ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ಬಿಡುಗಡೆ ಆಗಿ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಕೂಡ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಚಿತ್ರದ ಸಕ್ಸಸ್ ಬಗ್ಗೆ ರಿಷಬ್ ಶೆಟ್ಟಿ ರವರು ಇತ್ತೀಚಿಗೆ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ್ದಾರೆ.
ಕಾಂತಾರ ರಿಲೀಸ್ ಆದ ಬಳಿಕ ಕಾಂತಾರ-2 ಬರುತ್ತಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮನೆ ಮಾಡಿದ್ದು ಈ ಬಗ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಎಷ್ಟು ಪಾರ್ಟ್ ಬೇಕಾದರೂ ಬರಬಹುದು ಎಂದು ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪ ಇಟ್ಟರು.
ಆದರೆ ಕದ್ದ ಈ ಸಿನಿಮಾ ಕ್ಲೈಮ್ಯಾಕ್ಸ್ ನೋಡಿದರೆ ಖಂಡಿತವಾಗಿಯೂ ಕಾಂತರಾ 2 ಬರುತ್ತೆ ಹಾಗೂ ಮುಂದುವರೆದ ಭಾಗ ಬರಲು ಕೆಲವು ಸಲಹೆಗಳನ್ನು ಕೂಡ ಕ್ಲೈಮ್ಯಾಕ್ಸ್ ನಲ್ಲಿ ನೀಡಲಾಗಿದೆ ಎಂಬುದು ಎದ್ದು ಕಾಣುತ್ತದೆ. ಇದೀಗ ಕಾಂತಾರ ಕೊನೆಯ ಶೂಟಿಂಗ್ ನಲ್ಲಿ ಸಪ್ತಮಿ ಗೌಡ ಫನ್ನಿ ವಿಡಿಯೋ ನೋಡಿ.