ ಅವರನ್ನು ನೋಡಿ ಧರ್ಮಣ್ಣ ಏನು ಮಾಡಿದರು ನೋವೆ ನೋಡಿ.