ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಭಾರತದ ಅನೇಕ ದೇವಸ್ಥಾನಗಳಿಗೆ ಶರ್ಟ್ ಹಾಗು ಬನಿಯನ್ ತಗೆದು ಹೋಗಬೇಕು ಏಕೆ ಗೊತ್ತಾ..ನೋಡಿ

102

ಭಾರತ ದೇಶ ದೇವಲಾಯಗಳ ತವರೂರು ಅಂತಾನೇ ಹೇಳಬಹುದು. ಹೌದು ನಮ್ಮ ದೇಶದಲ್ಲಿ ಕೋಟ್ಯಾಂತರ ದೇವಾಲಯಗಳಿದ್ದು ಪ್ರತೀ ರಾಜ್ಯದ ಗ್ರಾಮದಲ್ಲೂ ಕೂಡ ವಿಶೇಷವಾದ ದೇವರುಗಳ ದೇವಲಯಾಗಳನ್ನು ನಿರ್ಮಿಸಿ ಶ್ರದ್ಧೆ ಭಕ್ತಿಯಿಂದ ಪೂಜಿಸುತ್ತಾರೆ. ಆದರೆ ಇಂದಿನ ಯುವ ಪೀಳಿಗೆಗಳು ಯಾವ ದೇವರು ಹಾಗೂ ಆಚರಣೆಗಳನ್ನು ನಂಬದೇ ಇವೆಲ್ಲಾ ಮೂಡನಂಬಿಕೆಗಳು ಎಂದು ಭಾವಿಸಿ ನವ ಯುಗಕ್ಕೆ ಮಾರು ಹೋಗಿದ್ದಾರೆ.

ಇನ್ನು ನಮ್ಮ ದೇಶದಲ್ಲಿ ಎಂಟು ಸಂಪ್ರದಾಯದ ಸಾಕಷ್ಟು ದೇವಾಲಯಗಳನ್ನು ನೋಡಬಹುದಾಗಿದ್ದು ತನ್ನದೇ ಆದ ಇತಿಹಾಸವನ್ನು ಈ ದೇವಾಲಯಗಳು ಹೊಂದಿರುತ್ತದೆ. ಇನ್ನು ದಕ್ಷಿಣ ಭಾರತದ ದೇವಸ್ಥಾನಗಳನ್ನು ಒಮ್ಮೆ ನೋಡಿದರೆ ಸಾಕು ಅಲ್ಲಿಗೆ ಹೋಗಲೇಬೇಕೆನ್ನುವ ತುಡಿತ ಮನದಲ್ಲಿ ಖಂಡಿತವಾಗಿಯೂ ಹುಟ್ಟುತ್ತದೆ. ಯಾಕೆಂದರೆ ದಕ್ಷಿಣ ಭಾರತದ ದೇವಾಲಯಗಳ ವಿನ್ಯಾಸವು ಅಷ್ಟು ವೈಭವೀಪೂರ್ಣವಾಗಿರುತ್ತದೆ.

ದಕ್ಷಿಣ ಭಾರತದ ದೇವಾಲಯಗಳು ದ್ರಾವಿಡ ಹಾಗೂ ವಿಜಯನಗರ ಶೈಲಿಯ ವಾಸ್ತುಶಿಲ್ಪಕ್ಕೆ ಪ್ರಸಿದ್ಧವಾಗಿದೆ. ದಕ್ಷಿಣ ಭಾರತದ ಹೆಚ್ಚಿನ ದೇವಾಲಯಗಳನ್ನು ಮರಳುಗಲ್ಲು ಸೋಪ್‌ಸ್ಟೋನ್‌ ಹಾಗೂ ಗ್ರ್ಯಾನೈಟ್‌ನಿಂದ ತಯಾರಿಸಲಾಗಿದ್ದು ಇಲ್ಲಿನ ದೇವಾಲಯಗಳು ಭವ್ಯವಾಗಿ ಕಾಣುವುದು ಮಾತ್ರವಲ್ಲದೇ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಕಥೆಗಳನ್ನು ಕೂಡ ಬಿಂಬಿಸುತ್ತದೆ.

ಇನ್ನು ದೇವಸ್ಥಾನದಲ್ಲಿ ಕೆಲವು ನೀತಿ ನಿಯಮಗಳನ್ನು ಪಾಲಿಸಲಾಗುತ್ತದೆ. ಅದನ್ನು ಮುರಿದಲ್ಲಿ ದೇವರ ಅನುಗ್ರಹ ಸಿಗುವುದಿಲ್ಲ ಎಂಬ ಮಾತನ್ನು ಕೂಡ ಹೇಳಲಾಗುತ್ತದೆ. ಅದರಂತೆಯೇ ನಮ್ಮ ಕರ್ನಾಟಕದಲ್ಲಿರುವ 72 ದೇವಸ್ಥಾನಗಳಿಗೂ ಹೆಚ್ಚು ದೇವಸ್ಥಾನಗಳಲ್ಲಿ ಪುರುಷರು ಅಂಗಿ ಬನಿಯಾನ್ ಧರಿಸಿ ದೇವಸ್ಥಾನದ ಒಳಗೆ ಹೋಗಬಾರದು. ಇದರ ಹಿಂದಿರುವ ಪುರಾಣದ ರಹಸ್ಯವೇನು ಗೊತ್ತಾ?.

Why there are attire restrictions in some temples in South India - Tripoto

ಸದ್ಯ ಈ ಒಂದು ವಿಚಾರಕ್ಕೆ ಅನುಗುಣವಾಗಿ ಕಳೆದ ಒಂದು ವಾರಗಳ ಹಿಂದೆಯಷ್ಟೆ ಕೋರ್ಟ್ ನಲ್ಲಿ ಸಾಕಷ್ಟು ವಿವಾದಗಳು ಕೂಡ ನಡೆದವು. ಎಲ್ಲ ದೇವಸ್ಥಾನಗಳಲ್ಲೂ ಪುರುಷರು ಒಳಹೋಗುವ ಮುನ್ನ ಅಂಗಿ ಬನಿಯನ್ ಎರಡನ್ನು ತೆಗೆದು ಹೋಗಲೇಬೇಕು ಎಂಬ ನಿಯಮ ಸದ್ಯ ಚಾಲ್ತಿಯಲ್ಲಿದೆ. ಇದರ ಹಿಂದಿರುವಂತಹ ಸನಾತನ ರಹಸ್ಯ ವೇನೆಂದರೆ ದೇವಸ್ಥಾನಗಳಲ್ಲಿ ದೇವರಿಗೆ ಯಾವುದೇ ರೀತಿಯ ಲೋಪವಿಲ್ಲದೆ ಬಹಳಷ್ಟು ಶ್ರದ್ಧ ಭಕ್ತಿಯಿಂದ ಪೂಜೆಯನ್ನು ಸಲ್ಲಿಸಲಾಗುತ್ತದೆ.

ಹೌದು ಅಲ್ಲದೆ ಪುರೋಹಿತರು ಹಾಗೂ ಇನ್ನಿತರ ಕೆಲಸಗಾರರು ಬಹಳ ಮಡಿಯಿಂದ ಈ ದೇವರ ಕಾರ್ಯದಲ್ಲಿ ನಿರತರಾಗಿರುತ್ತಾರೆ. ದೇವಸ್ಥಾನಕ್ಕೆ ಭೇಟಿ ನೀಡುವಂತಹ ಭಕ್ತಾದಿಗಳು ಬರುವ ಮಾರ್ಗ ಮಧ್ಯೆ ಬೇಡವಾದವನ್ನು ಮುಟ್ಟಿಸಿಕೊಂಡು ಇನ್ನಿತರೆ ಕೊಳಕುಗಳು ಅವರ ಬಟ್ಟೆಗೆ ಅಂಟಿರುತ್ತದೆ.ಇಲ್ಲವೇ ಯಾವುದಾದರೂ ನಕರತ್ಮಕ ಶಕ್ತಿ ಅವರ ಬಟ್ಟೆ ಮೇಲಿರಬಹುದು ಎಂಬ ಒಂದು ಕಾರಣಕ್ಕೆ ಪುರುಷರು ದೇವಸ್ಥಾನದ ಒಳಗೆ ಬರುವ ಮುನ್ನ ಕಡ್ಡಾಯವಾಗಿ ಅಂಗಿ ಹಾಗೂ ಬನಿಯನ್ ತೆಗೆಯಬೇಕು ಎಂಬ ನಿಯಮವಿದೆ.

ಇದರಿಂದ ದೇವರು ಕೂಡ ಸಂತೃಪ್ತನಾಗುತ್ತಾನೆ ಮತ್ತು ನೀವು ಬೇಡಿಕೊಂಡ ಕೋರಿಕೆಗಳನ್ನು ಈಡೇರಿಸುತ್ತಿದ್ದು ಇನ್ನೊಂದೆಡೆ ಗರ್ಭಗುಡಿಯೊಳಗಿರುವಂತಹ ಸಕಾರಾತ್ಮಕ ಶಕ್ತಿಗಳೆಲ್ಲವೂ
ನಿಮ್ಮ ದೇಹದೊಳಗೆ ನೇರವಾಗಿ ಯಾವುದೇ ಅಡೆತಡೆಗಳಿಲ್ಲದೆ ಸೇರಿಕೊಳ್ಳಲಿ ಎಂಬ ಕಾರಣಕ್ಕಾಗಿ ದೇಹದ ಮೇಲಿರುವಂತಹ ಬಟ್ಟೆಯನ್ನು ತೆಗೆಯಲಾಗುತ್ತದೆ ಎಂಬುದನ್ನು ಕೂಡ ನಮ್ಮೂಧಿಸಲಾಗಿದೆ. ಈ ಮಾಹಿತಿ ಇಷ್ಟವಾದರೆ ಇತರರಿಗೂ ಶೈರ್ ಮಾಡಿ.