ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಬಾಹುಬಲಿ ಚಿತ್ರಕ್ಕೆ ಎಷ್ಟು ಕಷ್ಟಪಟ್ಟಿದ್ದರು ನೋಡಿ…ಶೂಟಿಂಗ್ ವಿಡಿಯೋ

28,266

ಇಡೀ ವಿಶ್ವವೇ ತಿರುಗಿ ನೋಡುವಂತಹ ಬಾಹುಬಲಿ ಸಿನಿಮಾವನ್ನು ಮೆಚ್ಚಿಕೊಳ್ಳದವರೇ ಇಲ್ಲ ಎನ್ನಬಹುದು. ಹೌದು ಅಂಥ ಒಂದು ದೃಶ್ಯವೈಭವವನ್ನು ಕಟ್ಟಿಕೊಟ್ಟವರು ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ರವರು. ಬಹುತಾರಾಗಣವನ್ನು ಇಟ್ಟುಕೊಂಡು ಅಧುನಿಕ ಗ್ರಾಫಿಕ್ಸ್‌ ತಂತ್ರಜ್ಞಾನ ಬಳಸಿಕೊಂಡು ಎರಡು ಪಾರ್ಟ್‌ಗಳಲ್ಲಿ ಒಂದು ರೋಚಕವಾದ ಕಥೆಯನ್ನು ಅವರು ತೆರೆಗೆ ತಂದಿದ್ದಯ ಮೊದಲ ಪಾರ್ಟ್‌ ಬಾಹುಬಲಿ: ದಿ ಬಿಗಿನಿಂಗ್‌ 2015ರ ಜು.10ರಂದು ಬಿಡುಗಡೆ ಆಗಿತ್ತು.

ಬಾಹುಬಲಿ ಪಾರ್ಟ್‌ 1 ತೆರೆಕಂಡು ಜುಲೈ ತಿಂಗಳಿಗೆ ಏಳು ವರ್ಷ ಪೂರೈಸಿದೆ. ನಿರ್ದೇಶಕ ರಾಜಮೌಳಿ ನಾಯಕ ನಟ ಪ್ರಭಾಸ್‌ ನಟಿ ಅನುಷ್ಕಾ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡ ಆ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು ಚಿತ್ರದ ಹಲವು ರೋಚಕ ದೃಶ್ಯ ತುಣುಕುಗಳನ್ನು ಸೇರಿಸಿ ಮಾಡಿದ ಒಂದು ಸ್ಪೆಷಲ್‌ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಬಾಹುಬಲಿ ತಂಡ ಶೇರ್‌ ಮಾಡಿಕೊಂಡಿತ್ತು.ಅದಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಚಿತ್ರದಲ್ಲಿ ವಿಲನ್‌ ಬಲ್ಲಾಳದೇವನ ಪಾತ್ರದಲ್ಲಿ ಅಬ್ಬರಿಸಿದ್ದ ನಟ ರಾಣಾ ದಗ್ಗುಬಾಟಿ ಕೂಡ ಈ ವಿಡಿಯೋವನ್ನು ಪೋಸ್ಟ್‌ ಮಾಡಿಕೊಂಡಿದ್ದು ಕಿಲ್ಲರ್‌ ಎಡಿಟ್‌. ತುಂಬ ಇಷ್ಟ ಆಯ್ತು ಎಂದು ಅವರು ಕ್ಯಾಪ್ಷನ್‌ ನೀಡಿದ್ದಾರೆ. ಈ ಸಿನಿಮಾ ಬಳಿಕ ಪ್ರಭಾಸ್‌ ಮಾತ್ರವಲ್ಲದೆ ರಾಣಾ ದಗ್ಗುಬಾಟಿ ಅವರಿಗೂ ರಾಷ್ಟ್ರಮಟ್ಟದಲ್ಲಿ ಜನಪ್ರಿಯತೆ ಹೆಚ್ಚಿತು. ವಿಶ್ವಾದ್ಯಂತ ಪ್ರದರ್ಶನಗೊಂಡ ಬಾಹುಬಲಿ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಾವಿರಾರು ಕೋಟಿ ರೂ. ಸಂಗ್ರಹಿಸಿತ್ತು.

ಇನ್ನು ಇತ್ತೀಚೆಗೆ ಈ ಸಿನಿಮಾವನ್ನು ನೆನಪಿಸಿಕೊಂಡು ನಟಿ ತಮನ್ನಾ ಭಾಟಿಯಾ ಸಂದರ್ಶನ ನೀಡಿದ್ದರು. ಬಾಹುಬಲಿ ಎಂದಾಗ ನಾನು ನಿಭಾಯಿಸಿದ ಆವಂತಿಕಾ ಪಾತ್ರಕ್ಕೆ ಲುಕ್‌ ಟೆಸ್ಟ್‌ ಮಾಡಿದ್ದೇ ನನಗೆ ಮೊದಲು ನೆನಪಾಗುತ್ತದೆ. ಈ ಸಿನಿಮಾ ದೊಡ್ಡಮಟ್ಟದಲ್ಲಿ ಮೂಡಿಬರಲಿದೆ ಎಂಬುದು ನನಗೆ ಆಗಲೇ ಅರಿವಾಗಿತ್ತು ಎಂದು ಅವರು ಹೇಳಿದ್ದರು. ಬಾಹುಬಲಿ ಕರ್ನಾಟಕದಲ್ಲಿಯೂ ಭರ್ಜರಿ ಪ್ರದರ್ಶನ ಕಂಡಿತ್ತು. ಕಿಚ್ಚ ಸುದೀಪ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಇಲ್ಲಿ ಚಿತ್ರದ ಮೇಕಿಂಗ್ ಹೇಗಿತ್ತು ನೋಡಬಹುದು.