ಝೈದ್ ಖಾನ್ ನಾಯಕನಾಗಿ ಅಭಿನಯಿಸಿರುವ ಬನಾರಸ್ ಬಿಡುಗಡೆಯಾಗಿದೆ. ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದ್ದು ಹೀಗೆ ಬನಾರಸ್ ಪ್ರಭೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿರೋದರಿಂದ ಒಟ್ಟಾರೆಯಾಗಿ ಕಲೆಕ್ಷನ್ ಬಗ್ಗೆ ಎಲ್ಲ ಚಿತ್ತ ಕದಲಿಕೊಂಡಿದೆ. ಈ ಬಗ್ಗೆ ಇದೀಗ ಚಿತ್ರತಂಡದ ಕಡೆಯಿಂದಲೇ ಅಧಿಕೃತ ಮಾಹಿತಿ ಹೊರ ಬಿದ್ದಿದೆ.
ಇನ್ನು ಸಿನಿಮಾ ತಂಡ ಪ್ರಕಾರ ಹೇಳೋದಾದರೆ ಬನಾರಸ್ ಮೊದಲ ದಿನದ ಕಲೆಕ್ಷನ್ ಮೂರು ಕೋಟಿ ಮೀರಿಕೊಂಡಿದೆ. ಹೌದು ಮೊದಲ ದಿನವೇ ಸಿನಿಮಾ ನೋಡಿದವರ ಬಾಯಿಂದ ಬಾಯಿಗೆ ಸದಭಿಪ್ರಾಯ ಹಬ್ಬಿಕೊಳ್ಳುತ್ತಿರೋದರಿಂದಾಗಿ ಎರಡನೇ ದಿನ ಆ ಮೊತ್ತ ದುಪ್ಪಟ್ಟಾಗಿದೆ. ಇನ್ನು ಶನಿವಾರ-ರವಿವಾರ ವೀಕೆಂಡ್ ಪ್ರಯುಕ್ತ ಜನರು ಹೆಚ್ಚು ಚಿತ್ರ ನೋಡುವತ್ತ ಮನಸ್ಸು ಮಾಡಬಹುದಾಗಿದ್ದು ಹೀಗಾಗಿ ಸಿನಿಮಾ ಕಲೆಕ್ಷನ್ ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದು.
ಇನ್ನು ಒಟ್ಟಾರೆಯಾಗಿ ಜಯತೀರ್ಥ ನಿರ್ದೇಶನದ ಬನಾರಸ್ ಕಥೆ ಸೇರಿದಂತೆ ಎಲ್ಲ ದಿಕ್ಕಿನಿಂದಲೂ ಮೆಚ್ಚುಗೆ ಪಡೆದುಕೊಂಡಿದ್ದು ಝೈದ್ ಖಾನ್ ನಟನೆಯನ್ನೂ ಕೂಡಾ ಪ್ರೇಕ್ಷಕರು ಕೊಂಡಾಡಲಾರಂಭಿಸಿದ್ದಾರೆ.
ಇನ್ನು ಸಂಪೂರ್ಣ ಕಾಶಿಯಲ್ಲಿ ಚಿತ್ರೀಕರಣ ಆಗಿರುವ ಬನಾರಸ್ ಸಿನಿಮಾ ಕಥೆ ಕನ್ನಡ ತಮಿಳು ತೆಲುಗು ಮಲಯಾಳಂ ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಿದ್ದು ಸೋನಲ್ ಮೊಂಥೆರೋ ಅಚ್ಯುತ್ ಕುಮಾರ್ ಸುಜಯ್ ಶಾಸ್ತ್ರಿ ದೇವರಾಜ್ ಸಪ್ನಾ ರಾಜ್ ಬರ್ಕಾತ್ ದತ್ ನಟನೆಯ ಈ ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಇನ್ನು ಬನಾರಸ್’ ಸಿನಿಮಾದಲ್ಲಿನ ಬೆಳಕಿನ ಕವಿತೆ ಮಾಯ ಗಂಗೆಯೇ ಹಾಡುಗಳು ಸಖತ್ ಹಿಟ್ ಆಗಿದ್ದು ಈ ಚಿತ್ರದ ಸಿನಿಮಾಟೋಗ್ರಫಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಬನಾರಸ್ ಒಂದು ಕಾವ್ಯಾತ್ಮಕ ಪ್ರೇಮ ಕಥೆಯಾಗಿದ್ದು ಭಾರತೀಯ ಸಂಸ್ಕೃತಿಯ ಹಲವು ವಿಚಾರಗಳನ್ನು ತೋರಿಸಲಾಗಿದೆಯಂತೆ. ಹೌದು ಕರ್ನಾಟಕದ ವೀರಗಾಸೆ ನೃತ್ಯವನ್ನು ಸಾಂಕೇತಿಕವಾಗಿ ಸಿನಿಮಾದ ಆರಂಭದಲ್ಲಿಯೇ ಬಳಸಲಾಗಿದ್ದು ಈ ವೀರಗಾಸೆ ಮೂಲಕ ನಾಯಕನ ಎಂಟ್ರಿಯಾಗುತ್ತದೆ. ಆ ನೃತ್ಯವನ್ನು ತೆರೆಯ ಮೇಲೆ ನೋಡುವುದೇ ಚೆಂದ ಎನ್ನಬಹುದು.
ಇನ್ನು ಝೈದ್ ಖಾನ್ ಪಾತ್ರಕ್ಕೆ ಬೇರೆಯವರು ಡಬ್ ಮಾಡಿದ್ದು ಅದಕ್ಕೆ ಝೈದ್ ಕಾರಣವನ್ನು ನೀಡಿದ್ದಾರೆ. ಆರಂಭದಲ್ಲಿ ನಾನು ನಮ್ಮ ಸಿನಿಮಾದಲ್ಲಿನ ಪಾತ್ರಕ್ಕೆ ಡಬ್ ಮಾಡಿದ್ದೆ. ಆದರೆ ನಾನು ಮಾಡುತ್ತಿರುವುದು ಹಿಂದೂ ಪಾತ್ರ. ಇಡೀ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಡಬ್ಬಿಂಗ್ ಮಾಡಿದ ನಂತರದಲ್ಲಿ ಮುಸ್ಲಿಂ ಸ್ಲಾಂಗ್ ಕಾಣಿಸಿದ್ದು ಅದು ಜನರಿಗೆ ಕಿರಿಕಿರಿ ಆಗಬಹುದು. ಪಾತ್ರಕ್ಕೆ ಮೋಸ ಮಾಡಬಾರದು ಅಂತ ಬೇರೆಯವರಿಗೆ ಡಬ್ ಮಾಡೋಕೆ ಹೇಳಿದೆ ಎಂದು ಝೈದ್ ಖಾನ್ ಹೇಳಿದ್ದಾರೆ.