ಕನ್ನಡ ಕಿರುತೆರೆ ಲೋಕದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಗಳನ್ನು ಪ್ರೇಕ್ಷಕರು ತುಂಬಾನೇ ಇಷ್ಟ ಪಟ್ಟಿದ್ದಾರೆ. ಆದರೆ, ಇದೀಗ ಧಾರಾವಾಹಿಯಲ್ಲಿಯಾಗಿರುವ ಒಂದಷ್ಟು ಬದಲಾವಣೆಗಳಿಂದ ಪ್ರೇಕ್ಷಕ ವರ್ಗಕ್ಕೆ ಬೇಸರವಾಗಿದೆ. ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರವೆಂದರೆ ಆರ್ಯವರ್ಧನ್. ಅನಿರುದ್ಧ್ ಅವರಿಗೆ ಜೊತೆ ಜೊತೆಯಲಿ ಧಾರಾವಾಹಿಯಿಂದ ನಡೆದಿದ್ದಾರೆ. ಕೆಲ ದಿನಗಳ ಹಿಂದೆ, ಚಿತ್ರೀಕರಣದ ವೇಳೆ ಸ್ಕ್ರಿಪ್ಟ್ ಬದಲಿಸಲು ಹೇಳಿದ ಅನಿರುದ್ಧ್ ಅವರ ಮಾತಿಗೆ ಧಾರಾವಾಹಿ ತಂಡ ಒಪ್ಪಿಗೆ ಸೂಚಿಸಿಲ್ಲ.. ಆಗ ಇದ್ದಕಿದ್ದ ಹಾಗೆ ಚಿತ್ರೀಕರಣದಿಂದ ಅನಿರುದ್ಧ್ ಹೊರ ಹೋಗಿದ್ದಾರೆ. ಆದರೆ ಈ ಹಿಂದೆಯೂ ಅನಿರುದ್ಧ್ ಹೀಗೆ ಮಾಡಿದ್ದು ಕಳೆದ ಒಂದು ವರ್ಷದಿಂದಲೂ ಇಬ್ಬರ ನಡುವೆ ವೈಮನಸ್ಸು ನಡೆದಿದೆ ಎನ್ನಲಾಗಿತ್ತು.
ಈ ಎಲ್ಲಾ ಕಾರಣದಿಂದ ಅನಿರುದ್ಧ್ ನಡವಳಿಕೆಯಿಂದ ಬೇಸತ್ತು ಧಾರಾವಾಹಿ ತಂಡ ಅನಿರುದ್ಧ್ ಅವರನ್ನು ಕೈ ಬಿಡುವ ನಿರ್ಧಾರ ಮಾಡಿದೆ ಎನ್ನಲಾಗಿತ್ತು. ಆದರೆ ಧಾರಾವಾಹಿ ತಂಡವನ್ನು ತೊರೆದ ನಂತರ ಅನಿರುದ್ಧ್ ಅವರು ಎಲ್ಲಿಗೆ ಹೋಗಿದ್ದಾರೆ ಎಂಬ ಸತ್ಯ ತಿಳಿದರೆ ಅಚ್ಚರಿಯಾಗುತ್ತದೆ.
ಅನಿರುದ್ಧ್ ಈ ಧಾರಾವಾಹಿಯಿಂದ ಹೊರ ನಡೆದ ಬಳಿಕ, ಆರೂರು ಜಗದೀಶ್ ಅವರು ಕಿರುತೆರೆ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದರು. ಅಲ್ಲಿ ಚರ್ಚೆ ನಡೆಸಿ ಅನಿರುದ್ಧ್ ಅವರನ್ನು ಜೊತೆಜೊತೆಯಲಿ ಮಾತ್ರವಲ್ಲ ಎರಡು ವರ್ಷಗಳ ಕಾಲ ಸಂಪೂರ್ಣ ಕಿರುತೆರೆಯಿಂದಲೇ ಅನಿರುದ್ಧ್ ಅವರನ್ನು ಹೊರಗೆ ಹಾಕಲಾಗಿದೆ ಎನ್ನಲಾಗಿತ್ತು.
ಹೌದು, ಯಾವುದೇ ಧಾರಾವಾಹಿ ಯಾವುದೇ ಶೋ ದಲ್ಲಿ ಪಾಲ್ಗೊಳ್ಳುವಂತಿಲ್ಲ. ಅದರ ಜೊತೆಗೆ ಅನಿರುದ್ಧ್ ಅವರು ಈ ಧಾರಾವಾಹಿಯಿಂದ ಹೊರ ನಡೆದರೂ ಕೂಡ ಚಿತ್ರೀಕರಣ ಮಾತ್ರ ನಿಂತಿರಲಿಲ್ಲ. ಅದರ ಜೊತೆಗೆ ಆರ್ಯವರ್ಧನ್ ಪಾತ್ರಕ್ಕೆ ನಟ ಆಯ್ಕೆ ನಡೆಯುತ್ತಿತ್ತು. ಆದರೆ ಇತ್ತ ಧಾರಾವಾಹಿ ತಂಡ ತೊರೆದ ನಂತರ ಸುದ್ದಿಗೋಷ್ಠಿ ನಡೆಸಿ ನಟ ಅನಿರುದ್ಧ್ ಸ್ಪಷ್ಟನೆ ನೀಡಿದ್ದರು.ಮಾಧ್ಯಮದವರ ಜೊತೆಗೆ ಮಾತನಾಡಿದ್ದ ಅವರು, ‘ನಮ್ಮ ಮೇಲೆ ಬಂದಿರುವ ಎಲ್ಲ ಆರೋಪಗಳು ಸುಳ್ಳು ಎಂದಿದ್ದಾರೆ. ಹೌದು, ನಟ ಅನಿರುದ್ಧ್ , “ನನ್ನ ವಿರುದ್ಧ ಇಷ್ಟೆಲ್ಲಾ ಆರೋಪಗಳನ್ನ ಮಾಡುತ್ತಾರಲ್ಲ. ಅವರು ತಮ್ಮ ಮಕ್ಕಳ ತಲೆ ಮೇಲೆ ಕೈ ಇಟ್ಟು ಹೇಳಲಿ. ನಾನು ನನ್ನ ಮಕ್ಕಳ ತಲೆ ಮೇಲೆ ಕೈ ಇಟ್ಟು ಹೇಳುತ್ತೇನೆ.
ನಾನು ಹೋರಾಡಿದ್ದು ನನ್ನ ಪಾತ್ರಕ್ಕಾಗಿ ಮಾತ್ರ. ಧಾರಾವಾಹಿ ಆರಂಭಕ್ಕೂ ಮೊದಲೇ ನಾನು ಹೇಳಿದ್ದೇನೆ. ಹಿಂದಿನ ದಿನವೇ ನನಗೆ ಸ್ಕ್ರಿಪ್ಟ್ ಕಳಿಸಿ ಎಂದು ಹೇಳಿದ್ದೇನೆ. ಅಲ್ಲಿ ನಮ್ಮ ಉದ್ದೇಶ ಧಾರಾವಾಹಿ ಗೆಲ್ಲಬೇಕಿರೋದು ಎಂದಿದ್ದರು.ಅದರ ಜೊತೆಗೆ, ಕಳೆದ ಒಂದು ವರ್ಷದಿಂದ ಒತ್ತಡದಲ್ಲಿ ಕೆಲಸ ಮಾಡಿದ್ದೇನೆ. ನಮ್ಮ ಕಲಾವಿದರೂ ಅತ್ತುಕೊಂಡು ಕೆಲಸ ಮಾಡಿದ್ದಾರೆ. ನನ್ನಿಂದ ಎಷ್ಟೋ ಸೀನ್ಗಳು ಅದ್ಭುತವಾಗಿ ಮೂಡಿಬಂದಿವೆ. ಬಂದಿಲ್ಲ ಎಂದು ಅವರ ಮಕ್ಕಳ ಮೇಲೆ ಅಣೆ ಮಾಡಲಿ. ಅವ್ರು ಹೇಳಿದ ಸಮಯಕ್ಕೆ ಬಂದಿದ್ದೇನೆ, ಹೋಗಿದ್ದೇನೆ. ಜೆಎಸ್ ಪ್ರೊಡಕ್ಷನ್ನಿಂದ ಒಂದು ಹನಿ ಕುಡಿದಿಲ್ಲ. 3 ವರ್ಷದಿಂದ ಪ್ರೊಡಕ್ಷನ್ನಿಂದ ಹನಿ ನೀರು ಕುಡಿದಿಲ್ಲ. ಇದು ದುರಂತ. ನಾನು ಯಾವುದೇ ರೀತಿಯ ಡಿಮ್ಯಾಂಡ್ ಮಾಡುತ್ತಿರಲಿಲ್ಲ. ಹೊರಗಡೆ ಹೋದಾಗ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ನನಗೆ ಸುಳ್ಳು ಹೇಳುವ ಅಗತ್ಯ ಇಲ್ಲ. ಇನ್ನು ಸೆಟ್ನಲ್ಲಿ ನಾನು ಯಾರಿಗೂ ಬೈದಿಲ್ಲ. ಸೆಟ್ನಲ್ಲಿ ಮೂರ್ಖರಂತೆ ಕೆಸಲ ಮಾಡಬಾರದು ಎಂದಿದ್ದೆ ಅಷ್ಟೇ, ಎಂದಿದ್ದರು ನಟ ಅನಿರುದ್ಧ್.
ಅನಿರುದ್ಧ ಅವರ ಹಿನ್ನಲೆ ಗಮನಿಸಿದರೆ, ಮುಂಬೈನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಆರ್ಕಿಟೆಕ್ಚರ್ ಕಲಿತಿದ್ದರು. ಧಾರವಾಡದಿಂದ ಬೆಂಗಳೂರಿಗೆ ಬಂದು ಇಲ್ಲಿನ ಕಂಪನಿಯೊಂದರಲ್ಲಿ ಇಂಟಿರೀಯರ್ ಡಿಸೈನರ್ ಆಗಿ ಕೆಲಸ ಆರಂಭಿಸಿದ್ದರು. ಆಗ ಈ ಕಚೇರಿ ಕೆಲಸ ಮುಗಿದ ನಂತರ ರಂಗಭೂಮಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಹೀಗೆ ನಟನೆಯಲ್ಲಿ ತೊಡಗಿಸಿದ್ದ ಅನಿರುದ್ದ್ ಗೆ ಸಿನಿರಂಗದಲ್ಲೂ ಚಾನ್ಸ್ ಸಿಕ್ಕಿತು.ಸಿನಿ ರಂಗದಲ್ಲಿ ಒಂದಷ್ಟು ಸಿನಿಮಾಗಳನ್ನು ಮಾಡಿದರೂ ಕೂಡ, ಹೇಳುವಷ್ಟು ಹಿಟ್ ಆಗಲಿಲ್ಲ. ಅವರ ಬದುಕಿಗೆ ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರದ ಮೂಲಕ ಎಲ್ಲರ ಪ್ರೀತಿ ಗಳಿಸಿಕೊಂಡರು.
ಆದರೆ ಧಾರಾವಾಹಿಯಿಂದ ಹೊರ ನಡೆದಿರುವ ಬೆಂಗಳೂರಿನಲ್ಲಿಲ್ಲ. ಆರ್ಯವರ್ಧನ್ ಅವರು ಉತ್ತರ ಭಾರತಕ್ಕೆ ಪ್ರವಾಸಕ್ಕೆ ತೆರಳಿದ್ದಾರೆ. ಹೌದು ದೇವಸ್ಥಾನಕ್ಕೆ ಭೇಟಿ ಕೊಟ್ಟು, ದೇವರ ದರ್ಶನ ಮಾಡುತ್ತಿದ್ದಾರೆ. ವೃತ್ತಿ ಬದುಕಿನಲ್ಲಿ ಬ್ಯುಸಿಯಾಗಿದ್ದ ಅನಿರುದ್ಧ್ ಅವರು ಧಾ ರಾವಾಹಿಯಿಂದ ಹೊರ ಬಳಿಕ ಟೆಂಪಲ್ ರನ್ ಮಾಡುತ್ತಿದ್ದು, ಸದ್ಯಕ್ಕೆ ಈ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ.