ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಸಿನಿಮಾರಂಗದ ಪ್ರತಿಭಾವಂತ ನಟ, ನಿರ್ದೇಶಕ ಹಾಗೂ ನಿರ್ಮಾಪಕ. ರವಿಚಂದ್ರನ್ ಅವರ ಇಬ್ಬರೂ ಮಕ್ಕಳು ಕೂಡ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಇವರ ಮಗಳು ಗೀತಾಂಜಲಿಯವರು ಕಳೆದ ಒಂದೆರಡು ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಗೀತಾಂಜಲಿ ಅವರು ಕುಟುಂಬದ ಜೊತೆ ಸಮಯ ಕಳೆಯುವುದಷ್ಟೇ ಅಲ್ಲಾ ತಮ್ಮದೇ ಆದ ಸ್ವಂತ ಉದ್ಯಮ ಶುರು ಮಾಡಿ ಅದರಲ್ಲಿಯೂ ಕೂಡ ಹೆಸರು ಮಾಡುತ್ತಿದ್ದಾರೆ. ಹೌದು, ಗೀತಾಂಜಲಿ ತನ್ನದೇ ಸ್ವಂತ ಉದ್ಯಮ ಆರಂಭ ಮಾಡುವುದರ ಹಿಂದೆಯೇ ಕಾರಣವಿದೆ ಎನ್ನುವುದು ಒಪ್ಪಿಕೊಳ್ಳುವುದು ಒಳಿತು.
ಹೌದು, ಗೀತಾಂಜಲಿಯವರು ತಂದೆಯಂತೆ ತುಂಬಾನೇ ಸ್ವಾಭಿಮಾನಿ ಎನ್ನುವುದು ಅಲ್ಲಗಳೆಯುವಂತಿಲ್ಲ. ಓದುತ್ತಿದ್ದ ಸಮಯದಲ್ಲಿಯೇ ತಮ್ಮದೇ ಆದ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದನ್ನು ಶುರು ಮಾಡಿದ್ದರು. ಆದರೆ ಅಣ್ಣ ಮನೋರಂಜನ್ ಅವರ ಮದುವೆಯಲ್ಲಿ ಫೋಟೋಗ್ರಾಫರ್ ಗೆ ಬೈದಿದ್ದು, ಈ ಮೂಲಕ ಸುದ್ದಿಯಾಗಿದ್ದಾರೆ.. ಫೋಟೋಗ್ರಾಫರ್ ಗೆ ಬೈದದ್ದು ಯಾಕೆ ಗೊತ್ತಾ.ಅಂದಹಾಗೆ, ಪುಟ್ಟ ಕಂಪನಿ ಮಾಡಿಕೊಂಡು ಅದರಲ್ಲಿ ಬರುತ್ತಿದ್ದ ಆದಾಯದಲ್ಲಿ ತಮ್ಮ ಖರ್ಚು ವೆಚ್ಛಗಳನ್ನು ಸರಿದೂಗಿಸಿಕೊಳ್ಳುತ್ತಿದ್ದರು. ಅಪ್ಪ ಅಮ್ಮನ ಬಳಿ ಯಾವುದೇ ಕಾರಣವನ್ನು ಕೇಳುತ್ತಿರಲಿಲ್ಲ. ರವಿಚಂದ್ರನ್ ಅವರು ತಮ್ಮ ಸ್ನೇಹಿತರ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವ ಅವಕಾಶ ಕೊಡಿಸುವೆ ಎಂದು ಹೇಳಿದರೂ ಗೀತಾಂಜಲಿಯವರು ಬೇಡ ಎಂದೇ ನಿರಾಕರಿಸಿದ್ದರು.
ತನಗೆ ಬೇಡ ತನ್ನ ಕೈಲಾದದ್ದನ್ನು ನಾನು ಮಾಡುವೆ ಎಂದು ಹೇಳುವ ಮೂಲಕ ತನ್ನ ಕೈಯಲ್ಲಿ ಸಾದ್ಯವಾದಷ್ಟು ಚೆನ್ನಾಗಿ ಉದ್ಯಮವನ್ನು ನಡೆಸುತ್ತಿದ್ದರು. ಓದು ಮುಗಿದ ನಂತರ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಜೊತೆಗೆ ಸೀರೆ ಉದ್ಯಮವನ್ನೂ ಸಹ ಶುರು ಮಾಡಿದರು. ತಮ್ಮದೇ ಆದ ಸ್ವಂತ ಸೀರೆ ಕಾರ್ಖಾನೆ ತೆರೆದು ಮೊದಲು ಪ್ರಿಂಟ್ ಆದ ಸೀರೆಯನ್ನು ರವಿಚಂದ್ರನ್ ನಟಿ ತಾರಾ ಅವರಿಗೆ ಕೊಟ್ಟಿದ್ದರು. ಹೀಗೆ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ ಗೀತಾಂಜಲಿ.
ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಅವರು ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ನಾಯಕ ನಟ. ಸಾಹೇಬ ಸಿನಿಮಾದ ಮುಲಾಕ್ಕ್ ಚಂದನವನಕ್ಕೆ ಕಾಲಿಟ್ಟರು. ತದನಂತರದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ಕೂಡ ತಂದೆಯಂತೆ ಇವರಿಗೆ ಯಶಸ್ಸು ಸಿಗಲಿಲ್ಲ.
ಇತ್ತೀಚೆಗಷ್ಟೇ ರವಿಚಂದ್ರನ್ ಅವರ ಮಗ ಮನೋರಂಜನ್ ವೈವಾಹಿಕ ಬದುಕಿಗೆ ಕಾಲಿಟ್ಟರು. ಆಗಸ್ಟ್ 20 ರಂದು ಮನೋರಂಜನ್ ಅವರ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮವನ್ನು ವಧುವಿನ ಕಡೆಯವರು ಆಯೋಜಿಸಿದ್ದರು. ಆಗಸ್ಟ್ 20 ಕ್ಕೆ ವಧುವಿನ ಕುಟುಂಬದ ಕಡೆಯಿಂದ ಆರಕ್ಷತೆ ಕಾರ್ಯಕ್ರಮ ಜರುಗಿತ್ತು. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿನ ವೈಟ್ ಪೆಟಲ್ಸ್ ತ್ರಿಪುರವಾಸಿನಿಯಲ್ಲಿ ಸಂಜೇ 7ಕ್ಕೆ ವಧುವಿನ ಕಡೆಯವರಿಂದ ಆರಕ್ಷತೆ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ರವಿಚಂದ್ರನ್ ಅವರ ಆಪ್ತರೆನಿಸಿಕೊಂಡಿರುವ ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್, ನಟಿ ಖುಷ್ಬೂ, ಉಮಾಶ್ರೀ, ನಟ ಶರಣ್, ಉಮಾಶ್ರೀ, ಮಾಸ್ಟರ್ ಆನಂದ್, ಗಾಯಕ ಹೇಮಂತ್, ಅಕುಲಗ ಬಾಲಾಜಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸೇರಿದಂತೆ ಪ್ರಮುಖರು ಆಗಮಿಸಿದ್ದರು.
ಆಗಸ್ಟ್ 21 ರಂದು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು ಮನೋರಂಜನ್. ಆಗಸ್ಟ್ 21 ರಂದು 8.30ರ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಮಾಡುವ ಮೂಲಕ ಸಂಗೀತಾ ಎಂಬುವವರ ಜೊತೆಗೆ ವಿವಾಹವಾದರು. ಆದಾದ ಬಳಿಕ, ಆಗಸ್ಟ್ 22ಕ್ಕೆ ಚಿತ್ರರಂಗದ ಸ್ನೇಹಿತರಿಗೆ ಮನೋರಂಜನ್ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಆಗಮಿಸಿದ್ದರು. ಈ ಆರತಕ್ಷತೆ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ, ಬಿ. ಎಸ್ ಯಡಿಯೂರಪ್ಪ, ನಟ ನಟಿಯರಾದ ರಾಕಿಂಗ್ ಸ್ಟಾರ್ ಯಶ್ , ರಾಧಿಕಾ ಪಂಡಿತ್, ದರ್ಶನ್, ಸುದೀಪ್, ಸುಧಾರಾಣಿ, ಶ್ರುತಿ ಸೇರಿದಂತೆ ಅನೇಕರು ಆಗಮಿಸಿ ಶುಭ ಹಾರೈಸಿದ್ದರು.
ಅಣ್ಣನ ಮದುವೆಯಲ್ಲಿ ಫೋಟೋಗ್ರಾಫರ್ ಗೆ ಗೀತಾಂಜಲಿ ಬೈದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈ’ರಲ್ ಆಗಿದೆ. ಹೌದು, ಫೋಟೋಗ್ರಾಫರ್ ಮುಂದೆ ಬಂದು ಫೋಟೋ ತೆಗೆಯುವಾಗ, ಹೆಣ್ಣುಮಕ್ಕಳು ಮುಂದೆ ಬಂದಾಗ ಯಾವಾಗ್ಲೂ ಹೀಗೆ ಬರ್ತೀರಾ ಎಂದು ಕೋಪಗೊಂಡು ಬೈದಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ನಿಮಗೋಸ್ಕರ ಫೋಟೋಗ್ರಾಫರ್ ನಿಮ್ಮ ಫೋಟೋ ಚೆನ್ನಾಗಿ ಬರಲಿ, ಎಂದು ಒಳ್ಳೆ ಮೂಮೆಂಟ್ ಗೋಸ್ಕರ ಕಾಯುತ್ತಿರುತ್ತಾರೆ.. ನೀವು ತೊಂದರೆ ಕೊಡುತ್ತಲೇ ನೋಡ್ಕೊಂಡು ಓಡಾಡಬೇಕು ಎಂದು ಹೇಳಿದ್ದಾರೆ. ಇನ್ನು ಕೆಲವರು ಸರಿಯಾಗಿ ಮಾಡಿದ್ದಾರೆ. ಫೋಟೋಗ್ರಾಫರ್ ಎಂದು ಹೆಣ್ಣುಮಕ್ಕಳು ಮೇಲೆ ಹೋಗೋದಾ ಎಂದು ಕಮೆಂಟ್ ಮಾಡಿದ್ದಾರೆ.