ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಥೇಟ್ ಅಪ್ಪು ರೀತಿಯೇ ಮಾತಾಡಿದ ಜೂನಿಯರ್ ಪುನೀತ್ …ಚಿಂದಿ ವಿಡಿಯೋ

9,691

ಕನ್ನಡ ಚಿತ್ರರಂಗದಲ್ಲಿ ಹೆಸರಿಗೆ ತಕ್ಕಂತೆ ರಾಜಕುಮಾರನಾಗಿ ಮೆರೆದ ನಟ ಎಂದರೆ ನಮ್ಮ ನಿಮ್ಮ ಅಚ್ಚುಮೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರವರು. ಹೌದು ಚಿತ್ರರಂಗದಲ್ಲಿ ಅಪ್ಪು ಎಂದೇ ಖ್ಯಾತರಾಗಿದ್ದ ಪುನೀತ್ ಅವರ ಸರಳತೆ ಹವ್ಯಾಸ ಮತ್ತು ಸಿನಿಮಾಗಳ ಬಗ್ಗೆ ಬಣ್ಣಿಸಲು ಪದಗಳಿಲ್ಲ ಎನ್ನಬಹುದು.

ಓದು ಅಪ್ಪು ಅವರು ಎಲ್ಲರೂ ಮೆಚ್ಚುವಂತಹ ಮಗನಾಗಿ ಕೇವಲ ಸಿನಿಮಾಗಳಲ್ಲಿ ಮಾತ್ರ ಅಭುನಯಿಸಿಲ್ಲ. ಬದಲಾಗಿ ನಿಜ ಜೀವನದಲ್ಲಿಯೂ ಕೂಡ ಒಳ್ಳೆಯ ತಂದೆ ಮಗ ಹಾಗು ಪತಿಯ ಕರ್ತವ್ಯವನ್ನ ಅಷ್ಟೇ ಚೆನ್ನಾಗಿ ನಿಭಾಯಿಸಿದ್ದರು.

ಈ ಮಾತಿಗೆ ಪೂರಕವಾಗಿ ಸಿನಿಮಾದಲ್ಲಿ ಅದೆಷ್ಟೇ ಬ್ಯುಸಿ ಇದ್ದರೂ ಕೂಡ ಫ್ಯಾಮಿಲಿ ಜೊತೆ ಕಾಲ ಕಳೆಯೋದನ್ನ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಹೌದು ಕನ್ನಡ ಚಿತ್ರರಂಗದ ಆದರ್ಶ ಹಾಗೂ ಮೇಡ್ ಫಾರ್ ಈಚ್ ಅದರ್ ಎಂಬ ಜೋಡಿ ಎಂದು ಕರೆಸಿಕೊಂಡವರು ಪುನೀತ್ ರಾಜ್​​ಕುಮಾರ್ ಹಾಗು ಅಶ್ವಿನಿ ರೇವಂತ್​ ರವರು.

ಈ ಆದರ್ಶ ದಂಪತಿ ಇದೇ ಡಿಸೆಂಬರ್ 1ಕ್ಕೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಆದರೆ ವಿಧಿಯಾಟದ ಮುಂದೆ ವಿವಾಹ ವಾರ್ಷಿಕೋತ್ಸವಕ್ಕೆ ಮುನ್ನವೇ ಅಪ್ಪು ಬಾರದ ಲೋಕಕ್ಕೆ ತೆರಳಿದ್ದಾರೆ.

ರಾಜ್ ಕುಮಾರ್ ರವರ ವಂಶದ ಕಿರಿಯ ಮಗನಾಗಿರುವ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್​​​ಕುಮಾರ್ ರವರು ಬಾಲ ನಟನಾಗಿ ಬೆಳ್ಳಿ ತೆರೆ ಮೇಲೆ ರಾರಾಜಿಸಿದವರಾಗಿದ್ದು ಚಿಕ್ಕ ವಯಸ್ಸಿನಲ್ಲಯೇ ರಾಷ್ಟ್ರ ಪ್ರಶಸ್ತಿ ಪಡೆದಿರುವ ರಾಜರತ್ನ ಇವರಾಗಿದ್ದಾರೆ. ಇದೀಗ ಅಪ್ಪು ರೀತಿಯೇ ಅಭಿಮಾನಿ ಮಾತಾಡಿದ ವಿಡಿಯೋ ನೋಡಿ.