ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಗಂಡ ತೀರಿ ಹೋದ ಬಳಿಕ ಕುಟುಂಬದ ಬೆಂಬಲದೊಂದಿದೆ ದೊಡ್ಡ ನಿರ್ಧಾರ ತಿಳಿಸಿದ ನಟಿ ಮೀನಾ

1,579

ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಮೀನಾರವರು ಕೂಡ ಒಬ್ಬರು. ಪತಿಯನ್ನು ಕಳೆದುಕೊಂಡಿರುವ ನೋವಿನಲ್ಲಿದ್ದಾರೆ ನಟಿ ಮೀನಾ. ಹೌದು, ನಟಿ ಮೀನಾರವರು 2009ರಲ್ಲಿ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದ ವಿದ್ಯಾಸಾಗರ್ ಎಂಬುವವರನ್ನು ಮದುವೆಯಾದರು. ಮದುವೆಯಾದ ಬಳಿಕ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡರು. ಸುಖವಾಗಿ ಸಂಸಾರ ನಡೆಸುತ್ತಿದ್ದ ಈ ಮೀನಾ ದಂಪತಿಗಳಿಗೆ ನೈನಿಕ ಎಂಬ ಮಗಳಿದ್ದಾಳೆ.

ಮಗಳು ಕೂಡ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾಳೆ. ಸುಖವಾಗಿ ಬಾಳುತ್ತಿದ್ದ ಕುಟುಂಬದ ಮೇಲೆ ಕೆಟ್ಟ ದೃಷ್ಟಿಯೊಂದು ಬಿದ್ದಿದೆ. ಇತ್ತೀಚೆಗಷ್ಟೇ ನಟಿ ಮೀನಾರವರ ಹಿಂದೆ ಅ’ನಾರೋಗ್ಯ ಸಮಸ್ಯೆಯಿಂದ ನಿ’ಧನ ಹೊಂದಿದ್ದರು. ಸದ್ಯಕ್ಕೆ ಮೀನಾರವರು ತನ್ನ ಬದುಕಿನಲ್ಲಿ ನಡೆದ ಕಹಿ ಘಟನೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ನಡುವೆ ನಟಿ ಮೀನಾರವರು ಬದುಕಿನಲ್ಲಿ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅದೇನು ಎಂದು ತಿಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.

ನಟಿ ಮೀನಾರವರ ಸಿನಿಯ ಹಿನ್ನಲೆ ಗಮನಿಸುವುದಾದರೆ, ಪ್ರಾರಂಭದ ದಿನಗಳಲ್ಲಿ ನಟಿ ಮೀನಾರವರಿಗೆ ಡ್ಯಾನ್ಸ್ ನಲ್ಲಿ ತುಂಬಾನೇ ಆಸಕ್ತಿ . ಹೀಗಾಗಿ ಭರತನಾಟ್ಯವನ್ನು ಸಹ ಅಭ್ಯಾಸ ಮಾಡಿದ್ದರು. ಅಷ್ಟೇ ಅಲ್ಲದೇ, ಹಲವು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದರು. ಈ ನೃತ್ಯದಲ್ಲಿದ್ದ ಆಸಕ್ತಿಯೇ ನಟಿ ಮೀನಾ ಪಾಲಿಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಹೌದು, ಸಿನಿಮಾದಲ್ಲಿ ನಟಿಸಲು ಅವಕಾಶವೊಂದು ಒದಗಿ ಬಂದಿತು. ನೃತ್ಯದಲ್ಲಿ ಆಸಕ್ತಿ ಇದ್ದ ಕಾರಣ, ಸಿನಿಮಾದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡರು.

ಇದಾದ ಬಳಿಕ, ಮೀನಾ ಬಾಲನಟಿಯಾಗಿ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಇನ್ನು, ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಟಿ ಮೀನಾ ಅವರನ್ನು ತಮ್ಮ ಪುಟ್ನಂಜ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯ ಮಾಡಿಕೊಟ್ಟರು. ತದನಂತರದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ನಾಯಕಿ ಪಾತ್ರದಲ್ಲಿ ಮಾತ್ರ ಕಾಣಿಸಿಕೊಳ್ಳದೇ ಪೋಷಕ ಪಾತ್ರದಲ್ಲಿ ಮಾಡಿದರು. ಮದುವೆಯಾದ ಬಳಿಕ ಸಿನಿಮಾರಂಗದಲ್ಲಿ ದೂರವಿದ್ದ ಮೀನಾರವರು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದರು.

ಆದರೆ ಇತ್ತೀಚೆಗಷ್ಟೇ ಮೀನಾರವರು ಮಹತ್ವದ ಸಂದೇಶವನ್ನು ಹಂಚಿಕೊಂಡಿದ್ದು ಎಲ್ಲರಿಗೂ ಅಚ್ಚರಿ ನೀಡಿದ್ದಾರೆ. ಹೌದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೀನಾರವರು, “ಈ ವಿಶ್ವ ಅಂಗದಾನ ದಿನದಂದು, ನನ್ನ ಅಂಗಗಳನ್ನು ದಾನ ಮಾಡಲು ನಾನು ಪ್ರತಿಜ್ಞೆ ಮಾಡುತ್ತೇನೆ ” ಎಂದಿದ್ದಾರೆ. ಈ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮೀನಾ ಅವರು “ಒಬ್ಬರ ಜೀವ ಉಳಿಸುವುದಕ್ಕಿಂತ ಒಳ್ಳೆಯ ಕೆಲಸ ಮತ್ತೊಂದಿಲ್ಲ. ಅಂಗಾಂಗ ದಾನವು ಜೀವಗಳನ್ನು ಉಳಿಸುವ ಉದಾರ್ಥ ಮಾರ್ಗಗಳಲ್ಲಿ ಇದು ಒಂದಾಗಿದೆ.

ಇದು ವಾರದಾನವಾಗಿದೆ, ದೀರ್ಘಕಾಲದ ಅ’ನಾರೋಗ್ಯ ದಿಂದ ಬಳಳುತ್ತಿರುವ ಅನೇಕರಿಗೆ ಇದು ಎರಡನೇ ಅವಕಾಶ. ನನ್ನ ವಿದ್ಯಾಸಾಗರ್ ಹೆಚ್ಚು ದಾನಿಗಳೊಂದಿಗೆ ಆಶೀರ್ವದಿಸಲ್ಪಟ್ಟಿದ್ದಾರೆ, ನನ್ನ ಜೀವನವನ್ನು ಬದಲಾಯಿಸಬಹುದಿತ್ತು! ಒಬ್ಬ ದಾನಿಯು ಎಂಟು ಜೀವಗಳನ್ನು ಉಳಿಸಬಹುದು. ಅಂಗಾಂಗ ದಾನದ ಮಹತ್ವವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ.

ಇದು ಕೇವಲ ದಾನಿಗಳು ಮತ್ತು ಸ್ವೀಕರಿಸುವವರು ಮತ್ತು ವೈದ್ಯರು ಮಾತ್ರ ಸಂಬಂಧಪಡುವುದಿಲ್ಲ. ಇದು ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಪರಿಚಯಿಸ್ಥರ ಮೇಲೆ ಹೆಚ್ಚು ಪರಿಣಾಮ ಬಿರುತ್ತದೆ. ಇಂದು ನಾನು ನನ್ನ ಅಂಗಗಳನ್ನು ದಾನ ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಿದ್ದೇನೆ” ಎಂದು ನಟಿ ಮೀನಾ ಬರೆದುಕೊಂಡಿದ್ದಾರೆ. ಮೀನಾರವರ ಈ ಪೋಸ್ಟ್ ನೋಡಿ ಸ್ನೇಹಿತರು ಹಾಗೂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಮೂಲಕ ನಟಿ ಸುದ್ದಿಯಾಗಿದ್ದಾರೆ.