ನಮ್ಮ ಕನ್ನಡ ಚಿತ್ರರಂಗದ ಸಾರ್ವಕಾಲಿಕ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಮೇಲೆ ದಾಖಲೆ ಬರೆದಿತ್ತು ಎನ್ನಬಹುದು. ಹೌದು ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ 100 ಕೋಟಿ ಕ್ಲಬ್ ಸೇರುವ ಮೂಲಕ 88 ವರ್ಷದ ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ಬರೆದಿತ್ತು.
ಪುನೀತ್ ರಾಜ್ ಕುಮಾರ್ ಅವರ ಹುಟ್ಟಹಬ್ಬವಾದ ಮಾರ್ಚ್ 17 ರಂದು ವಿಶ್ವದಾದ್ಯಂತ ನಾಲ್ಕು ಸಾವಿರ ಪರದೆಗಳಲ್ಲಿ ತೆರೆ ಕಂಡಿದ್ದ ಜೇಮ್ಸ್ ಚಿತ್ರ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಪ್ರದರ್ಶನ ಕಾಂಡಿದ್ದು ಅದರಲ್ಲೂ ಈ ಚಿತ್ರ ಭಾವನಾತ್ಮಕವಾಗಿ ಪುನೀತ್ ಅಭಿಮಾನಿಗಳನ್ನು ಹೆಚ್ಚು ಸೆಳೆದಿದ್ದು, ಕೊನೆಯ ಬಾರಿಗೆ ತೆರೆಯ ಮೇಲೆ ತನ್ನ ನೆಚ್ಚಿನ ನಟನನ್ನು ಕಣ್ತುಂಬಿಕೊಂಡಿದ್ದರು.
ಇನ್ನು ಎಷ್ಟೋ ಕಡೆಗಳಲ್ಲಿ ಪುನೀತ್ ಅಭಿಮಾನಿಗಳು ಒಟ್ಟಾಗಿ ಟಿಕೆಟ್ ಖರೀದಿಸುವ ಮೂಲಕ ಊರಿನ ಜನರಿಗೆ ಸಿನಿಮಾ ತೋರಿಸಿರುವ ಬಗ್ಗೆಯೂ ಕೂಡ ವರದಿಯಾಗಿತ್ತು. ಐಎಂಡಿಬಿ ರೇಟಿಂಗ್ಸ್ ನಲ್ಲಿಯೂ ಬಾಲಿವುಡ್ ಚಿತ್ರ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಮೀರಿಸಿರುವ ಜೇಮ್ಸ್ ಚಿತ್ರಕ್ಕೆ ಸರ್ಕಾರ ತೆರಿಗೆ ನೀಡಬೇಕೆಂಬ ಬೇಡಿಕೆಯೂ ಇತ್ತು.
ಇನ್ನು ಚೇತನ್ ಕುಮಾರ್ ನಿರ್ದೇಶನದ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿರುವ ಜೇಮ್ಸ್ ಚಿತ್ರ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಬಾಚಿರುವ ಮಾಹಿತಿಯನ್ನು ಸ್ಯಾಂಡಲ್ ವುಡ್ ಎಂಟರ್ ಟೈನ್ ಮೆಂಟ್ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಇದನ್ನು ನಿರ್ದೇಶಕ ಚೇತನ್ ಕುಮಾರ್ ಕೂಡಾ ರೀ ಟ್ವೀಟ್ ಮಾಡಿದ್ದರು.
ಇನ್ನು ಅಮೇರಿಕಾದಲ್ಲಿ ಸ್ಯಾಂಡಲ್ವುಡ್ ಗೆಳೆಯರ ಬಳಗದಿಂದ 32 ರಾಜ್ಯಗಳಲ್ಲಿ ಜೇಮ್ಸ್ ಚಿತ್ರವನ್ನು ರಿಲೀಸ್ ಮಾಡಲಾಗಿದ್ದು ಒಟ್ಟು 100ಕ್ಕೂ ಹೆಚ್ಚು ಪ್ರದರ್ಶನವನ್ನು ಜೇಮ್ಸ್ ಕಾಂಡಿದ್ದು ಕನ್ನಡದ ಮತ್ಯಾವ ಚಿತ್ರಕ್ಕೂ ಈ ಪರಿ ಓಪನಿಂಗ್ ಅಮೇರಿಕಾದಲ್ಲಿ ಸಿಕ್ಕಿಲ್ಲ. ಕೆನಡಾದಲ್ಲಿ 12 ಪ್ರದೇಶಗಳಲ್ಲಿ ಚಿತ್ರ ರಿಲೀಸ್ ಮಾಡಿದ್ದು ಉಕ್ರೇನ್ ಮತ್ತು ರಷ್ಯಾ ಬಿಟ್ಟು ಯುರೋಪ್ನ ಎಲ್ಲಾ ಕಡೆ ಜೇಮ್ಸ್ ಪ್ರದರ್ಶನ ಕಂಡಿತ್ತು. ವಿಶೇಷವೆಂದರೆ ಯುರೋಪ್ನಲ್ಲಿ ಎಲ್ಲಾ ಟಿಕೆಟ್ಗಳು ಬಿಡುಗಡೆ ಮುನ್ನವೇ ಸೋಲ್ಡ್ ಔಟ್ ಆಗಿದ್ದವು. ಬ್ರಿಟನ್ನಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಜೇಮ್ಸ್ ರಿಲೀಸ್ ಆಗಿತ್ತು.
ಆಸ್ಟ್ರೇಲಿಯಾದಲ್ಲಿ ಕನ್ನಡದ ಮೊದಲ ಸಿನಿಮಾವಾಗಿ ಜೇಮ್ಸ್ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡು 100ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಸಿಂಗಾಪುರದಲ್ಲಿ ಸ್ಯಾಂಡಲ್ವುಡ್ ಸಿನಿ ಎಂಟರ್ಟೈನ್ಮೆಂಟ್ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಿದ್ದರು.ನೈಜೀರಿಯಾ ಕೀನ್ಯಾ ಜಪಾನ್ ಉಗಾಂಡಾ ಟಾಂಜಾನಿಯಾ ಮೊದಲಾದ ದೇಶಗಳಲ್ಲೂ ಜೇಮ್ಸ್ ರಿಲೀಸ್ ಆಗಿದ್ದು 25-30 ಜನ ಕನ್ನಡಿಗರಿರುವ ಕಡೆಗಳಲ್ಲೂ ಜೇಮ್ಸ್ ರಿಲೀಸ್ ಆಗಿತ್ತು.
ಇಷ್ಟೇ ಅಲ್ಲದೇ ವಿಶ್ವಾದ್ಯಂತ ಇರುವ ಅಭಿಮಾನಿಗಳು ಒಟ್ಟಾಗಿ ಖಾಸಗಿ ಪ್ರದರ್ಶನಗಳನ್ನು ಏರ್ಪಡಿಸಲೂ ಮುಂದೆ ಬಂದಿದ್ದರು. ಇನ್ನು ಅಪ್ಪು ರವರ ಕೊನೆಯ ಕಮರ್ಷಿಯಲ್ ಸಿನಿಮಾ ಜೇಮ್ಸ್ ಗೆ ಅಶ್ವಿನಿ ಆರಂಭದಿಂದ ಯಾವ ರೀತಿ ಸಾಥ್ ನೀಡಿದ್ದರು ಗೊತ್ತಾ? ಕೆಳಗಿನ ವಿಡಿಯೋ ನೋಡಿ.