ವಾರ್ತಾ ಮಂಜರಿ
Trending Stories, Viral News, Gossips & Everything in Kannada

Sudharani: ಆನಂದ್ ಚಿತ್ರದಲ್ಲಿ ಯಾವುದೇ ಕಾರಣಕ್ಕೂ ನಟಿಸಲ್ಲ ಎಂದಿದ್ದ ಸುಧಾರಾಣಿ …ಹೊರಬಂತು ತಡವಾಗಿ ಸತ್ಯ

760
ಸ್ಯಾಂಡಲ್ ವುಂಡ್ ಚಿತ್ರರಂಗ ಕಂಡ ಅತ್ಯಂತ ಸುಂದರವಾದ ನಟಿ ಎಂದ ಕೂಡಲೇ ಎಲ್ಲರ ಮನಸ್ಸಿಗೆ ಬರುವ ಮೊದಲ ನಟಿ ಎಂದರೆ ಸುಧಾರಾಣಿ ಅವರು. ಹೌದು ಮೂರು ವರುಷ ವಯಸ್ಸಿನವರಿದ್ದಾಗಲೇ ರೂಪದರ್ಶಿಯಾಗಿದ್ದ ಇವರು  ಆನಂತರ ಕನ್ನಡ ತೆಲುಗು ತಮಿಳು ಮತ್ತು ಮಳಯಾಳಂ ಬಾಷೆ ಸಿನಿಮಾಗಳಲ್ಲಿ ಅಭಿನಯಿಸಿ ಟಾಪ್ ನಟಿಯಾಗಿ ಬೆಳೆದಿದ್ದು  ತಮ್ಮ ಸಿನಿ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ನಟಿ ಸುಧಾರಾಣಿರವರು  ತಮ್ಮ ಸಿನಿ ಜೀವನವನ್ನು ಪ್ರಾರಂಭಿಸಿದ್ದು ಕನ್ನಡ ಕುವರ ಡಾ.ರಾಜ್ ಅವರ ನೇತೃತ್ವದಲ್ಲಿ ಎಂಬುದು ವಿಶೇಷ.
 ಆನಂದ್ ಎಂಬ ಸೂಪರ್ ಹಿಟ್  ಸಿನಿಮಾದಲ್ಲಿ ಶಿವರಾಜ್ ಕುಮಾರ್ ರವರಿಗೆ ನಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ನಂತರದ ದಿನಗಳಲ್ಲಿ  ಶಿವಣ್ಣನ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ  ಮೋಡಿ ಮಾಡಿದ್ದರು. ಹೌದು  ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿ ಬಂದ ಸಿನಿಮಾಗಳೆಲ್ಲ   ಯಶಸ್ವಿ ಪ್ರದರ್ಶನಗಳನ್ನು ಕಂಡು ಸೂಪರ್ ಹಿಟ್ ಆಗಿ ನಿರ್ಮಾಪಕರ ಜೇಬು ತುಂಬಿಸಿದ್ದವು.
ಇನ್ನು ತಮ್ಮ ಮೊದಲ ಸಿನಿಮಾದಿಂದಲೇ ಎಲ್ಲರ ಮನಸ್ಸನ್ನು ಗೆದ್ದು ಕರುನಾಡ ಮನೆಯ ಮಗಳಾಗಿ ಮೆರೆದ Sudharani  ರವರು ಚಿಕ್ಕ ವಯಸ್ಸಿನಲ್ಲೇ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿ ಕನ್ನಡ ಚಿತ್ರರಂಗದಲ್ಲಿ ಅಪಾರ ಯಶಸ್ಸು ಪಡೆದು ಬಳಿಕ ಶಿವಣ್ಣನ ಜೊತೆ ಬರೋಬ್ಬರಿ ಹನ್ನೆರಡು ಸಿನಿಮಾಗಳಲ್ಲಿ ನಟಿಸಿ ಒಂದು ಕಾಲದ ಚಿತ್ರರಂಗದ  ಫೇವರಿಟ್ ಜೋಡಿಗಳಾಗಿದ್ದರು.
ಇನ್ನು ನಿಮಗೆ ಗೊತ್ತಾ ಆನಂದ್ ಸಿನಿಮಾದ ನಾಯಕಿಯಾಗಿ ಸುಧಾರಾಣಿಯವರು ಆಯ್ಕೆಯಾದಾಗ ಸಾಕಷ್ಟು ಜನ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದು  ಆದರೆ ಆ ಒಬ್ಬರು ಮಾತ್ರ ಸುಧಾರಾಣಿಯವರೇ ಬೇಕು ಎಂದು ಚಿತ್ರದಲ್ಲಿ ಅಭಿನಯಿಸಲು ಚಾನ್ಸ್ ಕೊಡಿಸುತ್ತಾರೆ. ಅಷ್ಟಕ್ಕೂ ಆ ವ್ಯಕ್ತಿ ಯಾರು ಗೊತ್ತೆ? ಅವರಿಗೂ ಸುಧಾರಾಣಿ ಗೂ ಇದ್ದಂತಹ ಸಂಬಂಧ ಎಂತಹದ್ದು ಎಂಬ ಮಾಹಿತಿಯನ್ನು ಇಂದಿನ ಈ ಲೇಖನಿಯಲ್ಲಿ ತಿಳಿಸಿಕೊಡುತ್ತೇವೆ.
Shivarajkumar recollects Anand days | Kannada Movie News - Times of India
Courtesy: Times Of India
ಹೌದು ಶಿವರಾಜಕುಮಾರ್ ರವರು ಆಗಿನ್ನೂ ತಮ್ಮ ಮೊದಲನೇ ಸಿನಿಮಾದ ಕುತೂಹಲದಲ್ಲಿ ಇದ್ದು ಪಾರ್ವತಮ್ಮನವರು ಸಹ ಅಳೆದು ತೂಗಿ ತಮ್ಮ ಮಗನಿಗೆ ಸರಿಹೊಂದುವಂತಹ ಸಿನಿಮಾದ ಕಥೆಯನ್ನು  ಬಹಳ ಯೋಚಿಸಿ ಆಯ್ಕೆ ಮಾಡಿಕೊಂಡಿರುತ್ತಾರೆ. ಇನ್ನು ಸಿನಿಮಾದಲ್ಲಿ ಶಿವರಾಜಕುಮಾರ್ ರವರು ತಮ್ಮ ಮೊದಲ ಸಿನಿಮಾ ಮಾಡಬೇಕು ಮತ್ತು ಗುರುದತ್ ಅವರು ಸಹ ಪ್ರಪ್ರಥಮ ಬಾರಿಗೆ ಖಳನಟನಾಗಿ ಅಭಿನಯಿಸಲು ಮುಂದಾಗಿದ್ದರು.  ಇನ್ನು ಜಯಂತಿ ಸೇರಿದಂತೆ ಸಾಕಷ್ಟು ಘಟಾನುಘಟಿ ನಟರೆ ಪೋಷಕ ಪಾತ್ರವನ್ನು ವಹಿಸಿದ್ದು  ಚಿತ್ರಕ್ಕೆ  ನಾಯಕಿಯಾಗಿ ಯಾರನ್ನು ಆಯ್ಕೆ ಮಾಡುವುದು ಎಂಬ ಕುತೂಹಲದಲ್ಲಿದ್ದ ಪಾರ್ವತಮ್ಮ ರಾಜಕುಮಾರ್ ರವರ ಕಣ್ಣಿಗೆ ಬಿದ್ದದ್ದು ಸುಧಾರಾಣಿ ರವರು.
ಹೌದು  ಚಿ. ಉದಯ ಶಂಕರ್ ರವರ ಕುಟುಂಬದ ಕಾರ್ಯಕ್ರಮ  ಒಂದಕ್ಕೆ ಡಾಕ್ಟರ್ ರಾಜಕುಮಾರ್ ಅವರು ತಮ್ಮ ಕುಟುಂಬ ಸಮೇತವಾಗಿ ಹೋಗಿದ್ದರು. ಅಲ್ಲಿ ಪಾರ್ವತಮ್ಮ ರಾಜ್ ಕುಮಾರ್ ರವರು ಮುಗ್ಧ ಹುಡುಗಿಯಂತೆ ಕಂಡಂತಹ ಸುಧಾರಣೆಯವರನ್ನು ನೋಡುತ್ತಾರೆ. ಇನ್ನು  ಆ ಸಂದರ್ಭದಲ್ಲಿಯೇ ಹಿಂದೆ ಮುಂದೆ ಯೋಚಿಸಿದೆ ನೀನು ನನ್ನ ಮಗನ ಚಿತ್ರದಲ್ಲಿ ಅಭಿನಯಿಸುತ್ತೀಯ ಎಂದು ಕೇಳಿಬಿಡುತ್ತಾರೆ.
ಇದಕ್ಕೆ ಅಲ್ಲಿದ್ದವರೆಲ್ಲ ಕೂಡ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಈಕೆ ಇನ್ನು ಕೇವಲ 13 ವರ್ಷದ ಹುಡುಗಿ ಎಂದು ಎಲ್ಲರೂ ತಮ್ಮ ಭಾವನೆಯನ್ನು ಕೂಡ ವ್ಯಕ್ತಪಡಿಸಿದರು. ಆದರೆ ಪಾರ್ವತಮ್ಮ ರಾಜಕುಮಾರ್ ಅವರು ಮಾತ್ರ ಪಟ್ಟು ಹಿಡಿದು ಸುಧಾರಾಣಿ ರವರನ್ನು ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡಿದ್ದು ಅದರಂತೆ ಇವರಿಬ್ಬರ ಜೋಡಿ ತೆರೆಯ ಮೇಲೆ ಮಾಡಿದ ಮೂಡಿ ತಮಗೆಲ್ಲರಿಗೂ ತಿಳಿದಿದೆ ಇದೆ. ಈ ಕುರಿತು ನಿಮ್ಮ ಅನಿಸಿಕೆಯನ್ಮು ಕಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.