ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಟೈಗರ್ ಪ್ರಭಾಕರ್ ಮಿಮಿಕ್ರಿ ಮಾಡಿದ ರೂಪೇಶ್ ರಾಜಣ್ಣ..ಚಿಂದಿ ವಿಡಿಯೋ

2,507

Rupesh Rajanna | Tiger Prabhakar | Mari Tiger Vinod Prabhakar: ಎಲ್ಲಾ ಹಿರಿಯ ಅಭ್ಯರ್ಥಿಗಳ ನಡುವೆ ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಕನ್ನಡ ಸೀಸನ್ 9 ರ ಗ್ರ್ಯಾಂಡ್ ಫಿನಾಲೆಗೆ ಬಂದ ಏಕೈಕ ನವೀನ ಅಂದರೆ ಅದು ರೂಪೇಶ್ ರಾಜಣ್ಣ. ಹೌದು ಹೋರಾಟದ ಮನೋಭಾವದಿಂದಲೇ ಎಲ್ಲರ ಗಮನಸೆಳೆದಿದ್ದರು ರೂಪೇಶ್‌ ರಾಜಣ್ಣ.

ಬಿಗ್ ಬಾಸ್ ಮನೆಯೊಳಗೆ ವಿವಾದಗಳು ಮತ್ತು ಜಗಳಗಳ ಪಾಲಿಗೆ ಹೆಸರುವಾಸಿಯಾಗಿದ್ದು ಗಾಜಿನಮನೆಯೊಳಗಿನ ಅನೇಕ ಘಟನೆಗಳ ಬಗ್ಗೆ ಅವರು ಯಾವಾಗಲೂ ಕೂಡ ದನಿಯಾಗಿದ್ದಾರೆ ಮತ್ತು ಮನೆಯವರೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಅದರಲ್ಲೂ ಪ್ರಶಾಂತ್ ಸಂಬರಗಿ ಅವರೊಂದಿಗಿನ ಅವರ ಭಿನ್ನಾಭಿಪ್ರಾಯವನ್ನು ಎಂದಿಗೂ ಕೂಡ ಮರೆಯಲು ಅಸಾಧ್ಯ. ಟಾಸ್ಕ್‌ ವಿಚಾರದಲ್ಲೂ ಉತ್ತಮ ಆಟ ಪ್ರದರ್ಶಿಸಿದ್ದು ಆಕ್ರೋಶ ಭರಿತ ರೂಪೇಶ್‌ ರಾಜಣ್ಣ ಅವರಿಗಿಂತ ಮುಗ್ಧ ಮನಸ್ಸಿನ ಅವರ ವ್ಯಕ್ತಿತ್ವ ಎಲ್ಲರಿಗೂ ಬಲು ಇಷ್ಟವಾಗಿತ್ತು ಎನ್ನಬಹುದು.

ಮೊದ ಮೊದಲಿಗೆ ಜಗಳದಿಂದಲೇ ಹೈಲೈಟ್‌ ಆಗುತ್ತಿದ್ದ ರೂಪೇಶ್‌ ರಾಜಣ್ಣ ರವರು ತದ ನಂತರ ಆಟದ ವರಸೆ ಬದಲಿಸಿಕೊಂಡರು. ಹೌದು ಎವರ್‌ಗ್ರೀನ್ ಸಾಂಗ್‌ಗಳನ್ನ ಸೊಗಸಾಗಿ ಹಾಡುವ ಮೂಲಕವಾಗಿ ಜನರ ಹೃದಯ ಕದ್ದರು. ಇವರ ಕಂಠ ಸಿರಿಗೆ ಇತರ ಸ್ಪರ್ಧಿಗಳು ಸಹ ಫಿದಾ ಆದರು. ಕನ್ನಡ ನಟರುಗಳ ಮಿಮಿಕ್ರಿ ಮಾಡುವ ಮೂಲಕ ಮನರಂಜನೆಯಲ್ಲೂ ರೂಪೇಶ್‌ ರಾಜಣ್ಣ ಎಲ್ಲರ ಮನಸೆಳೆದರು.

ತಪ್ಪು ಎನಿಸಿದ ಸಂದರ್ಭದಲ್ಲಿ ಅದನ್ನು ವಾದ ಮಾಡುವುದರಲ್ಲಿ ರೂಪೇಶ್ ರಾಜಣ್ಣ ನಂಬರ್ 1. ಪ್ರಶಾಂತ್ ಸಂಬರಗಿ ದೀಪಿಕಾ ದಾಸ್ ದಿವ್ಯಾ ಉರುಡುಗ ಆರ್ಯವರ್ಧನ್ ಗುರೂಜಿ ರೂಪೇಶ್ ಶೆಟ್ಟಿ ರಾಕೇಶ್ ಅಡಿಗ ಅನುಪಮಾ ಗೌಡ ಸೇರಿದಂರೆ ಬಿಗ್‌ ಬಾಸ್‌ ಮನೆಯಲ್ಲಿದ್ದ ಬಹುತೇಕ ಎಲ್ಲರ ಜೊತೆ ರೂಪೇಶ್ ರಾಜಣ್ಣ ಒಂದಲ್ಲ ಒಂದು ಸಂದರ್ಭದಲ್ಲಿ ವಾಗ್ವಾದಕ್ಕೆ ಇಳಿದಿದ್ದರು.

ಇನ್ನು ಇದೇ ಕಾರಣಕ್ಕೆ ಮೂರು ಬಾರಿ ಕಳಪೆ ಪಟ್ಟ ಪಡೆದು ಜೈಲಿಗೆ ಹೋಗಿದ್ದರು. ಕ್ಯಾಪ್ಟನ್ ಆಗಿದ್ದರು. ಅತ್ಯುತ್ತಮ ಕೂಡ ಪಡೆದಿದ್ದರು ಕೊನೆಯದಾಗಿ ಟಾಪ್‌ 5 ಕಂಟೆಸ್ಟಂಟ್‌ಗಳಲ್ಲಿ ಒಬ್ಬರಾದರು.
ಆದರೆ ಅವರು ತಮ್ಮ ಆಟದ ವರಸೆ ಬದಲಿಸುವ ಹೊತ್ತಿಗೆ ಅನೇಕ ಪ್ರೇಕ್ಷಕರಲ್ಲಿ ಅವರ ಬಗ್ಗೆ ಒಂದು ಅಭಿಪ್ರಾಯ ಮೂಡಿ ಆಗಿತ್ತು. ನೇರ ನುಡಿ ನಿಷ್ಠುರ ನಿರ್ಧಾರ ಕಠಿಣ ನಿಲುವುಗಳು ಕೆಲವರಿಗೆ ಇಷ್ಟವಾದರೆ ಮತ್ತೆ ಕೆಲವರಿಗೆ ಇಷ್ಟವಾಗಲಿಲ್ಲ. ಇದೇ ಎಲ್ಲೋ ಒಂದು ಕಡೆ ಅವರು ಮೂರನೇ ರನ್ನರ್‌ ಅಪ್‌ ಆಗಲು ಕಾರಣವಾಯಿತು ಎಂಬುದು ಹಲವರ ಅಭಿಪ್ರಾಯವಾಗಿದೆ.

ಹಾಡು ಬರೆಯುವ ಸೊಗಸಾಗಿ ಸಾಂಗ್‌ ಹೇಳುವ ತಮ್ಮ ಎಂಟರ್‌ಟೈನ್‌ಮೆಂಟ್‌ ವ್ಯಕ್ತಿತ್ವವನ್ನು ರೂಪೇಶ್‌ ರಾಜಣ್ಣ ಮೊದಲೇ ತೋರಿಸಿದ್ದರೆ ಅವರ ಆಟ ಇನ್ನಷ್ಟು ಮೆರಗು ಪಡೆಯುತ್ತಿತ್ತು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಅನೇಕರು ರೂಪೇಶ್‌ ರಾಜಣ್ಣ ಅವರ ಜಗಳ ಮಾಡುವ ಸ್ವಭಾವ ಬಿಟ್ಟು ಮುಗ್ಧ ಮಗುವಿನ ಮನಸ್ಸನ್ನು ಅನೇಕರು ಇಷ್ಟಪಟ್ಟಿದ್ದರು. ಇದನ್ನು ಕೆಲ ವಾರಗಳ ಬಳಿಕ ಅರಿತ ರೂಪೇಶ್‌ ರಾಜಣ್ಣ ಆ ನಂತರ ಎವರ್‌ಗ್ರೀನ್ ಸಾಂಗ್‌ಗಳನ್ನ ಸೊಗಸಾಗಿ ಹಾಡುವ ಮೂಲಕ ಜನರ ಹೃದಯ ಕದ್ದರು.

ಇವರ ಕಂಠ ಸಿರಿಗೆ ಇತರ ಸ್ಪರ್ಧಿಗಳು ಸಹ ಫಿದಾ ಆದರು. ಕನ್ನಡ ನಟರುಗಳ ಮಿಮಿಕ್ರಿ ಮಾಡುವ ಮೂಲಕ ಮನರಂಜನೆಯಲ್ಲೂ ರೂಪೇಶ್‌ ರಾಜಣ್ಣ ಎಲ್ಲರ ಮನಸೆಳೆದರು. ಸದ್ಯ ಇದೀಗ ರಾಜಣ್ಣ ನವರ ಹಳೆಯ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿದ್ದು ಈ ಹಿಂದೆ ವಿನೋದ್ ಪ್ರಭಾಕರ್ ರವರ ಸಿನಿಮಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಜಣ್ಣ ನಾನು ನಿಮ್ಮ ತಂದೆಯ ದೊಡ್ಡ ಫ್ಯಾನ್ ಎಂದು ಹೇಳಿ ಪ್ರಭಾಕರ್ ಧ್ವನಿಯಲ್ಲಿ ಹೇಗೆ ಮಾತನಾಡಿದ್ದಾರೆ ನೀವೆ ನೋಡಿ.