ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಎರಡನೇ ಮದುವೆಯಾಗಿ ಕೂಡ ಶ್ರುತಿ ವಿಚ್ಛೇದನ ಕೊಟ್ಟಿದ್ದೇಕೆ ಗೊತ್ತಾ…ಸತ್ಯ ಇಲ್ಲಿದೆ

1,945

ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ನಿರ್ದೇಶಕರನ್ನು ಮತ್ತು ಅವರು ನೀಡಿದಂತಹ ಸಿನಿಮಾಗಳನ್ನು ಎಂದಿಗೂ ಕೂಡ ಮರೆಯಲು ಸಾಧ್ಯವಿಲ್ಲ. ಸಾಲು ಸಾಲು ಹಿಟ್ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿ ಚಿತ್ರರಂಗದಿಂದ ದೂರ ಉಳಿದಿದ್ದರು ಕೂಡ ಟಿವಿಯಲ್ಲಿ ಅವರು ನಿರ್ದೇಶನ ಮಾಡಿದ ಚಿತ್ರಗಳು ಮತ್ತು ಚಿತ್ರದ ಹಾಡುಗಳು ಪ್ರಸಾರವಾದರೇ ಈಗಲೂ ಕೂಡ ಜನರು ಕಣ್ಣು ಮುಚ್ಚದೇ ನೋಡುತ್ತಾರೆ.

ಇನ್ನು ಇಂತಹ ನಿರ್ದೇಶಕರ ಸಾಲಿನಲ್ಲಿ ಪ್ರಮುಖವಾಗಿ ನಮಗೆ ಕಾಣುವವರು ನಿರ್ದೇಶಕ ಎಸ್ ಮಹೇಂದರ್ ರವರು. ಅವರ ನಿರ್ದೇಶನದ ಸಿನಿಮಾಗಳಲ್ಲಿ ಕೌಟುಂಬಿಕ ಮೌಲ್ಯ ಭಾವನಾತ್ಮಕ ಕಥೆಯೇ ಹೆಚ್ಚಾಗಿದ್ದು ಪ್ರೇಕ್ಷಕರಿಗೆ ಬಹಳ ಇಷ್ಟವಾಗುತ್ತಿತ್ತು. ಎಸ್ ಮಹೇಂದರ್ ರವರು ಕೊಳ್ಳೇಗಾಲದ ಬಂಡಹಳ್ಳಿಯಲ್ಲಿ ಜನಿಸಿದ್ದು ಬಿಜೆಪಿ ಅಭ್ಯರ್ಥಿಯಾಗಿಯೂ ಸಹ ಕೊಳ್ಳೇಗಾಲ ಕ್ಷೇತ್ರದಿಂದ ಸ್ಫರ್ಧಿಸಿದ್ದರು. ಆದರೆ ಸಿನಿಮಾಗಳಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದ ಅವರು ರಾಜಕೀಯದಲ್ಲಿ ಮಾತ್ರ ಹೀನಾಯ ಸೋಲನ್ನನುಭವಿಸುತ್ತಾರೆ.

1992 ರಲ್ಲಿ ತೆರೆಕಂಡ ಪ್ರಣಯದ ಪಕ್ಷಿಗಳು ಎಂಬ ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಎಸ್ ಮಹೇಂದರ್ ನಂತರ ತಾಯಿ ಇಲ್ಲದ ತಬ್ಬಲಿ ಶೃಂಗಾರ ಕಾವ್ಯ ಕರ್ಪೂರದ ಗೊಂಬೆ ಸ್ನೇಹಲೋಕ ಅಸುರ ವಾಲಿ ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡುವ ಮೂಲಕವಾಗಿ ಚಿತ್ರರಂಗದಲ್ಲಿ ತಮ್ಮದೇ ಆಸ ಸ್ಥಾನವನ್ನು ಪಡೆದುಕೊಂಡಿದ್ದರು.

ಇನ್ನು ಇವರ ದಾಂಪತ್ಯ ಜೀವನ ನೋಡುವುದಾದರೆ 1998 ರಲ್ಲಿ ತಮ್ಮ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ಶೃತಿಯವರನ್ನು ವಿವಾಹವಾದ ಎಸ್ ಮಹೇಂದರ್ ಸುಮಧುರವಾಗಿಯೇ ಸುಖ ಸಂಸಾರ ನಡೆಸುತ್ತಿದ್ದರು. ಈ ದಂಪತಿಗಳ ಪ್ರೇಮ ಸಂಖೇತವಾಗಿ ಗೌರಿ ಎಂಬ ಪುತ್ರಿ ಕೂಡ ಜನಿಸಿದ್ದು 2001 ರಲ್ಲಿ ತೆರೆಕಂಡ ಗಟ್ಟಿಮೇಳ ಎಂಬ ಚಿತ್ರದಲ್ಲಿ ಎಸ್ ಮಹೇಂದರ್ ಮತ್ತು ಶೃತಿ ತೆರೆಮೇಲೆ ಸಹ ದಂಪತಿಯಾಗಿ ನಟಿಸಿದ್ದು ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ತೆರೆಯ ಮೇಲೆ ಮಾತ್ರವಲ್ಲದೇ ನಿಜಜೀವನದಲ್ಲಿಯೂ ಕೂಡ ಈ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು ಆದರೆ ಅದೇನಾಯಿತೋ ಏನೋ ಇದ್ದಕ್ಕಿದ್ದಂತೆ ಈ ಜೋಡಿಗಳು ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ.

1998 ರಲ್ಲಿ ಮದುವೆಯಾದ ಈ ದಂಪತಿಗಳು ಆರಂಭದ ದಿನದಲ್ಲಿ ಸಂಸಾರ ನಡೆಸಿದ್ದು ಕುಟುಂಬದಲ್ಲಿ ಯಾವುದೇ ರೀತಿಯಾ ಬಿರುಕು ಇರಲ್ಲ. ಹೌದು ಸಿನಿಮಾಗಳಿಂದ ಕೊಂಚ ದೂರ ಉಳಿದ ಮಹೇಂದರ್ ರವರು ರಾಜಕೀಯದಲ್ಲಿ ತೋಡಗಿರುತ್ತಾರೆ‌. ಇನ್ನು ಪತಿಯ ಪ್ರಚಾರದಲ್ಲಿ ಶೃತಿ ರವರು ಕೂಡ ಸಾಥ್ ನೀಡಿದ್ದು ನಂತರ ರಾಜಕೀಯದಲ್ಲಿ ಸೋತಾಗ ಆರ್ಥಿಕವಾಗಿ ಶೃತಿಯವರನ್ನು ಅವಲಂಬಿಸುತ್ತಾರೆ.

2008 ರಲ್ಲಿ ಶೃತಿ ಜೊತೆಗೆ ಬಿಜೆಪಿಯಲ್ಲಿ ಸೇರಿದಂದು ಎಸ್ ಮಹೇಂದ್ರ ಹಾಗೂ ಶೃತಿ ಮಧ್ಯ ಚಂದ್ರಚೂಡ್ ಬಂದರಂತೆ. ತದನಂತರ 2009 ರಲ್ಲಿ ಶೃತಿಯವರು ಮಹೇಂದರ್ ರವರಿಗೆ ವಿಚ್ಚೇದನ ನೀಡಿದ್ದು 2011ರಲ್ಲಿ ಅಧಿಕೃತವಾಗಿ ವಿಚ್ಛೇದನ ಸಿಗುತ್ತದೆ. ನಂತರ ಮಗಳ ಜವಾಬ್ದಾರಿ ಶೃತಿ ವಹಿಸಿಕೊಂಡಿದ್ದು 2013 ರಲ್ಲಿ ಚಕ್ರವರ್ತಿ ಚಂದ್ರಚೂಡ್ ಮದುವೆಯಾಗುತ್ತಾರೆ. ಆದರೆ ಚಂದ್ರಚೂಡ್ ಮೊದಲ ‌ಮದುವೆಯಾಗಿದ್ದ ಕಾರಣ ಬಾರಿ ಕೋಲಹಲ ಮೂಡಿಸಿತ್ತು. ಹೀಗೆ ವೈವಾಹಿಕ ಜೀವನದಲ್ಲಿ ಏರುಪೇರುಗಳಾಗಿದ್ದು ಮಹೇಂದರ್ ಈಗಾಗಲೇ ಮತ್ತೊಂದು ವಿವಾಹವಾಗಿದ್ದರೆ ಇತ್ತ ಶ್ರುತಿಯವರು ಮಾತ್ರ ಏಕಾಂಗಿಯಾಗಿಯೇ ಉಳಿದಿದ್ದಾರೆ.

ಇನ್ನು ಈ ಸಮಯದಲ್ಲಿ ಶ್ರುತಿ ಅವರು ಅವೆಲ್ಲವನ್ನು ಕೂಡ ನಿಭಾಯಿಸಿಕೊಂಡು ಹೋಗುತ್ತಾರೆ. ಆದರೆ ಚಕ್ರವರ್ತಿ ಚಂದ್ರ ಚೂಡಾ ಅವರಿಗೆ ಶೃತಿ ಅವರ ನಡವಳಿಕೆ ಇಷ್ಟ ಆಗುವುದಿಲ್ಲ. ಅಷ್ಟೇ ಅಲ್ಲದೆ ತಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯವನ್ನು ನನಗೆ ಹೇಳಬೇಕು ಎಷ್ಟು ಸಂಪಾದನೆ ಮಾಡುತ್ತೀಯ ಏನು ಕೆಲಸ ಮಾಡುತ್ತೀಯ ಎಲ್ಲಿಗೆ ಹೋಗುತಿಯ ಬರುತ್ತೀಯ ಇವೆಲ್ಲವನ್ನು ಸಹ ನನಗೆ ತಿಳಿಸಲೇಬೇಕು ಎಂದು ದಬ್ಬಾಳಿಕೆ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ.

ಇನ್ನು ಇದರಿಂದಾಗಿ ಶ್ರುತಿ ಅವರು ಮಾನಸಿಕವಾಗಿ ತುಂಬಾನೇ ನೋವು ಅನುಭವಿಸುತ್ತಾರೆ ಏಕೆಂದರೆ ಈಗಾಗಲೇ ಮಹೇಂದರ್ ಅವರಿಂದಲೂ ಸಹ ದೂರ ಆಗಿರುತ್ತಾರೆ. ಚಕ್ರವರ್ತಿ ಚಂದ್ರ ಚೂಡಾ ಅವರನ್ನು ಮದುವೆಯಾಗಿ ಇನ್ನು ಆರು ತಿಂಗಳು ಕೂಡ ಆಗಿಲ್ಲ ಹಾಗಿದ್ದರೂ ಕೂಡ ತನ್ನ ಖಾಸಗಿ ವಿಚಾರ ಎಲ್ಲವನ್ನು ಕೂಡ ಈ ರೀತಿ ಪ್ರಶ್ನೆ ಮಾಡುವುದು ಅವರಿಗೆ ತುಂಬಾನೇ ಹಿಂಸೆ ತರುತ್ತದೆ. ಇದರಿಂದಾಗಿ ಮನನಂದಂತಹ ಶೃತಿ ಅವರು ಇನ್ನು ಮುಂದೆ ನನಗೆ ಸಂಸಾರಕ ಜೀವನವೇ ಬೇಡ ಎಂದು ಗಟ್ಟಿ ನಿರ್ಧಾರ ಮಾಡಿ ಚಕ್ರವರ್ತಿ ಚಂದ ಚೂಡಾ ಅವರಿಗೂ ಕೂಡ ಮದುವೆಯಾದ ಒಂದೇ ವರ್ಷಕ್ಕೆ ವಿಚ್ಛೇದನ ನೀಡುತ್ತಾರೆ.