ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹರೀಶ್ ರಾಯ್ ಕಾನ್ಸರ್ ಚಿಕಿತ್ಸೆಗೆ ಕೋಟಿ ಕೊಡುತ್ತೇನೆ ಎಂದ ನಟ ನಿಜಕ್ಕೂ ಯಾರು ಗೊತ್ತಾ.

1,733

 

ಸಿನಿಮಾರಂಗವು ಅನೇಕರ ಬದುಕಿಗೆ ನೆರಳಾಗಿದೆ. ಆದರೆ ಈ ಸಿನಿಮಾರಂಗದಲ್ಲಿರುವವರಿಗೆ ಕಷ್ಟ ನೋವುಗಳು ಇಲ್ಲ ಎಂದಲ್ಲ, ಅವಳು ನಮ್ಮ ಮನುಷ್ಯರು. ಅವರಿಗೂ ಕೂಡ ಕಷ್ಟಗಳು ಬರುತ್ತದೆ. ಸೆಲೆಬ್ರಿಟಿಗಳು ಆದ ಕಾರಣ ಅದನ್ನು ಅಷ್ಟಾಗಿ ಎಲ್ಲಿಯೂ ಕೂಡ ಹೇಳಿಕೊಳ್ಳುವುದಿಲ್ಲ. ಕನ್ನಡ ಸಿನಿಮಾರಂಗದ ಖಳ ನಟರೊಬ್ಬರು ಅವರು ಬಹಳ ಕಷ್ಟದಲ್ಲಿದ್ದಾರೆ, ಆ ನಟ ಬೇರೆ ಯಾರು ಅಲ್ಲ ಹರೀಶ್ ರೈ.

ಕನ್ನಡ ಸಿನಿಮಾರಂಗದಲ್ಲಿ ಖಳ ನಾಯಕನಾಗಿ ನಟಿಸಿ ಎಲ್ಲರ ಮನಸ್ಸು ಗೆದ್ದುಕೊಂಡವರು ಹರೀಶ್ ರೈ. ಕನ್ನಡ ಸಿನಿಮಾರಂಗದಲ್ಲಿ ಬಹಳ ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ಚಾಚನ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದ ಇವರು ಹರೀಶ್ ರೈ ಅವರು ಇದೀಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಚಿಕಿತ್ಸೆಗೆ ಆರ್ಥಿಕ ಬೆಂಬಲವಾಗಿ ಕನ್ನಡದ ನಟರೊಬ್ಬರು ನಿಂತಿದ್ದಾರೆ. ಆ ನಟ ಯಾರು ಗೊತ್ತಾ.

ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರೈ ಅವರ ಸಿನಿ ಜರ್ನಿ ಬಗ್ಗೆ ಹೇಳುವುದಾದರೆ, ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿರುವ ಇವರು ಕನ್ನಡ ಮಾತ್ರವಲ್ಲದೆ, ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ‘ಓಂ’ ಚಿತ್ರದಲ್ಲಿನ ಭೂಗತ ಪಾತಕಿ ‘ರಾಯ್’ ಪಾತ್ರದಿಂದ ಗಮನ ಸೆಳೆದ ಇವರು, ಸಾಕಷ್ಟು ಚಿತ್ರಗಳಲ್ಲಿ ಖಳನಟನಾಗಿ, ಪೋಷಕ ನಟನಾಗಿ ಕಾರ್ಯ ನಿರ್ವಹಿಸಿದ್ದಾರೆ. ಇತ್ತೀಚಿಗೆ ತೆರೆಕಂಡ ‘ಬೆಂಗಳೂರು ಅಂಡರ್ ವರ್ಲ್ಡ್’ ಚಿತ್ರದಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಕನ್ನಡ ಮತ್ತು ತಮಿಳು ಕಿರುತೆರೆಯಲ್ಲಿಯೂ ಅಭಿನಯಿಸಿದ್ದಾರೆ. ಇವರ ನಟನೆಯ ಸಿನಿಮಾಗಳು ಬೆಂಗಳೂರು ಅಂಡರ್​ ವರ್ಲ್ಡ್, ಮೀಂದುಮ್ ಒರು ಕಾದಲ್, ರಾಜ್ ಬಹದ್ದೂರ್, ಧನ್ ಧನಾ ಧನ್, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ, ನನ್ನ ಕನಸಿನ ಹೂವೆ, ನಲ್ಲ, ಜಾಫರ್ ಅಲಿಯಾಸ್ ಮುರ್ಗಿ ಜಾಫರ್, ಜೋಡಿ ಹಕ್ಕಿ, ತಾಯವ್ವ, ಓಂ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಹರೀಶ್ ಅಭಿನಯಿಸಿದ್ದಾರೆ. ಇನ್ನು, ಕೆಜಿಎಫ್ ಚಾಪ್ಟರ್ 2ನಂತಹ ಜನಪ್ರಿಯ ಸಿನಿಮಾಗಳಲ್ಲಿ ಹರೀಶ್ ಕೆಲಸ ಮಾಡಿದ್ದಾರೆ. ಹೌದು ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಹರೀಶ್ ರೈ ಅವರು ಕೆಜಿಎಎಫ್ ಚಾಪ್ಟರ್​ಗಳಲ್ಲಿ ಪಾಸಿಟಿವ್ ಶೇಡ್​ನ ಪಾತ್ರದಲ್ಲಿ ನಟಿಸಿದರು. ಕೆಜಿಎಫ್​ ನಲ್ಲಿ ಅವರು ಪಾಸಿಟಿವ್ ಪಾತ್ರದ ಮೂಲಕ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದುಕೊಂಡರು.

ಇತ್ತೀಚೆಗಷ್ಟೇ ಯೂಟ್ಯೂಬ್ ಚಾನೆಲ್ ಒಂದಕ್ಕೆ ಕೊಟ್ಟ ಸಂದರ್ಶನದಲ್ಲಿ ತನಗೆ ಕ್ಯಾನ್ಸರ್ ಇದೆ ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ಹೌದು, ಹರೀಶ್ ಅವರು ಕ್ಯಾನ್ಸರ್ ಜೊತೆ ಹೋರಾಡುತ್ತಿದ್ದು ನಟ ಸದ್ಯ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ನಟ ಕೊನೆಯ ಸ್ಟೇಜ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇನ್ನು ನಟನ ಕುಟುಂಬಸ್ಥರು ನಟನ ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಇನ್ನು ಚಿಕಿತ್ಸೆ ವೆಚ್ಚ ಭರಿಸಲು ಕುಟುಂಬ ಕಷ್ಟಪಡುತ್ತಿದೆ. ಆರೋಗ್ಯ ಸರಿಪಡಿಸಿಕೊಳ್ಳಲು ಹಣಕಾಸಿನ ಅವಶ್ಯಕತೆ ಇದೆ ಎನ್ನಲಾಗಿದೆ.

ತನ್ನ ಆರೋಗ್ಯ ಸಮಸ್ಯೆಯ ಕುರಿತು ಸುದ್ದಿ ಮಾಧ್ಯಮದವರ ಜೊತೆಗೆ ಮಾತನಾಡಿರುವ ಖಳನಾಯಕ ಹರೀಶ್ ರೈ, ತಾವು ಅನಾರೋಗ್ಯದಿಂದ ಬಳಲುತ್ತಿದ್ದು, ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅದರ ಜೊತೆಗೆ, ಹರೀಶ್ ರೈಯವರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರಂತೆ. ಆದರೆ, ಈ ಥೈರಾಯ್ಡ್ ಮುಂದೆ ಕ್ಯಾನ್ಸರ್ ಆಗಿ ಬದಲಾಗಿದೆ. ಸದ್ಯ ಆಪರೇಷನ್ ಮಾಡಿಸಿದ್ದಾರಂತೆ. ಆದರೆ ಶ್ವಾಸಕೋಶಕ್ಕೆ ತೊಂದರೆ ಆಗಿದೆ. ಸೂಕ್ತ ಚಿಕಿತ್ಸೆ ಪಡೆಯಲು ಆರ್ಥಿಕ ಸಮಸ್ಯೆ ಎದುರಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಚಿತ್ರರಂಗದ ನಟರು, ನಿರ್ಮಾಪಕರು ಸಹಾಯ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಕನ್ನಡ ಚಿತ್ರರಂಗದ ದೊಡ್ಡ ದೂಡ್ಡ ಸ್ಟಾರ್ ನಟರು ಇವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ನಿಮ್ಮ ಚಿಕಿತ್ಸೆಗೆ ಅದೆಷ್ಟು ಕೋಟಿ ಖರ್ಚದರೂ ನಾನಿದ್ದೇನೆ ಎಂದು ಇಡೀ ಮನೆಯವರಿಗೆ ಧೈರ್ಯ ತುಂಬಿದ್ದಾರೆ ಚಂದನವನದ ನಟ. ಮೂಲಗಳ ಪ್ರಕಾರ ಹರೀಶ್ ರಾಯ್ ಅವರಿಗೆ ಚಿಕಿತ್ಸೆಗೆ ನೆರವಿಗೆ ನಿಂತಿರುವ ಆ ನಟ ದರ್ಶನ್ ಎಂದು ಹೇಳಲಾಗುತ್ತದೆ. ಆದರೆ ಆ ನಟ ಯಾರು ಎನ್ನುವುದನ್ನು ಹರೀಶ್ ರೈ ಕೂಡ ಬಾಯಿ ಬಿಟ್ಟಿಲ್ಲ.