ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅನಿರುದ್ ಗೆ ಚಾಲೆಂಜ್ ಮಾಡಿದ ಜೊತೆ ಜೊತೆಯಲಿ ತಂಡ, ಹೊಸ ತಿರುವು

420
ಕನ್ನಡ ಕಿರುತೆರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಧಾರಾವಾಹಿಗಳಲ್ಲಿ ಒಂದು ಜೊತೆ ಜೊತೆಯಲಿ. ಆರ್ಯವರ್ಧನ್ ಪಾತ್ರವನ್ನು ನಿರ್ವಹಿಸುತ್ತಿದ್ದ ನಟ ಅನಿರುದ್ಧ್ ಧಾರಾವಾಹಿ ತಂಡದಿಂದ ಹೊರ ನಡೆದಿರುವುದು ದೊಡ್ಡ ಮಟ್ಟಿಗೆ ಸುದ್ದಿಯಾಗಿದೆ. ಧಾರಾವಾಹಿ ತಂಡದ ಜೊತೆಗೆ ಅನಿರುದ್ದ್  ಕಿರಿಕ್ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಕಳೆದ  ಕೆಲ ದಿನಗಳ ಹಿಂದೆ, ಚಿತ್ರೀಕರಣದ ವೇಳೆ ಸ್ಕ್ರಿಪ್ಟ್ ಬದಲಿಸಲು ಹೇಳಿದ ಅನಿರುದ್ಧ್ ಅವರ ಮಾತಿಗೆ ಧಾರಾವಾಹಿ ತಂಡ ಒಪ್ಪಿಗೆ ಸೂಚಿಸಿಲ್ಲ.. ಆಗ ಇದ್ದಕಿದ್ದ ಹಾಗೆ ಚಿತ್ರೀಕರಣದಿಂದ ಅನಿರುದ್ಧ್ ಹೊರ ಹೋಗಿದ್ದಾರೆ. ಆದರೆ ಈ ಹಿಂದೆಯೂ ಅನಿರುದ್ಧ್ ಹೀಗೆ ಮಾಡಿದ್ದು ಕಳೆದ ಒಂದು ವರ್ಷದಿಂದಲೂ ಇಬ್ಬರ ನಡುವೆ ವೈಮನಸ್ಸು ನಡೆದಿದೆ ಎನ್ನಲಾಗಿತ್ತು.
ಈ ಎಲ್ಲಾ ಕಾರಣದಿಂದ ಅನಿರುದ್ಧ್ ನಡವಳಿಕೆಯಿಂದ ಬೇಸತ್ತು ಧಾರಾವಾಹಿ ತಂಡ ಅನಿರುದ್ಧ್ ಅವರನ್ನು ಕೈ ಬಿಡುವ ನಿರ್ಧಾರ ಮಾಡಿದೆ ಎನ್ನಲಾಗಿತ್ತು. ಆದರೆ ಇದೀಗ ಈ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್ ಕಾದಿದೆ. ಹೌದು ಧಾರಾವಾಹಿ ತಂಡವು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಕೊಟ್ಟಿರುವ ಟ್ವಿಸ್ಟ್ ಬಗ್ಗೆ ತಿಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.ಅನಿರುದ್ಧ್ ಈ ಧಾರಾವಾಹಿಯಿಂದ ಹೊರ ನಡೆದ ಬಳಿಕ, ಆರೂರು ಜಗದೀಶ್ ಅವರು ಕಿರುತೆರೆ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದರು. ಅಲ್ಲಿ ಚರ್ಚೆ ನಡೆಸಿ ಅನಿರುದ್ಧ್ ಅವರನ್ನು ಜೊತೆಜೊತೆಯಲಿ ಮಾತ್ರವಲ್ಲ ಎರಡು ವರ್ಷಗಳ ಕಾಲ ಸಂಪೂರ್ಣ ಕಿರುತೆರೆಯಿಂದಲೇ ಅನಿರುದ್ಧ್ ಅವರನ್ನು ಹೊರಗೆ ಹಾಕಲಾಗಿದೆ ಎನ್ನಲಾಗಿತ್ತು. ಹೌದು, ಯಾವುದೇ ಧಾರಾವಾಹಿ ಯಾವುದೇ ಶೋ ದಲ್ಲಿ ಪಾಲ್ಗೊಳ್ಳುವಂತಿಲ್ಲ.
ಅದರ ಜೊತೆಗೆ ಅನಿರುದ್ಧ್ ಅವರು ಈ ಧಾರಾವಾಹಿಯಿಂದ ಹೊರ ನಡೆದರೂ ಕೂಡ ಚಿತ್ರೀಕರಣ  ಮಾತ್ರ ನಿಂತಿರಲಿಲ್ಲ. ಆದಾದ ಬಳಿಕ ಆರ್ಯವರ್ಧನ್ ಪಾತ್ರಕ್ಕೆ ಹೊಸ ನಟನನ್ನೂ ಸಹ ಆಯ್ಕೆ ಮಾಡಿಕೊಳ್ಳಲಾಗಿದೆ  ಎನ್ನುವ ಸುದ್ದಿ ಕೇಳಿ ಬಂದಿತ್ತು. ಆರ್ಯವರ್ಧನ್ ಪಾತ್ರಕ್ಕೆ ತಕ್ಕ ನಟನನ್ನು ಆಯ್ಕೆ ಮಾಡುವ ಹಿನ್ನಲೆಯಲ್ಲಿ  ಒಂದಷ್ಟು ನಟರುಗಳ ಪಟ್ಟಿಯನ್ನು ಸಿದ್ಧ ಪಡಿಸಿಕೊಂಡಿತ್ತು. ಅದರಲ್ಲಿ ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಜನರ ಪ್ರೇಕ್ಷಕ ವರ್ಗಕ್ಕೆ ಹತ್ತಿರವಾಗಿದ್ದ ಜೆಕೆಯವರನ್ನು ಫೈನಲ್ ಮಾಡಲಾಗಿದೆ ಎನ್ನಲಾಗಿತ್ತು. ಅಷ್ಟೇ ಅಲ್ಲದೇ ಅನೂಪ್ ಭಂಡಾರಿಯವರ ಹೆಸರು ಕೇಳಿ ಬಂದಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿದ್ದರು.
ಇನ್ನೊಂದೆಡೆ ಈ ಧಾರಾವಾಹಿ ತಂಡ ತೊರೆದ ನಂತರ  ಸುದ್ದಿಗೋಷ್ಠಿ ನಡೆಸಿ ನಟ ಅನಿರುದ್ಧ್‌ ಸ್ಪಷ್ಟನೆ ನೀಡಿದ್ದರು. ಮಾಧ್ಯಮದವರ ಜೊತೆಗೆ ಮಾತನಾಡಿದ್ದ ಅವರು, ‘ನಮ್ಮ ಮೇಲೆ ಬಂದಿರುವ ಎಲ್ಲ ಆರೋಪಗಳು ಸುಳ್ಳು ಎಂದಿದ್ದಾರೆ. ಹೌದು, ನಟ ಅನಿರುದ್ಧ್‌ , “ನನ್ನ ವಿರುದ್ಧ ಇಷ್ಟೆಲ್ಲಾ ಆರೋಪಗಳನ್ನ ಮಾಡುತ್ತಾರಲ್ಲ. ಅವರು ತಮ್ಮ ಮಕ್ಕಳ ತಲೆ ಮೇಲೆ ಕೈ ಇಟ್ಟು ಹೇಳಲಿ. ನಾನು ನನ್ನ ಮಕ್ಕಳ ತಲೆ ಮೇಲೆ ಕೈ ಇಟ್ಟು ಹೇಳುತ್ತೇನೆ. ನಾನು ಹೋರಾಡಿದ್ದು ನನ್ನ ಪಾತ್ರಕ್ಕಾಗಿ ಮಾತ್ರ. ಧಾರಾವಾಹಿ ಆರಂಭಕ್ಕೂ ಮೊದಲೇ ನಾನು ಹೇಳಿದ್ದೇನೆ. ಹಿಂದಿನ ದಿನವೇ ನನಗೆ ಸ್ಕ್ರಿಪ್ಟ್‌ ಕಳಿಸಿ ಎಂದು ಹೇಳಿದ್ದೇನೆ. ಅಲ್ಲಿ ನಮ್ಮ ಉದ್ದೇಶ ಧಾರಾವಾಹಿ ಗೆಲ್ಲಬೇಕಿರೋದು. ಕಳೆದ ಒಂದು ವರ್ಷದಿಂದ ಒತ್ತಡದಲ್ಲಿ ಕೆಲಸ ಮಾಡಿದ್ದೇನೆ.
ನಮ್ಮ ಕಲಾವಿದರೂ ಅತ್ತುಕೊಂಡು ಕೆಲಸ ಮಾಡಿದ್ದಾರೆ. ನನ್ನಿಂದ ಎಷ್ಟೋ ಸೀನ್‌ಗಳು ಅದ್ಭುತವಾಗಿ ಮೂಡಿಬಂದಿವೆ. ಬಂದಿಲ್ಲ ಎಂದು ಅವರ ಮಕ್ಕಳ ಮೇಲೆ ಅಣೆ ಮಾಡಲಿ. ಅವ್ರು ಹೇಳಿದ ಸಮಯಕ್ಕೆ ಬಂದಿದ್ದೇನೆ, ಹೋಗಿದ್ದೇನೆ. ಜೆಎಸ್‌ ಪ್ರೊಡಕ್ಷನ್‌ನಿಂದ ಒಂದು ಹನಿ ಕುಡಿದಿಲ್ಲ. 3 ವರ್ಷದಿಂದ ಪ್ರೊಡಕ್ಷನ್‌ನಿಂದ ಹನಿ ನೀರು ಕುಡಿದಿಲ್ಲ. ಇದು ದುರಂತ. ನಾನು ಯಾವುದೇ ರೀತಿಯ ಡಿಮ್ಯಾಂಡ್‌ ಮಾಡುತ್ತಿರಲಿಲ್ಲ. ಹೊರಗಡೆ ಹೋದಾಗ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ನನಗೆ ಸುಳ್ಳು ಹೇಳುವ ಅಗತ್ಯ ಇಲ್ಲ. ಇನ್ನು ಸೆಟ್‌ನಲ್ಲಿ ನಾನು ಯಾರಿಗೂ ಬೈದಿಲ್ಲ. ಸೆಟ್‌ನಲ್ಲಿ ಮೂರ್ಖರಂತೆ ಕೆಸಲ ಮಾಡಬಾರದು ಎಂದಿದ್ದೆ ಅಷ್ಟೇ,  ಎಂದಿದ್ದರು ನಟ ಅನಿರುದ್ಧ್.
ಆದರೆ ಇದೀಗ, ಆರ್ಯವರ್ಧನ್ ಪಾತ್ರವಿಲ್ಲದೇನೆ ಧಾರಾವಾಹಿಯನ್ನು ಮುಂದುವರೆಸುತ್ತಿದ್ದಾರೆ ಧಾರಾವಾಹಿ. ಹೊಸ ಪಾತ್ರವನ್ನು ಈ ಧಾರಾವಾಹಿಯಲ್ಲಿ ಸೃಷ್ಟಿಸಿದ್ದಾರೆ. ಈ ಹೊಸ ಪಾತ್ರವನ್ನು ಹರೀಶ್ ರಾಜ್ ಅವರು ನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ ಈ ಧಾರಾವಾಹಿಯ ಕಥೆಯೂ ಬೇರೊಂದು ಟ್ವಿಸ್ಟ್ ಪಡೆದುಕೊಂಡಿದೆ. ವಿಶ್ವಾಸ್ ದೇಸಾಯಿ ಎಂಬ ಹೊಸ ಪಾತ್ರವು ಸೃಷ್ಟಿಯಾಗಿದೆ. ಈ ಮೂಲಕ ಈ ಧಾರಾವಾಹಿಯಲ್ಲಿ ಒಂದಷ್ಟು ಬದಲಾವಣೆಯಾಗಿದೆ. ಪ್ರೇಕ್ಷಕ ವರ್ಗ ಈ ಧಾರಾವಾಹಿಯನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಕು.