ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಾಧಿಕಾ ಪಂಡಿತ್ ತುಳಸಿ ಪೂಜೆ ಮಾಡುವ ರೀತಿ ನೋಡಿ…ಚಿಂದಿ ವಿಡಿಯೋ

148
Join WhatsApp
Google News
Join Telegram
Join Instagram

ಕನ್ನಡದ ಚಿತ್ರರಂಗದ (KFI) ಸಿಂಡ್ರೆಲಾ ಎಂದೇ ಖ್ಯಾತಿಯಾಗಿರುವ ನಟಿ ಎಂದರೆ ರಾಧಿಕಾ ಪಂಡಿತ್ (Radhika Pandith) ರವರು. ಮೊದಮೊದಲು ಧಾರಾವಾಹಿಗಳಲ್ಲಿ (Serials) ನಟಿಸುತ್ತಾ ಜನಪ್ರಿಯತೆ ಪಡೆದುಕೊಂಡ ಇವರು ಬಳಿಕ 2008 ರಲ್ಲಿ ಮೊಗ್ಗಿನ ಮನಸ್ಸು (Moggina Manassu) ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಅಲ್ಲದೇ ತಾವು ಅಭಿನಯಿಸಿದ ಮೊದಲ ಸಿನಿಮಾದಲ್ಲೇ ಫಿಲ್ಮ್ ಫೇರ್ (Filim Fare) ಪ್ರಶಸ್ತಿ ಕೂಡ ಪಡೆದ ಇವರು ಚಿತ್ರರಂಗದ ಪ್ರಿನ್ಸೆಸ್ (Princess) ಆಗಿ ಕರ್ನಾಟಕಾದ್ಯಂತ ಜನಪ್ರಿಯತೆ ಪಡೆದುಕೊಳ್ಳುತ್ತಾರೆ.

ಹೌದು ದಶಕಗಳ ಕಾಲ ಚಿತ್ರರಂಗದ ಯಾವುದೇ ಕಪ್ಪು ಚುಕ್ಕೆಯನ್ನು ಕೂಡ ಮೈ ಮೇಲೆ ಎಳೆದುಕೊಳ್ಳದೇ ಒಳ್ಳೆಯ ಪಾತ್ರಗಳಲ್ಲಿ ನಟಿಸಿ ಯಶಸ್ಸು ಪ್ರಶಸ್ತಿ (Award) ಹಾಗೂ ಜನಪ್ರಿಯತೆ ಗಳಿಸಿದ ನಂತರ 2016 ರ ಅಂತ್ಯದಲ್ಲಿ ರಾಕಿಂಗ್ ಸ್ಟಾರ್ ಯಶ್ (Yash)ಅವರೊಡನೆ ವಿವಾಹವಾದರು. ಇನ್ನು ಮದುವೆಯಾದ ಬಳಿಕ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿ ಬಹುತೇಕ ಎಲ್ಲಾ ಸಮಯವನ್ನು ಕುಟುಂಬಕ್ಕಾಗಿ ನೀಡಲು ಶುರು ಮಾಡಿದ್ದಾರೆ.

ಇನ್ನು ನಟಿ ರಾಧಿಕಾ ಪಂಡಿತ್ ರವರ ತಾಯಿ ಮನೆ ಇರುವುದು ಗೋವಾದಲ್ಲಿ (Goa) . ಆದರೆ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲೇಯೇ(Banglore) ನೆಲೆಸಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಅವರ ತಂದೆಯ ಹೆಸರು ಅರುಣ್ ಕುಮಾರ್ ಮತ್ತು ತಾಯಿ ಪುಷ್ಪ. ಈ ಹಿಂದೆ ಯಶ್ ಅವರ ತಂದೆ ಬಸ್ ಚಾಲಕರಾಗಿದ್ದು (Bus Driver) ಇದೀಗ ನಿವೃತ್ತಿಯಾಗಿದ್ದಾರೆ. ಯಶ್ ಮತ್ತು ರಾಧಿಕಾ ನಡುವೆ ಪ್ರೀತಿ ಶುರುವಾದಾಗ ಈ ವಿಷಯವನ್ನು ಯಶ್ ಮೊದಲು ತಿಳಿಸಿದ್ದು ತಮ್ಮ ತಾಯಿಗೆ. ಇನ್ನು ರಾಧಿಕಾ ಫೋಟೋ ನೋಡಿ ಗ್ರೀನ್ ಸಿಗ್ನಲ್ ನೀಡಿದ್ದರಂತೆ ತಾಯಿ ಪುಷ್ಪ.

ಇನ್ನು ಮನೆಯಲ್ಲಿ ಅತ್ತೆ ಸೊಸೆ ಇಬ್ಬರು ಸಹ ಬಹಳ ಅನ್ಯೋನ್ಯವಾಗಿದ್ದು ಅದರಲ್ಲಿಯೂ ಇಬ್ಬರು ಮಕ್ಕಳು ಜನಿಸಿದ ಮೇಲಂತು ತಮ್ಮ ಸಂಪೂರ್ಣ ಸಮಯವನ್ನು ಮಕ್ಕಳಿಗಾಗಿ ಮೀಸಲಿಟ್ಟಿರುವ ರಾಧಿಕಾರಿ ಅವರಿಗೆ ಒಂದು ದಿನವೂ ಸಹ ಅಡುಗೆ ಕೆಲಸ ಮಾಡಬೇಕು ಎಂದು ಅತ್ತೆ ಪುಷ್ಪ ಹೇಳುವುದಿಲ್ಲವಂತೆ. ಆದರೆ ಸ್ವತಃ ರಾಧಿಕಾ ಅವರೇ ಅತ್ತೆ ಅಡುಗೆ ಮಾಡುವಾಗ ತಮ್ಮಿಂದ ಆದಷ್ಟು ಸಹಾಯ ಮಾಡುತ್ತಿದ್ದು ಮಕ್ಕಳ ಪಾಲನೆ ಪೋಷಣೆ ಬಗ್ಗೆ ರಾಧಿಕಾರಿಗೆ ಸಲಹೆ ನೀಡುತ್ತಾರೆ ಯಶ್ ತಾಯಿ ಪುಷ್ಪ. ಜೊತೆಗೆ ಮಕ್ಕಳಿಗಾಗಿ ವಿಶೇಷವಾದ ತಿಂಡಿ ತಿನಿಸುಗಳನ್ನು ಹೇಗೆ ಮಾಡುವುದೆಂದು ಹೇಳಿಕೊಟ್ಟಿದ್ದಾರಂತೆ. ಮಕ್ಕಳಿಗೆ ಬೇಕಾದ ದಿನನಿತ್ಯದ ಆಹಾರವನ್ನು ಸಹ ಅವರೇ ತಯಾರಿಸುತ್ತಾರೆ ಎಂದು ರಾಧಿಕಾ ಹೇಳಿಕೊಂಡಿದ್ದಾರೆ.

ಇನ್ನು ಅತ್ತೆಯ ಜೊತೆ ಮಾತ್ರವಲ್ಲದೆ ಮಾವ ನಾದಿನಿ ಹಾಗೂ ಅವರ ಮಕ್ಕಳು ಎಲ್ಲರ ಜೊತೆಯಲ್ಲೂ ಕೂಡ ರಾಧಿಲ ಬಹಳ ಅನ್ಯೋನ್ಯವಾಗಿದ್ದು ಒಟ್ಟಿನಲ್ಲಿ ಯಶ್ ಅವರ ಕುಟುಂಬಕ್ಕೆ ರಾಧಿಕಾ ಪಂಡಿತ್ ಒಳ್ಳೆಯ ಸೊಸೆಯಾಗಿ ಮಕ್ಕಳಿಗೆ ಒಳ್ಳೆಯ ತಾಯಿಯಾಗಿ ಯಶ್ ಅವರಿಗೆ ಸಪೋರ್ಟ್ ಮಾಡುವ ಪತ್ನಿಯಾಗಿ ಸಂತೋಷದ ಜೀವನ ಸಾಗಿಸುತ್ತಿದ್ದಾರೆ. ಯಶ್ ಅವರ ತಾಯಿ ಪುಷ್ಪ ಅವರ ಜೊತೆ ಬಹಳ ಪ್ರೀತಿಯಿಂದ ರಾಧಿಕಾ ಪಂಡಿತ್ ಅವರು ಎಲ್ಲಾ ಅನುಸರಿಸಿಕೊಂಡು ಹೋಗುತ್ತಿದ್ದು ಹಬ್ಬ ಹರಿದಿನಗಳಲ್ಲಿ ರಾಧಿಕಾ ಪಂಡಿತ್ ಅವರೇ ದೇವರೇ ಪೂಜೆ ಮಾಡಿ ಮನೆ ಮಂದಿಗೆಲ್ಲಾ ಅಡುಗೆ ಮಾಡುತ್ತಾರೆ. ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋದಲ್ಲಿ ರಾಧಿಕಾ ಅತ್ತೆ ಮನೆಯಲ್ಲಿ ಹೇಗಿರುತ್ತಾರೆ ಎಂದು ನೋಡಬಹುದು.