ಒಂದರ ಹಿಂದೆ ಸರತಿ ಸಾಲಿನಲ್ಲಿ ಸಾಗಿ ಬರುವ ಬೈಕುಗಳು ಹಲಗೆ ಮೇಲಕ್ಕೆ ಹತ್ತಿ ಆಕಾಶಕ್ಕೆ ನೆಗೆದು ಮತ್ತೆ ದೂರದಲ್ಲಿ ಮಣ್ಣ ದಿಬ್ಬದ ಮೇಲೆ ಬಿದ್ದು ಕ್ಯಾರೇ ಇಲ್ಲದಂತೆ ಮತ್ತೆ ಸಾಗಿ ಮತ್ತೆ ಚಿಮ್ಮುವ ಬೈಕ್ ಸಾಹಸಗಳನ್ನು ಹಲವಾರು ಇಂಗ್ಲಿಷ್ ಸಿನಿಮಾ ಹಾಗೂ ಮಾದ್ಯಮಗಳಲ್ಲಿ ನೋಡುತ್ತಲೆ ಇರುತ್ತೇವೆ.
ಅಮೆರಿಕ ಸೇರಿದಂತೆ ಹಲವಾರು ದೇಶದಲ್ಲಿ ಈ ಆಕ್ಷನ್ ಸ್ಪೋರ್ಟ್ಸ್ ಬಹಳ ವೇಗವಾಗಿ ಜನಪ್ರಿಯಗೊಳ್ಳುತ್ತಿರುವ ಕ್ರೀಡೆಯಾಗಿದ್ದು, ಎಲ್ಲಾ ವಯೋಮಾನದವರಿಗೂ ಇಷ್ಟವಾಗುವಂತಹ ಕ್ರೀಡೆ ಇದಾಗಿದೆ ಎಂದರೆ ತಪ್ಪಾಗಲಾರದು. ಹೌದು ದ್ವಿ ಚಕ್ರ ವಾಹನಗಳ ಎಂಜಿನ್ ಸದ್ದು, ಬಹಳ ವೇಗವಾಗಿ ಸಾಗುವುದು, ಓರೆ ಹಲಗೆಗಳ ಮೂಲಕ ಆಕಾಶದೆತ್ತ ಜಿಗಿಯುವುದು, ಬೆಂಕಿ ಸುರಳಿಗಳ ನಡುವೆ ದ್ವಿಚಕ್ರ ವಾಹನ ಸವಾರಿ ಹೋಗೆ ಅನಕೇ ಆಕರ್ಷಣೆಯ ಸ್ಟಂಟ್ ಗಳು ನೋಡುಗರನ್ನು ತುದಿಗಾಲಿನಲ್ಲಿ ನಿಂತುಕೊಳ್ಳುವಂತೆ ಮಾಡುತ್ತದೆ.
ಇಂತಹ ಮೈ ಜುಂ ಎನ್ನಿಸಿ, ಬೆನ್ನ ಹುರಿಯಲ್ಲಿ ನಡುಕ ಹುಟ್ಟಿಸುವಂತಹ ಅಮೋಘ, ಅತ್ಯಾಕರ್ಷಕ ಬೈಕ್ ಸಾಹಸವನ್ನು ಕಣ್ತುಂಬಿಕೊಳ್ಳುವ ಅವಕಾಶ ನಮ್ಮ ದೇಶದ ಜನರಿಗೂ ಕೂಡ ದೊರಕಿದೆ. ದೆಹಲಿಯ ರಾಜಪಥದಲ್ಲಿ ಜಗತ್ತಿನ ಖ್ಯಾತ ಎಕ್ಸ್ ಫೈಟರ್ಸ್ ತಂಡವು ಅನೇಕ ಬಾರಿ ಬೈಕ್ ಸಾಹಸ ಪ್ರದರ್ಶನ ನಡೆಸಿ ಜನರಿಗೆ ಮನರಂಜನೆ ನೀಡಿತ್ತು. ಅದೇ ರೀತಿಯ ವಿಡಿಯೋ ನೋಡಿ.